2018-19ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ ಪಡೆದುಕೊಂಡಿದ್ದಾರೆ.
2/ 13
ಕಳೆದ ವರ್ಷ ನಡೆದ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅವರ ನಡತೆಯನ್ನು ಗಮನಿಸಿ ಐಸಿಸಿ ಈ ವಿಶೇಷ ಗೌರವ ನೀಡಿದೆ.
3/ 13
ವಿಶ್ವಕಪ್ನಲ್ಲಿ ಭಾರತ- ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯುತ್ತಿರುವ ವೇಳೆ ಇಂಗ್ಲೆಂಡ್ನಲ್ಲಿ ಅಭಿಮಾನಿಗಳು ಸ್ಟೀವ್ ಸ್ಮಿತ್ ಅವರನ್ನು ಮೋಸಗಾರ, ಚೀಟರ್ ಎಂದು ಕರೆಯುತ್ತಿದ್ದರು.
4/ 13
ಈ ಘಟನೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವ ವೇಳೆ ನಡೆದಿದ್ದು, ಈ ಸಂದರ್ಭ ವಿರಾಟ್ ಆರೀತಿ ಕರೆಯಬೇಡಿ, ಚೀಟರ್ ಹೇಳುವುದನ್ನು ನಿಲ್ಲಿಸಿ, ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೈ ಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
5/ 13
ಕೊಹ್ಲಿ ಅವರ ಕ್ರೀಡಾ ಸ್ಪೂರ್ತಿಯನ್ನು ಕಂಡು ಸ್ವತಃ ಸ್ಮಿತ್ ಅವರೆ ಆ ಸಂದರ್ಭ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದರು.
6/ 13
ಸದ್ಯ ಇದನ್ನು ಪರಿಗಣಿಸಿರುವ ಐಸಿಸಿ, ವಿರಾಟ್ ಕೊಹ್ಲಿ ಅವರಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ ನೀಡಿದೆ.
7/ 13
ಇನ್ನು ರೋಹಿತ್ ಶರ್ಮಾ ಅವರು ವರ್ಷದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ.
8/ 13
ವರ್ಷದ ಅತ್ಯುತ್ತಮ ಟಿ-20 ಬೌಲರ್ ಪ್ರಶಸ್ತಿ ದೀಪಕ್ ಚಹರ್ ಅವರಿಗೆ ಒಲಿದು ಬಂದಿದೆ.
9/ 13
ವರ್ಷದ ಟೆಸ್ಟ್ ಕ್ರಿಕೆಟಿಗ - ಪ್ಯಾಟ್ ಕಮ್ಮಿನ್ಸ್, ಆಸ್ಟ್ರೇಲಿಯಾ.
10/ 13
ವರ್ಷದ ಉದಯೋನ್ಮುಖ ಕ್ರಿಕೆಟಿಗ - ಮಾರ್ನಸ್ ಲಾಬುಶಾನೆ , ಆಸ್ಟ್ರೇಲಿಯಾ.
11/ 13
ಸರ್ ಗ್ಯಾರಿ ಸೋಬರ್ಸ್ ಅವಾರ್ಡ್ - ಬೆನ್ ಸ್ಟೋಕ್ಸ್, ಇಂಗ್ಲೆಂಡ್.
12/ 13
ಅಸೋಸಿಯೇಟ್ ಮೆಂಬರ್ ರಾಷ್ಟ್ರದ ಅತ್ಯುತ್ತಮ ಕ್ರಿಕೆಟಿಗ - ಕೈಲ್ ಕೊಯೆಟ್ಜಾರ್, ಸ್ಕಾಟ್ಲೆಂಡ್.
13/ 13
ವರ್ಷದ ಅಂಪೈರ್ - ರಿಚರ್ಡ್ ಇಲ್ಲಿಂಗ್ ವರ್ತ್.
First published:
113
ICC Awards: ವಿಶ್ವಕಪ್ನಲ್ಲಿ ಕೊಹ್ಲಿಯ ಆ ಒಂದು ನಡತೆಗೆ ಸಿಕ್ಕಿತು 'ಸ್ಪಿರಿಟ್ ಆಫ್ ಕ್ರಿಕೆಟ್' ಪ್ರಶಸ್ತಿ