ಕೊಹ್ಲಿ, ರೋಹಿತ್, ರಾಹುಲ್ರನ್ನು ಹಿಂದಿಕ್ಕಿ ಪಾಕ್ ಆಟಗಾರ ನಂಬರ್ 1
ICC T20 rankings: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಟಿ20 ಬ್ಯಾಟ್ಸ್ಮನ್ ರ್ಯಾಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ನೂತನ ಪಟ್ಟಿಯಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಟಿ20 ಬ್ಯಾಟ್ಸ್ಮನ್ ರ್ಯಾಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ನೂತನ ಪಟ್ಟಿಯಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.
2/ 14
ಭರ್ಜರಿ ಫಾರ್ಮ್ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಪ್ 10 ಪಟ್ಟಿಗೆ ಎಂಟ್ರಿ ಕೊಟ್ಟಿರುವುದು ಈ ಬಾರಿಯ ವಿಶೇಷ.
3/ 14
ಕೊಹ್ಲಿ ಅಲ್ಲದೆ ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಸಹ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
4/ 14
ಇನ್ನು ಟಾಪ್ 10 ಟ್ವೆಂಟಿ20 ಬ್ಯಾಟ್ಸ್ಮನ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸಹ ಕಾಣಿಸಿಕೊಂಡಿದ್ದಾರೆ.
5/ 14
ಟಿ20 ಅತ್ಯುತ್ತಮ ಬ್ಯಾಟ್ಸ್ಮನ್ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಪೋಟಕ ಆಟಗಾರ ಬಾಬರ್ ಆಜಂ ಮೊದಲ ಸ್ಥಾನದಲ್ಲಿ ಮಿಂಚಿದ್ದಾರೆ.
6/ 14
ದ್ವಿತೀಯ ಸ್ಥಾನವನ್ನು ಆಸ್ಟ್ರೇಲಿಯಾದ ಆರೋನ್ ಫಿಂಚ್ ಪಡೆದುಕೊಂಡಿದ್ದಾರೆ.
7/ 14
ಈ ಪಟ್ಟಿಯಲ್ಲಿ ಮೂರನೇ ರ್ಯಾಂಕ್ ಅನ್ನು ಇಂಗ್ಲೆಂಡ್ ತಂಡದ ಡೇವಿಡ್ ಮಲಾನ್ ಅಲಂಕರಿಸಿದ್ದಾರೆ.
8/ 14
ಕಳೆದ ಬಾರಿ ದ್ವಿತೀಯ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ನ ಕಾಲಿನ್ ಮುನ್ರೊ ಈ ಬಾರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
9/ 14
ಆಸ್ಟ್ರೇಲಿಯಾ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಈ ಪಟ್ಟಿಯಲ್ಲಿ 5ನೇ ರ್ಯಾಂಕ್ನಲ್ಲಿದ್ದಾರೆ.
10/ 14
ಕಳೆದ ಬಾರಿಗಿಂತ ರ್ಯಾಂಕ್ ಪಟ್ಟಿಯಲ್ಲಿ ಜಿಗಿತ ಕಂಡಿರುವ ಕೆ.ಎಲ್ ರಾಹುಲ್ 6ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
11/ 14
ವೆಸ್ಟ್ ಇಂಡೀಸ್ ತಂಡದ ಎವಿನ್ ಲೆವಿಸ್ 7ನೇ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ.
12/ 14
ನೂತನ ರ್ಯಾಕಿಂಗ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ್ ತಂಡದ ಹಜರತುಲ್ಲಾ ಝಝೈ 8ನೇ ಸ್ಥಾನವನ್ನು ಪಡೆಯಲು ಯಶಸ್ವಿಯಾಗಿದ್ದಾರೆ.
13/ 14
ಇನ್ನು 9ನೇ ರ್ಯಾಂಕ್ ಅನ್ನು ಟೀಂ ಇಂಡಿಯಾದ ಆರಂಭಿಕ ರೋಹಿತ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ.
14/ 14
ಹಾಗೆಯೇ ಟಾಪ್ 10 ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆಯುವ ಮೂಲಕ ಟಿ20 ರ್ಯಾಂಕಿಂಗ್ ನಲ್ಲೂ ವಿರಾಟ್ ಕೊಹ್ಲಿ ಜಿಗಿತ ಕಂಡಿದ್ದಾರೆ.