ಐಸಿಸಿ ತನ್ನ ನೂತನ ಟ್ವೆಂಟಿ20 ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದಿರುವ ಇಂಗ್ಲೆಂಡ್ ತಂಡ ಅಗ್ರಸ್ಥಾನ ಪಡೆದುಕೊಂಡಿದೆ.
2/ 10
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದ್ದು, 268 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಜಯಿಸಿದರೆ ಪ್ರಥಮ ಸ್ಥಾನಕ್ಕೇರುವ ಅವಕಾಶ ಕೂಡ ಕೊಹ್ಲಿ ಪಡೆ ಮುಂದಿದೆ.
3/ 10
ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಸೋಲುವ ಮೂಲಕ 267 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ.
4/ 10
4ನೇ ಸ್ಥಾನದಲ್ಲಿ 260 ಅಂಕಗಳೊಂದಿಗೆ ಪಾಕಿಸ್ತಾನ ತಂಡವಿದೆ.
5/ 10
ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿ ಗೆದ್ದಿರುವ ನ್ಯೂಜಿಲೆಂಡ್ 253 ಅಂಕಗಳೊಂದಿಗೆ 5ನೇ ಸ್ಥಾನಕ್ಕೇರಿದೆ.
6/ 10
251 ಅಂಕಗಳನ್ನು ಪಡೆದಿರುವ ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ವಿರುದ್ಧದ ವೈಟ್ವಾಶ್ ಹೊರತಾಗಿಯೂ 6ನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
7/ 10
ಹಾಗೆಯೇ 229 ಅಂಕಗಳೊಂದಿಗೆ 7ನೇ ಸ್ಥಾನವನ್ನು ಬಾಂಗ್ಲಾದೇಶ ಅಲಂಕರಿಸಿಕೊಂಡಿದೆ.
8/ 10
8ನೇ ಸ್ಥಾನವನ್ನು 228 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ಪಡೆದುಕೊಂಡಿದೆ.
9/ 10
9ನೇ ಸ್ಥಾನದಲ್ಲಿ ಅಫ್ಘಾನಿಸ್ತಾನವಿದ್ದು, 228 ಅಂಕಗಳನ್ನು ಪಡೆದುಕೊಂಡಿದೆ.
10/ 10
ಇನ್ನು 228 ಅಂಕ ಪಡೆದಿರುವ ಶ್ರೀಲಂಕಾ ಟಾಪ್ 10ನಲ್ಲಿ ಕೊನೆಯ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.