ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕ್ರಿಕೆಟ್ ಸಂಪೂರ್ಣ ಸ್ಥಗಿತಗೊಂಡಿದ್ದರೂ, ಅತ್ತ ನ್ಯೂಜಿಲೆಂಡ್ ಕ್ರಿಕೆಟ್ಗೆ ಸಿಹಿ ಸುದ್ದಿಯೊಂದು ಒದಗಿ ಬಂದಿದೆ.
2/ 10
ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೆವೊನ್ ಕಾನ್ವೆ ಇದೀಗ ಬೇರೊಂದು ದೇಶದ ಪರ ಕಣಕ್ಕಿಳಿಯಲು ಅವಕಾಶ ಪಡೆದಿದ್ದಾರೆ. ಸೌತ್ ಆಫ್ರಿಕಾ ದೇಸಿ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟದಿಂದಲೇ ಹೆಸರುವಾಸಿಯಾಗಿದ್ದ ಕಾನ್ವೆಗೆ ಬೇರೆ ದೇಶದ ಪರ ಆಡಲು ಐಸಿಸಿ ಅನುಮೋದನೆ ನೀಡಿದೆ.
3/ 10
ಅದರಂತೆ ಡೆವೊನ್ ಕಾನ್ವೆ ನ್ಯೂಜಿಲೆಂಡ್ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು, ಶೀಘ್ರದಲ್ಲೇ ಕಿವೀಸ್ ನೆಲದಲ್ಲಿ ಕ್ರಿಕೆಟ್ ವೃತ್ತಿ ಆರಂಭಿಸಲಿದ್ದಾರೆ.
4/ 10
ದಕ್ಷಿಣ ಆಫ್ರಿಕಾದಲ್ಲಿ ಜನಿಸಿರುವ 2017 ರಲ್ಲಿ ಬೇರೊಂದು ದೇಶದ ಪರ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದರು. ಆಕ್ರಮಣಕಾರಿ ಆಟದಿಂದಲೇ ಲೀಸ್ಟ್ ಎ ಕ್ರಿಕೆಟ್ನಲ್ಲಿ ಮನೆಮಾತಾಗಿದ್ದ ಅವಕಾಶಗಳ ಕೊರತೆಯಿಂದ ಈ ತೀರ್ಮಾನಕ್ಕೆ ಬಂದಿದ್ದರು.
5/ 10
ಅದಾಗಲೇ ಸೌತ್ ಆಫ್ರಿಕಾ ದೇಶೀಯ ಕ್ರಿಕೆಟ್ನಲ್ಲಿ ಆಡಿದ್ದರಿಂದ ಏಕಾಏಕಿ ಬೇರೊಂದು ದೇಶದ ಪರ ಆಡುವುದು ಸುಲಭವಾಗಿರಲಿಲ್ಲ. ಹೀಗಾಗಿ ಐಸಿಸಿ ಮೊರೆ ಹೋದ ಯುವ ಆಟಗಾರ ಇದೀಗ ನ್ಯೂಜಿಲೆಂಡ್ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಪಡೆದಿದ್ದಾರೆ.
6/ 10
ಈಗಾಗಲೇ ನ್ಯೂಜಿಲೆಂಡ್ನಲ್ಲಿ ಕ್ರಿಕೆಟ್ ಆರಂಭಿಸಿರುವ ಕಾನ್ವೆ ವೆಲ್ಲಿಂಗ್ಟನ್ ಪರ 17 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 1598 ರನ್ ಚಚ್ಚುವ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
7/ 10
ಅದರಲ್ಲೂ ಕ್ಯಾಂಟರ್ಬರಿ ವಿರುದ್ಧ ಸ್ಪೋಟಕ ಅಜೇಯ ತ್ರಿಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು ಡೆವೊನ್ ಕಾನ್ವೆ. ಈ ಪಂದ್ಯದಲ್ಲಿ 334 ಎಸೆತಗಳನ್ನು ಎದುರಿಸಿದ ಈ ಆಫ್ರಿಕನ್ ಆಟಗಾರ ಭರ್ಜರಿ 327 ರನ್ ಬಾರಿಸಿದ್ದರು.
8/ 10
ಆ ಬಳಿಕ ನ್ಯೂಜಿಲೆಂಡ್ ರಾಷ್ಟ್ರೀಯ ಆಯ್ಕೆದಾರರು ಕಾನ್ವೆ ಆಯ್ಕೆ ಬಗ್ಗೆ ಒಲವು ತೋರಿದ್ದರೂ, ದಕ್ಷಿಣ ಆಫ್ರಿಕಾ ಆಟಗಾರನಾಗಿರುವುದರಿಂದ ಅವಕಾಶ ಸಿಕ್ಕಿರಲಿಲ್ಲ.
9/ 10
ಆದರೆ ಇದೀಗ ಆಗಸ್ಟ್ 15 ರಿಂದ ನ್ಯೂಜಿಲೆಂಡ್ ಎ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಡೆವೊನ್ ಕಾನ್ವೆಗೆ ನೀಡಲಾಗಿದ್ದು, ಆ ಬಳಿಕ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಬಹುದು ಎಂದು ಐಸಿಸಿ ತಿಳಿಸಿದೆ.
10/ 10
ದಕ್ಷಿಣ ಆಫ್ರಿಕಾ ಮೂಲದ ಕಾಲಿನ್ ಮನ್ರೋ ಈಗಾಗಲೇ ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಇದಕ್ಕೂ ಮುನ್ನ ಗ್ರಾಂಟ್ ಎಲಿಯೆಟ್ ಸಹ ಸೌತ್ ಆಫ್ರಿಕಾ ತೊರೆದು ಕಿವೀಸ್ ಪರ ಕಣಕ್ಕಿಳಿದಿದ್ದರು.