ಭಾರತ ಕ್ರಿಕೆಟ್ ತಂಡದ ಆಟಗಾರರು ಸುಮಾರು ಎಂಟು ತಿಂಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಡ್ನಿಯ ಒಲಂಪಿಕ್ ಪಾರ್ಕ್ ಹೊಟೇಲ್ನಲ್ಲಿ ಟೀಂ ಇಂಡಿಯಾದ ಆಟಗಾರರು ಕ್ವಾರಂಟೀನ್ನಲ್ಲಿದ್ದು, ದಿ ನ್ಯೂ ಸೌತ್ ವೆಲ್ಷ್ ಸರ್ಕಾರ ಕ್ವಾರಂಟಿನ್ ಅವಧಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕೆಲ ಆಟಗಾರರು ಜಿಮ್ನಲ್ಲಿ ಬೆವರು ಹರಿಸಿದರೆ, ಇನ್ನೂ ಕೆಲವರು ಬ್ಲ್ಯಾಕ್ಟೌನ್ ಇಂಟರ್ನ್ಯಾಶನಲ್ ನ್ಪೋರ್ಟ್ಸ್ ಪಾರ್ಕ್ನಲ್ಲಿ ಅಭ್ಯಾಸ ನಡೆಸಿದರು. ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ನಾಳೆ ಶುಕ್ರವಾರದಿಂದ ಆರಂಭವಾಗಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮೊದಲ ಏಕದಿನ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕೊಹ್ಲಿ ಪಡೆ ಕೋವಿಡ್ ನಡುವೆ ಆಡುತ್ತಿರುವ ಮೊದಲ ಅಂತರಾಷ್ಟ್ರೀಯ ಪಂದ್ಯ ಕೂಡ ಇದಾಗಿದೆ. ಜಸ್ಪ್ರೀತ್ ಬುಮ್ರಾ ಜೊತೆ ಬೌಲಿಂಗ್ ಟಿಪ್ಸ್ ಪಡೆಯುತ್ತಿರುವ ಕಾರ್ತಿಕ್ ತ್ಯಾಗಿ. ಹಾರ್ದಿಕ್ ಪಾಂಡ್ಯ. ಜಿಮ್ನಲ್ಲಿ ಬೆವರು ಹಿರುಸುತ್ತಿರುವ ಟೀಂ ಇಂಡಿಯಾ ಆಟಗಾರರು. ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನವೆಂಬರ್ 27 ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. 2ನೇ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು ನ. 29ಕ್ಕೆ ಏರ್ಪಡಿಸಲಾಗಿದೆ. ಡಿ. 2 ರಂದು ಅಂತಿಮ ಮೂರನೇ ಏಕದಿನ ಪಂದ್ಯ ಕ್ಯಾನ್ಬೆರಾದಲ್ಲಿ ನಡೆಯಲಿದೆ. ಎಲ್ಲಾ ಏಕದಿನ ಪಂದ್ಯ ಭಾರತದ ಕಾಲಮಾನದ ಪ್ರಕಾರ ಬೆಳಗ್ಗೆ 9:10ಕ್ಕೆ ಆರಂಭವಾಗಲಿದೆ.