ತಂಡ ಯಾವುದೇ ಇರಲಿ...ವಿಕೆಟ್ ಸಿಕ್ಕರೆ ಸಾಕು ಮೈದಾನದ ಪಿಚ್ ತುದಿಯಿಂದ ಬೌಂಡರಿರೆಗೆ ಓಡಾಡಿ ಸಂಭ್ರಮಿಸುವ ಮುಖ ನೆನಪಾಗಿ ಮೊಗದಲ್ಲೊಂದು ನಗು ಮಿನುಗುತ್ತಲ್ವಾ?
2/ 21
ಅದುವೇ ಇಮ್ರಾನ್ ತಾಹಿರ್. ದಕ್ಷಿಣ ಆಫ್ರಿಕಾ ತಂಡದ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರಾಗಿರುವ ಇಮ್ರಾನ್ ಅವರಿಗೆ ಶುಕ್ರವಾರ 41ನೇ ಹಟ್ಟುಹಬ್ಬದ ಸಂಭ್ರಮ.
3/ 21
1979, ಮಾರ್ಚ್ 27 ರಂದು ಪಾಕಿಸ್ತಾನದ ಲಾಹೋರ್ನಲ್ಲಿ ಜನಸಿದ ಇಮ್ರಾನ್ ಕಥೆಯೇ ವಿಭಿನ್ನ.
4/ 21
ಇಮ್ರಾನ್ ತಾಹಿರ್ ಮನೆಯ ಹಿರಿಯ ಮಗನಾಗಿದ್ದರಿಂದ, ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಮಾಡಬೇಕಾಗಿತ್ತು. 16 ನೇ ವಯಸ್ಸಿನಲ್ಲಿ ಅವರು ಮಾಲ್ವೊಂದರಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡರು.
5/ 21
ಅದಾಗಲೇ ಕ್ರಿಕೆಟ್ ಅನ್ನು ಮೈಗೂಡಿಸಿಕೊಂಡಿದ್ದ ತಾಹಿರ್ಗೆ ಕೆಲಸಕ್ಕಿಂತ ಹೆಚ್ಚು ಆಟದ್ದೇ ಚಿಂತೆಯಾಗಿತ್ತು. ಹಾಗೂ ಹೀಗೂ ಸಮಯ ಹೊಂದಿಸಿ ಅಭ್ಯಾಸ ನಡೆಸಿ ಪಾಕಿಸ್ತಾನ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ತಾಹಿರ್ ಯಶಸ್ವಿಯಾದರು.
6/ 21
ಪಾಕಿಸ್ತಾನ ಅಂಡರ್ -19 ತಂಡದಲ್ಲಿ ಆಯ್ಕೆಯಾಗುತ್ತಿದ್ದಂತೆ ಇಮ್ರಾನ್ ತಾಹಿರ್ ಅವರ ಅದೃಷ್ಟ ಬದಲಾಯಿತು. ಅದರ ಬೆನ್ನಲ್ಲೇ ಪಾಕಿಸ್ತಾನ-ಎ ತಂಡದಲ್ಲಿಯೂ ಸ್ಥಾನ ಪಡೆದರು.
7/ 21
1998 ರಲ್ಲಿ ಪಾಕಿಸ್ತಾನ ಪರ ಅಂಡರ್-19 ವಿಶ್ವಕಪ್ನಲ್ಲಿ ಇಮ್ರಾನ್ ತಾಹಿರ್ ಆಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ವಿಶ್ವಕಪ್ ವೇಳೆ ಭಾರತೀಯ ಮೂಲದ ಸುಮಯ್ಯ ದಿಲ್ದಾರ್ ಎಂಬ ಯುವತಿ ಪರಿಚಿತರಾದರು.
8/ 21
ಈ ಪರಿಚಯ ಪ್ರೀತಿ ಪ್ರೇಮವಾಗಲು ತುಂಬಾ ದಿನಗಳು ಬೇಕಾಗಿರಲಿಲ್ಲ. ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದ ಪ್ರೇಯಸಿಗಾಗಿ ಇಮ್ರಾನ್ ತಾಹಿರ್ ದಕ್ಷಿಣ ಆಫ್ರಿಕಾದಲ್ಲೇ ಕ್ರಿಕೆಟ್ ಮುಂದುವರೆಸಲು ನಿರ್ಧರಿಸಿದರು.
9/ 21
2006 ರಲ್ಲಿ ಸುಮಯ್ಯ ದಿಲ್ದಾರ್ ಅವರನ್ನು ವಿವಾಹವಾದ ಬಳಿಕ ಇಮ್ರಾನ್ ತಾಹಿರ್ ಅವರಿಗೆ ದಕ್ಷಿಣ ಆಫ್ರಿಕಾ ಪೌರತ್ವ ಲಭಿಸಿತು. ಅಲ್ಲಿಂದ ಬೇರೊಂದು ದೇಶದಲ್ಲಿ ಇಮ್ರಾನ್ ಅವರ ಕ್ರಿಕೆಟ್ ಜರ್ನಿ ಶುರುವಾಯಿತು.
10/ 21
ದಕ್ಷಿಣ ಆಫ್ರಿಕಾದಲ್ಲಿ ಡಾಲ್ಫಿನ್ಸ್ ತಂಡ ಪರ ಆಡಿದ ಇಮ್ರಾನ್ ಆ ಬಳಿಕ ಟೈಟಾನ್ಸ್ ಜೊತೆ ಕಣಕ್ಕಿಳಿದರು. ಇದೇ ವೇಳೆ ಸೌತ್ ಆಫ್ರಿಕಾ ತಂಡಕ್ಕೂ ಸ್ಪಿನ್ನರ್ ಒಬ್ಬರ ಅವಶ್ಯಕತೆಯಿತ್ತು.
11/ 21
ದಕ್ಷಿಣ ಆಫ್ರಿಕಾದಲ್ಲಿ ಡಾಲ್ಫಿನ್ಸ್ ತಂಡ ಪರ ಆಡಿದ ಇಮ್ರಾನ್ ತಾಹಿಲ್ ಆ ಬಳಿಕ ಟೈಟಾನ್ಸ್ ಜೊತೆ ಕಣಕ್ಕಿಳಿದರು. ಇದೇ ವೇಳೆ ಸೌತ್ ಆಫ್ರಿಕಾ ತಂಡಕ್ಕೂ ಸ್ಪಿನ್ನರ್ ಒಬ್ಬರ ಅವಶ್ಯಕತೆಯಿತ್ತು.
12/ 21
ಇಮ್ರಾನ್ ತಾಹಿರ್ ಅದೃಷ್ಟ ಖುಲಾಯಿಸಿತು. 2011ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆಯ್ಕೆಯಾದರು. ಅಚ್ಚರಿ ವಿಷಯವೆಂದರೆ ಈ ವೇಳೆ ತಾಹಿರ್ ವಯಸ್ಸು 32.
13/ 21
ಎಲ್ಲರೂ ನಿವೃತ್ತಿಯಾಗುವ ವಯಸ್ಸಿನಲ್ಲಿ ಇಮ್ರಾನ್ ತಾಹಿರ್ ಅಂತರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದರು. ಆದರೆ ತನ್ನ ಸ್ಪಿನ್ ಮೋಡಿಯ ಮುಂದೆ ಬ್ಯಾಟ್ಸ್ಮನ್ಗಳನ್ನು ತಡಕಾಡುವಂತೆ ಮಾಡುವಲ್ಲಿ ಯಶಸ್ವಿಯಾದರು.
14/ 21
ವಯಸ್ಸು ಎಂಬುದು ಕೇವಲ ನಂಬರ್. ಪರಿಶ್ರಮ ಮತ್ತು ಪ್ರತಿಭೆ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಸಾರಿದರು. ದಕ್ಷಿಣ ಆಫ್ರಿಕಾ ಪರ ಟೆಸ್ಟ್, ಏಕದಿನ, ಟಿ20 ಪಂದ್ಯಗಳಿಗೆ ಆಯ್ಕೆಯಾಗುವ ಮೂಲಕ ಮೋಡಿ ಮಾಡಲಾರಂಭಿಸಿದರು.
15/ 21
ಇತ್ತ ವಿಭಿನ್ನ ಸೆಲೆಬ್ರೇಷನ್, ಸ್ಪಿನ್ ಜಾದೂ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಿತು. ಅದರಲ್ಲೂ 2014 ರಲ್ಲಿ ಐಪಿಎಲ್ ಅಂಗಳಕ್ಕೆ ಕಾಲಿಟ್ಟ ಮೇಲೆ ಇಮ್ರಾನ್ ತಾಹಿರ್ ಹಿಂತಿರುಗಿ ನೋಡಲಿಲ್ಲ.
16/ 21
ವರ್ಷ ಕಳೆದಂತೆ ಮತ್ತಷ್ಟು ಚುರುಕು, ಮಗದಷ್ಟು ಸ್ಪಿನ್ ಮೋಡಿ ಮೂಲಕ ಫ್ರಾಂಚೈಸಿಗಳ ಗಮನ ಸೆಳೆದರು. ಚೊಚ್ಚಲ ಐಪಿಎಲ್ನಲ್ಲಿ ತಾಹಿರ್ 125 ಎಸೆತಗಳಲ್ಲಿ ಬಿಟ್ಟು ಕೊಟ್ಟಿದ್ದು ಕೇವಲ 171 ರನ್. ಹಾಗೆಯೇ 9 ವಿಕೆಟ್ ಕಿತ್ತರು.
17/ 21
ಹೊಡಿಬಡಿ ಆಟವಾಗಿರುವ ಐಪಿಎಲ್ನಲ್ಲಿ ಸ್ಪಿನ್ ಬೌಲರ್ ಗಮನ ಸೆಳೆಯಲು ಇಷ್ಟು ಸಾಕಾಯಿತು. 2 ವರ್ಷ ಡೆಲ್ಲಿ ಡೇರ್ ಡೇವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಪರ ಕಣಕ್ಕಿಳಿದ ಇಮ್ರಾನ್ ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು.
18/ 21
ಇದೀಗ ಧೋನಿ ಪಡೆ ಪ್ರಮುಖ ಅಸ್ತ್ರಗಳಲ್ಲಿ ಇಮ್ರಾನ್ ತಾಹಿರ್ ಕೂಡ ಒಬ್ಬರು. ಕಳೆದ ಸೀಸನ್ನಲ್ಲಿ 17 ಪಂದ್ಯಗಳನ್ನಾಡಿದ ಇಮ್ರಾನ್ 386 ಎಸೆತ ಬೌಲ್ ಮಾಡಿದ್ದಾರೆ. ಇದರಲ್ಲಿ 26 ವಿಕೆಟ್ ಉರುಳಿಸಿ ನೀಡಿದ್ದು ಕೇವಲ 431 ರನ್. ಅಂದರೆ ಪ್ರತಿ ಓವರ್ಗೆ 6.69 ರನ್ ಅಷ್ಟೇ.
19/ 21
ಐಪಿಎಲ್ನಲ್ಲಿ ಮಿಂಚಿದ್ದೇ ತಡ ತಾಹಿರ್ ಅವರಿಗೆ ವಿಶ್ವ ಕ್ರಿಕೆಟ್ನ ಬಾಗಿಲು ತೆರೆಯಿತು. ಡರ್ಬಿಶೈರ್, ಡಾಲ್ಫಿನಸ್, ಡರ್ಹಾಮ್, ಪಾಕಿಸ್ತಾನ ಎ, 19 ವರ್ಷದೊಳಗಿನ ಪಾಕಿಸ್ತಾನ ಸೇರಿದಂತೆ ಇಮ್ರಾನ್ ಒಟ್ಟು 37 ತಂಡಗಳ ಪರ ಕಣಕ್ಕಿಳಿದಿದ್ದಾರೆ.
20/ 21
ಸದ್ಯ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿರುವ ಇಮ್ರಾನ್ ತಾಹಿರ್ ಚುಟುಕು ಕ್ರಿಕೆಟ್ನತ್ತ ಮಾತ್ರ ಗಮನ ಹರಿಸಿದ್ದಾರೆ. ಅದರಲ್ಲೂ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ತಂಡದ ಅತೀ ಹಿರಿಯ ಆಟಗಾರ ಎಂದು ಇಮ್ರಾನ್ ತಾಹಿರ್ ಗುರುತಿಸಿಕೊಂಡಿದ್ದಾರೆ.