ICC ODI rankings: ಮೊದಲೆರಡು ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ
ಕೊಹ್ಲಿ 870 ರೇಟಿಂಗ್ ಪಾಯಿಂಟ್ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಹಿಟ್ಮ್ಯಾನ್ ರೋಹಿತ್ 842 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಝಾಮ್ (837) ಇದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಏಕದಿನ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಭಾರತ ತಂಡದ ಅಗ್ರಮಾನ್ಯ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2/ 11
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 89, 63 ರನ್ ಬಾರಿಸಿದ್ದರು. ಇದು ರ್ಯಾಂಕಿಂಗ್ನಲ್ಲಿ ಗಟ್ಟಿಯಾಗಲು ಕೊಹ್ಲಿಗೆ ನೆರವು ನೀಡಿದೆ.
3/ 11
ಇತ್ತ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೋಹಿತ್ ಆಡಿಲ್ಲವಾದರೂ ದ್ವಿತೀಯ ಸ್ಥಾನದಲ್ಲಿ ಮುಂದುವರೆದಿದ್ದಾರೆ.
4/ 11
ಕೊಹ್ಲಿ 870 ರೇಟಿಂಗ್ ಪಾಯಿಂಟ್ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಹಿಟ್ಮ್ಯಾನ್ ರೋಹಿತ್ 842 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಝಾಮ್ (837) ಇದ್ದಾರೆ.
5/ 11
4ನೇ ಸ್ಥಾನದಲ್ಲಿ ನ್ಯೂಜಿಲೆಂಡ್ನ ರಾಸ್ ಟೇಲರ್, 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆಯನ್ ಫಿಂಚ್ ಇದ್ದಾರೆ.
6/ 11
ಏಕದಿನ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪಟ್ಟಿ.
7/ 11
ಏಕದಿನ ಬೌಲಿಂಗ್ ರ್ಯಾಂಕಿಂಗ್ನಲ್ಲಿ ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್ (722), ಅಫ್ಘಾನಿಸ್ತಾನದ ಮುಜೀಬ್ ಉರ್ ರಹ್ಮಾನ್ (708), ಭಾರತದ ಜಸ್ಪ್ರೀತ್ ಬೂಮ್ರಾ (700) ಅಗ್ರ ಮೂರು ಸ್ಥಾನ ಪಡೆದಿದ್ದಾರೆ.
8/ 11
ಬಾಂಗ್ಲಾದೇಶದ ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ ಒಂಬತ್ತು ಸ್ಥಾನಗಳ ಜಿಗಿತ ಕಂಡು ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.
9/ 11
ಆಲ್ರೌಂಡರ್ ಶ್ರೇಯಾಂಕದಲ್ಲಿ ರಶೀದ್ ಖಾನ್ ಒಂದು ಸ್ಥಾನ ಏರಿಕೆ ಕಂಡು 6ಕ್ಕೆ ಬಡ್ತಿ ಪಡೆದಿದ್ದಾರೆ. ಉಳಿದಂತೆ ಶಕಿಬ್, ನಬಿ, ವೋಕ್ಸ್, ಸ್ಟೋಕ್ಸ್ ಮತ್ತು ಇಮದ್ ವಾಸೀಮ್ ಅಗ್ರ 5 ರಲ್ಲೇ ಉಳಿದುಕೊಂಡಿದ್ದಾರೆ.
10/ 11
ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ 7ನೇ ಸ್ಥಾನದಲ್ಲಿದ್ದಾರೆ.
11/ 11
ಅಫ್ಘಾನಿಸ್ತಾನದ ವಿರುದ್ಧ 2 ಶತಕ ಸಹಿತ 285 ರನ್ಗಳಿಸಿದ್ಧ ಐರ್ಲೆಂಡ್ ಆಲ್ರೌಂಡರ್ ಪಾಲ್ ಸ್ಟಿರ್ಲಿಂಗ್ 8 ಸ್ಥಾನ ಮೇಲೇರಿ 20ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.