ಭಾರತ 24 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಶಿಖರ್ ಧವನ್ ಮತ್ತು ಶುಬ್ಮನ್ ಗಿಲ್ ಅರ್ಧಶತಕ ಬಾರಿಸಿ ಭಾರತವನ್ನು 100 ರನ್ ಗಡಿ ದಾಟಿಸಿದರು. ಆದರೂ ಹೇಡನ್ ವಾಲ್ಷ್ ಜೂನಿಯರ್ ಜೊತೆಯಾಟವನ್ನು ಕೊನೆಗೊಳಿಸಿದರು, ಧವನ್ ಅವರನ್ನು 58 ರನ್ ಗಳಿಸಿ ಔಟ್ ಮಾಡಿದರು. ಮಳೆ ಅಡ್ಡಿಪಡಿಸಿದ ಕಾರಣ ಈ ಪಂದ್ಯವನ್ನು 36 ಓವರ್‌ಗಳಿಗೆ ಮೊಟಕುಗೊಳಿಸಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 36 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು. ಭಾರತದ ಪರವಾಗಿ ಸುಭಮನ್ ಗಿಲ್ (ಅಜೇಯ 98) ಮತ್ತು ಶಿಖರ್ ಧವನ್ (58) ಮಿಂಚಿದರು. ಶ್ರೇಯಸ್ ಅಯ್ಯರ್ (34 ಎಸೆತಗಳಲ್ಲಿ 44) ಅದ್ಭುತ ಇನ್ನಿಂಗ್ಸ್ ಆಡಿದರು.