ಮೂರು ಮಾದರಿ ಕ್ರಿಕೆಟ್ನ ನೂತನ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮೂರರಲ್ಲೂ ಟಾಪ್ 3ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
2/ 18
ನೂತನ ಏಕದಿನ ರ್ಯಾಕಿಂಗ್ ಪಟ್ಟಿಯಲ್ಲಿ 38 ಪಂದ್ಯಗಳಿಂದ 4,820 ಪಾಯಿಂಟ್ಗಳೊಂದಿಗೆ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಅಗ್ರಸ್ಥಾನದಲ್ಲಿದೆ.
3/ 18
ನಂತರ ಸ್ಥಾನವನ್ನು ಟೀಮ್ ಇಂಡಿಯಾ ಅಲಂಕರಿಸಿದೆ. ಭಾರತ 49 ಪಂದ್ಯಗಳಿಂದ 5,819 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ.
4/ 18
ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡವಿದ್ದು, 32 ಪಂದ್ಯಗಳಿಂದ ಕಿವೀಸ್ ಪಡೆ 3,716 ಪಾಯಿಂಟ್ ಕಲೆ ಹಾಕಿದೆ.
5/ 18
31 ಪಂದ್ಯಗಳಿಂದ 3,345 ಅಂಕಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ರ್ಯಾಂಕಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
6/ 18
ಆಸ್ಟ್ರೇಲಿಯಾ ತಂಡವು 33 ಪಂದ್ಯಗಳಿಂದ 3,518 ಅಂಕಗಳಿಸುವ ಮೂಲಕ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
7/ 18
ಟೆಸ್ಟ್ ರ್ಯಾಕಿಂಗ್ ಪಟ್ಟಿ:
8/ 18
ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ 26 ಪಂದ್ಯಗಳಿಂದ 3,028 ಅಂಕಗಳಿಸಿ ಆಸ್ಟ್ರೇಲಿಯಾ ಟೀಮ್ ಇಂಡಿಯಾವನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದೆ.
9/ 18
21 ಪಂದ್ಯಗಳಿಂದ 2,406 ಪಾಯಿಂಟ್ ಕಲೆಹಾಕಿರುವ ನ್ಯೂಜಿಲೆಂಡ್ ತಂಡವು ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ತಂಡವಾಗಿ ಹೊರಹೊಮ್ಮಿದೆ.
10/ 18
ಕಳೆದ ಮೂರುವರೆ ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿ ಭದ್ರವಾಗಿದ್ದ ವಿರಾಟ್ ಕೊಹ್ಲಿ ಪಡೆ ಈ ಬಾರಿ 27 ಪಂದ್ಯಗಳಿಂದ 3,085 ಪಾಯಿಂಟ್ ಸಂಪಾದಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
11/ 18
33 ಮ್ಯಾಚ್ಗಳಿಂದ 3,466 ಅಂಕಗಳಿಸಿರುವ ಇಂಗ್ಲೆಂಡ್ ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
12/ 18
5ನೇ ಸ್ಥಾನವನ್ನು 27 ಪಂದ್ಯಗಳಿಂದ 2,454 ಪಾಯಿಂಟ್ ಸಂಪಾದಿಸುವ ಮೂಲಕ ಶ್ರೀಲಂಕಾ ತನ್ನದಾಗಿಸಿಕೊಂಡಿದೆ.
13/ 18
ಟಿ20 ರ್ಯಾಕಿಂಗ್ ಪಟ್ಟಿ
14/ 18
ಟಿ20 ಕ್ರಿಕೆಟ್ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ 19 ಪಂದ್ಯಗಳಿಂದ 5,285 ಅಂಕ ಸಂಪಾದಿಸುವ ಮೂಲಕ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದೆ.
15/ 18
ದ್ವಿತೀಯ ಸ್ಥಾನದಲ್ಲಿ ಇಂಗ್ಲೆಂಡ್ ತಂಡವಿದ್ದು, 17 ಪಂದ್ಯಗಳಿಂದ 4,564 ಪಾಯಿಂಟ್ಗಳಿಸಿ ಆಂಗ್ಲರ ಪಡೆ ಟಿ20ಯಲ್ಲಿ 2ನೇ ಸ್ಥಾನದಲ್ಲಿದೆ.
16/ 18
ತೃತೀಯ ಸ್ಥಾನದಲ್ಲಿ ಟೀಮ್ ಇಂಡಿಯಾ ಇದ್ದು, ವಿರಾಟ್ ಕೊಹ್ಲಿ ಪಡೆ 35 ಪಂದ್ಯಗಳಿಂದ 9,319 ಅಂಕಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
17/ 18
ಪಾಕಿಸ್ತಾನ ತಂಡ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 21 ಪಂದ್ಯಗಳಿಂದ 5,470 ಪಾಯಿಂಟ್ ಸಂಪಾದಿಸಿದೆ.
18/ 18
ಇನ್ನು 17 ಪಂದ್ಯಗಳಿಂದ 4,380 ಪಾಯಿಂಟ್ ಸಂಪಾದಿಸಿರುವ ದಕ್ಷಿಣ ಆಫ್ರಿಕಾ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.