ICC T20 Rankings: ನಂಬರ್ ಒನ್ ಪಾಕ್ ಆಟಗಾರನಿಗೆ ಟಕ್ಕರ್ ಕೊಡಲು ರೆಡಿಯಾದ ರಾಹುಲ್; ಪಾತಳಕ್ಕೆ ಕುಸಿದ ಕೊಹ್ಲಿ!
673 ರೇಟಿಂಗ್ ಪಡೆದಿರುವ ಮಿಸ್ಟರ್ ಕನ್ಸಿಟೆನ್ಸಿ ಖ್ಯಾತಿಯ ವಿರಾಟ್ ಕೊಹ್ಲಿ ರ್ಯಾಕಿಂಗ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ವಿರಾಟ್ ಟಿ20 ಮಾದರಿಯಲ್ಲಿ ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಟಿ-20 ಬ್ಯಾಟ್ಸ್ಮನ್ ರ್ಯಾಕಿಂಗ್ ಪಟ್ಟಿಯನ್ನು ಇಂದು (ಫೆಬ್ರವರಿ 17) ಪ್ರಕಟಿಸಿದೆ.
2/ 13
ಐಸಿಸಿ ಪ್ರಕಟಿಸಿರುವ ನೂತನ ರ್ಯಾಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಇಬ್ಬರು ಆಟಗಾರರಷ್ಟೆ ಸ್ಥಾನ ಪಡೆದುಕೊಂಡಿದ್ದಾರೆ.
3/ 13
ಪಾಕಿಸ್ತಾನ ತಂಡದ ಬಾಬರ್ ಅಜಂ 879 ರೇಟಿಂಗ್ನೊಂದಿಗೆ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ.
4/ 13
ಕನ್ನಡಿಗ ಕೆ .ಎಲ್. ರಾಹುಲ್ 823 ರೇಟಿಂಗ್ ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
5/ 13
ರಾಹುಲ್ ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.
6/ 13
5 ಟಿ-20 ಪಂದ್ಯದಲ್ಲಿ 56ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ರಾಹುಲ್ 224 ರನ್ ಕಲೆಹಾಕಿದ್ದರು. ಸದ್ಯ ರಾಹುಲ್ ಟೀಂ ಇಂಡಿಯಾ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದಾರೆ. ತಂಡದಲ್ಲಿ ಪ್ರಮುಖ ಫಿನಿಶರ್ ಆಗಿ ಗುರುತಿಸಿಕೊಂಡಿರುವುದಲ್ಲದೆ, ವಿಕೆಟ್ ಕೀಪಿಂಗ್ನಲ್ಲೂ ಕಮಾಲ್ ಮಾಡುತ್ತಿದ್ದಾರೆ.
7/ 13
ಇನ್ನು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಿ-20 ರ್ಯಾಕಿಂಗ್ ಪಟ್ಟಿಯಲ್ಲಿ ಪಾತಳಕ್ಕೆ ಕುಸಿದಿದ್ದಾರೆ.
8/ 13
673 ರೇಟಿಂಗ್ ಪಡೆದಿರುವ ಮಿಸ್ಟರ್ ಕನ್ಸಿಟೆನ್ಸಿ ಖ್ಯಾತಿಯ ವಿರಾಟ್ ಕೊಹ್ಲಿ ರ್ಯಾಕಿಂಗ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ವಿರಾಟ್ ಟಿ20 ಮಾದರಿಯಲ್ಲಿ ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ.
9/ 13
ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ 810 ರೇಟಿಂಗ್ನೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
10/ 13
ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ರ್ಯಾಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ. 687 ರೇಟಿಂಗ್ನೊಂದಿಗೆ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ.
11/ 13
ಇನ್ನು ಬೌಲಿಂಗ್ ಮತ್ತು ಆಲ್ರೌಂಡರ್ ರ್ಯಾಕಿಂಗ್ನ ಟಾಪ್ 10 ಪಟ್ಟಿಯಲ್ಲಿ ಯಾವೊಬ್ಬ ಭಾರತೀಯ ಆಟಗಾರನೂ ಸ್ಥಾನ ಪಡೆದುಕೊಂಡಿಲ್ಲ.
12/ 13
ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನ ನಂಬರ್ ಒನ್ ಬೌಲರ್ ಆಗಿ 749 ರೇಟಿಂಗ್ನೊಂದಿಗೆ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಕಮಾಲ್ ಮಾಡುತ್ತಿದ್ದಾರೆ.
13/ 13
ಆಲ್ರೌಂಡರ್ ಪಟ್ಟಿಯಲ್ಲೂ ಅಫ್ಘಾನ್ ತಂಡದ ಮೊಹಮ್ಮದ್ ನಬಿ 319 ರೇಟಿಂಗ್ನೊಂದಿಗೆ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ.