ಭಾರತ ತಂಡದಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಎತ್ತಿದ ಕೈ. ಕಪೀಲ್ದೇವ್ ನಂತರ ಭಾರತ ತಂಡಕ್ಕೆ ಆಪದ್ಬಾಂಧವರಾಗಿ ದೊರಕಿದ್ದಾರೆ. ಚಾಪಿಂಯನ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಹಾರ್ದಿಕ್ 46 ಎಸೆತದಲ್ಲಿ 76ರನ್ ಸಿಡಿಸಿ ಗುರುತಿಸಿಕೊಂಡಿದ್ದರು.