ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

ಸಚಿನ್ ತೆಂಡೂಲ್ಕರ್( 14) ವಿಕೆಟ್ ಬೀಳುತ್ತಿದ್ದಂತೆ ಅದೆಷ್ಟೋ ಭಾರತೀಯ ಕ್ರಿಕೆಟ್ ಪ್ರೇಮಿಗಳು ಟಿವಿ ಆಫ್ ಮಾಡಿದ್ದರು. ಏಕೆಂದರೆ ಭಾರತ ಮೊತ್ತ 146 ಕ್ಕೆ 6 ವಿಕೆಟ್. ಗೆಲುವು ಅಸಾಧ್ಯ ಎಂದೇ ಎಲ್ಲರೂ ನಿರ್ಧರಿಸಿದ್ದರು.

First published:

  • 122

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಅದು 2002. ಮ್ಯಾಚ್ ಫಿಕ್ಸಿಂಗ್ ವಿವಾದದಿಂದ ಭಾರತ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿತ್ತು. ಇತ್ತ ಕ್ರಿಕೆಟ್ ಪ್ರೇಮಿಗಳು ಭಾರತದ ಮ್ಯಾಚ್ ನೋಡುವುದರಿಂದ ವಿಮುಖರಾಗಿದ್ದರು.

    MORE
    GALLERIES

  • 222

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಆದರೆ ಸೌರವ್ ಗಂಗೂಲಿ ನೇತೃತ್ವದ ಯುವ ಪಡೆಯನ್ನೊಳಗೊಂಡ ತಂಡ ಇಂಗ್ಲೆಂಡ್​ ವಿರುದ್ಧದ ಸರಣಿಗೆ ತೆರಳಿತ್ತು. ಆದರೆ ಅದಕ್ಕೂ ಮುನ್ನ ಭಾರತದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಆ್ಯಂಡ್ರೊ ಫ್ಲಿಂಟಾಫ್ ಎಡವಟ್ಟುವೊಂದನ್ನು ಮಾಡಿದ್ದರು.

    MORE
    GALLERIES

  • 322

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಹೌದು, ಭಾರತದ ನೆಲದಲ್ಲೇ ಟೀಮ್ ಇಂಡಿಯಾವನ್ನು ಬಗ್ಗು ಬಡಿದು ಫ್ಲಿಂಟಾಫ್ ಶರ್ಟ್ ಬಿಚ್ಚಿ ಮೈದಾನದಲ್ಲಿ ಸಂಭ್ರಮಿಸಿದ್ದರು. ಈ ಎಲ್ಲಾ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ನ್ಯಾಟ್​ವೆಸ್ಟ್​ ಸಿರೀಸ್​ ಭಾರತಕ್ಕೆ ಮಹತ್ವದಾಗಿತ್ತು.

    MORE
    GALLERIES

  • 422

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಭಾರತ-ಶ್ರೀಲಂಕಾ-ಇಂಗ್ಲೆಂಡ್​ ನಡುವಣ ಈ ಸರಣಿಯಲ್ಲಿ ಕೊನೆಗೆ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ಫೈನಲ್​ನಲ್ಲಿ ಮುಖಾಮುಖಿಯಾಯಿತು. ಟಾಸ್ ಗೆದ್ದ ಆಂಗ್ಲರ ನಾಯಕ ನಾಸಿರ್ ಹುಸೇನ್ ಬ್ಯಾಟಿಂಗ್ ಆಯ್ದುಕೊಂಡರು.

    MORE
    GALLERIES

  • 522

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಆರಂಭಿಕ ಆಟಗಾರ ಮಾರ್ಕಸ್ ಟ್ರೆಸ್ಕೊಥಿಕ್ ಅಬ್ಬರಿಸಿದರು. ಭರ್ಜರಿ ಶತಕ ಸಿಡಿಸಿದ ಟ್ರೆಸ್ಕೊಥಿಕ್​ರನ್ನು ಕುಂಬ್ಳೆ ಬೌಲ್ಡ್ ಮಾಡಿದರು. ಆದರೆ ಮತ್ತೊಂದೆಡೆ ನಾಸಿರ್ ಹುಸೇನ್ ಅಬ್ಬರ ಶುರುವಾಗಿತ್ತು.

    MORE
    GALLERIES

  • 622

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಭರ್ಜರಿಯಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ನಾಯಕ 115 ರನ್ ಬಾರಿಸಿದರು. ಪರಿಣಾಮ ಇಂಗ್ಲೆಂಡ್ ಮೊತ್ತ ನಿಗದಿತ 50 ಓವರ್​ಗಳಲ್ಲಿ 325 ರನ್​ಗಳು. ಈ ಬೃಹತ್ ಮೊತ್ತವನ್ನು ಭಾರತ ಬೆನ್ನತ್ತಲಿದೆಯೇ ಎಂಬ ಪ್ರಶ್ನೆಗಳು ಕಾಮೆಂಟರಿ ಬಾಕ್ಸ್​ನಿಂದ ನಿರಂತರ ಕೇಳಿ ಬಂತು.

    MORE
    GALLERIES

  • 722

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    326 ರನ್​ಗಳ ಟಾರ್ಗೆಟ್​ ಬೆನ್ನತ್ತಲು ಪ್ರಾರಂಭಿಸಿದ ಭಾರತಕ್ಕೆ ನಾಯಕ ಗಂಗೂಲಿ ಹಾಗೂ ಸೆಹ್ವಾಗ್ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 106 ರನ್ ಜೊತೆಯಾಟವಾಡಿ ಗಂಗೂಲಿ (60) ವಿಕೆಟ್ ಒಪ್ಪಿಸಿದರು.

    MORE
    GALLERIES

  • 822

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಇದರ ಬೆನ್ನಲ್ಲೇ ನಾಯಕನನ್ನು ಹಿಂಬಾಲಿಸಿ ಸೆಹ್ವಾಗ್ (45) ಕೂಡ ಪೆವಿಲಿಯನ್ ಹಾದಿ ಹಿಡಿದರು. ಆ ಬಳಿಕ ನಡೆದಿದ್ದೇ ನಾಟಕೀಯ ತಿರುವು. ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದರು.

    MORE
    GALLERIES

  • 922

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಅದರಲ್ಲೂ ಸಚಿನ್ ತೆಂಡೂಲ್ಕರ್( 14) ವಿಕೆಟ್ ಬೀಳುತ್ತಿದ್ದಂತೆ ಅದೆಷ್ಟೋ ಭಾರತೀಯ ಕ್ರಿಕೆಟ್ ಪ್ರೇಮಿಗಳು ಟಿವಿ ಆಫ್ ಮಾಡಿದ್ದರು. ಏಕೆಂದರೆ ಭಾರತ ಮೊತ್ತ 146 ಕ್ಕೆ 6 ವಿಕೆಟ್. ಗೆಲುವು ಅಸಾಧ್ಯ ಎಂದೇ ಎಲ್ಲರೂ ನಿರ್ಧರಿಸಿದ್ದರು.

    MORE
    GALLERIES

  • 1022

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಆದರೆ ಆಗಷ್ಟೇ ತಂಡದಲ್ಲಿ ಸ್ಥಾನ ಪಡೆದಿದ್ದ ಇಬ್ಬರು ತರುಣರು ಇಡೀ ತಂಡದ ಜವಾಬ್ದಾರಿಯನ್ನು ಮೈಮೇಲೆ ಎಳೆದುಕೊಂಡರು. ಒಂದೊಂದು ರನ್ ಕದಿಯುತ್ತಾ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಹೋದರು.

    MORE
    GALLERIES

  • 1122

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ನಿಧಾನಕ್ಕೆ ಕ್ರೀಸ್ ಕಚ್ಚಿ ನಿಲ್ಲುತ್ತಿದ್ದಂತೆ ಈ ಇಬ್ಬರು ಆರ್ಭಟಿಸಲು ಪ್ರಾರಂಭಿಸಿದರು. ಸಿಕ್ಸ್, ಫೋರ್​ಗಳ ಸುರಿಮಳೆಗೈದರು. ಎಲ್ಲಕ್ಕಿಂತ ಹೆಚ್ಚಾಗಿ ರನ್​ ರೇಟ್ ಕಡಿಮೆಯಾಗದಂತೆ ನೋಡಿಕೊಂಡರು. ಏಳನೇ ವಿಕೆಟ್​ಗೆ 121 ರನ್​ಗಳ ಜೊತೆಯಾಟವಾಡಿದರು.

    MORE
    GALLERIES

  • 1222

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಬಲಗೈ ಬ್ಯಾಟ್ಸ್​ಮನ್​ವೊಬ್ಬರು ಕ್ರೀಸ್ ಕಚ್ಚಿ ನಿಂತಿದ್ದರು. ಯಾವುದೇ ಕಾರಣಕ್ಕೂ ವಿಕೆಟ್ ಒಪ್ಪಿಸಲ್ಲ ಎಂಬ ದೃಢ ನಿರ್ಧಾರ ಮಾಡಿದ್ದರು. ಕೊನೆಗೆ ಬಾಲಂಗೋಚಿಗಳೊಂದಿಗೆ ಸೇರಿ ಕೊನೆಯ ಓವರ್​ನಲ್ಲಿ ಭಾರತಕ್ಕೆ ಜಯ ತಂದುಕೊಟ್ಟರು.

    MORE
    GALLERIES

  • 1322

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಎಸ್...ಅದೇ ಸ್ಮರಣೀಯ ಪಂದ್ಯವಾಯಿತು. ಅವೆಲ್ಲಕ್ಕಿಂತ ಹೆಚ್ಚಾಗಿ ಸೌರವ್ ಗಂಗೂಲಿಯ ದಾದಾ ಸ್ಟೈಲಿನ ಸೆಲೆಬ್ರೇಷನ್​ಗೆ ಕಾರಣವಾಯಿತು. ಫ್ಲಿಂಟಾಫ್​ಗೆ ಎದಿರೇಟು ನೀಡಿದಂತೆ ಕ್ರಿಕೆಟ್ ಕಾಶಿಯಲ್ಲಿ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.

    MORE
    GALLERIES

  • 1422

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಇಂತಹದೊಂದು ಅಮೋಘ ಗೆಲುವಿಗೆ ಕಾರಣವಾಗಿದ್ದ ಅಂದಿನ ತರುಣರು ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್. ಇವರಿಬ್ಬರ ಪಾಲಿಗೆ ಈ ಪಂದ್ಯ ಅತ್ಯಂತ ನಿರ್ಣಾಯಕ ಎನಿಸಿತು. ಆ ಬಳಿಕ ಭಾರತ ತಂಡದಿಂದ ಇಬ್ಬರನ್ನು ಗಂಗೂಲಿ ಬಿಟ್ಟು ಕೊಟ್ಟಿರಲಿಲ್ಲ ಎಂದರೆ ತಪ್ಪಾಗಲಾರದು.

    MORE
    GALLERIES

  • 1522

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಈ ಅಭೂತಪೂರ್ವ ಗೆಲುವಿನ ಬಗ್ಗೆ ಯುವರಾಜ್ ಹಾಗೂ ಕೈಫ್ ಮಾತನಾಡಿಕೊಂಡಿದ್ದಾರೆ. ಅಂದು ಪಿಚ್​ನಲ್ಲಿದ್ದಾಗ ಮನದಲ್ಲೇನಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

    MORE
    GALLERIES

  • 1622

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    42 ನೇ ಓವರ್‌ನಲ್ಲಿ ಯುವರಾಜ್ ಸಿಂಗ್ (69) ಔಟಾದರು. ಭಾರತದ ಗೆಲುವಿಗೆ ಆಗ ಇನ್ನೂ 59 ರನ್ ಬೇಕಿತ್ತು. ಕೈಯಲ್ಲಿ ನಾಲ್ಕು ವಿಕೆಟ್‌ಗಳಿದ್ದವು. 'ನೀವು (ಯುವರಾಜ್) ಔಟ್ ಆದಾಗ ಇಡೀ ಪಂದ್ಯ ಹೋಯಿತು ಎಂದು ನಾನು ಭಾವಿಸಿದ್ದೇ. ನಿಜ ಹೇಳಬೇಕೆಂದರೆ ನಾವು ಗೆಲ್ಲುತ್ತೇವೆ ಎಂದು ಕೂಡ ಊಹಿಸಿರಲಿಲ್ಲ ಎಂದು ಕೈಫ್ ಯುವರಾಜ್ ಜೊತೆಗಿನ ಚಾಟ್​ ವೇಳೆ ಹೇಳಿದರು.

    MORE
    GALLERIES

  • 1722

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ನೀವಿದ್ದಾಗ ನಮಗೆ ಗೆಲುವು ಸಿಗಲಿದೆ ಎಂದು ನಾನು ನಂಬಿದ್ದೆ. ಆದರೆ ನೀವು ಔಟ್ ಆಗುತ್ತಿದ್ದಂತೆ ಆ ಭರವಸೆ ಹೋಯಿತು. ಆದರೆ ಗೆಲುವು ಅನಿವಾರ್ಯವಾಗಿತ್ತು. ಅಂತಿಮ ಘಟ್ಟದಲ್ಲಿ ಜಹೀರ್ ಖಾನ್ ಅವರೊಂದಿಗೆ ರಕ್ಷಣಾತ್ಮಕವಾಗಿ ಆಡಿ 75 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿ ಕೊನೆಗೂ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದೆ ಎಂದು ಕೈಫ್ ಹೇಳಿದರು.

    MORE
    GALLERIES

  • 1822

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಇನ್ನು ನಾನು ಯುವರಾಜ್ ಅಂಡರ್-19 ನಿಂದ ಜೊತೆಯಾಗಿ ಆಡಿದ್ದೇವೆ. ಆ ಒಂದು ಸಮತೋಲನ ನಮ್ಮಿಬರ ನಡುವೆ ಇತ್ತು ಎಂದು ಕೈಫ್ ಹೇಳಿದರು. ಇದೇ ವೇಳೆ ಮೊಹಮ್ಮದ್ ಕೈಫ್ ಅವರ ಫೀಲ್ಡಿಂಗ್​ನ್ನು ಹೊಗಳಿದ ಯುವಿ, ಭಾರತ ತಂಡ ಪಾಯಿಂಟ್ ಮತ್ತು ಕವರ್ ಫೀಲ್ಡಿಂಗ್​ನಲ್ಲಿ ಬದಲಾವಣೆ ತಂದಿದ್ದೇ ನೀನು ಎಂದರು.

    MORE
    GALLERIES

  • 1922

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಈ ವೇಳೆ ಮಾತನಾಡಿದ ಇಂಡಿಯನ್ ಜಾಂಟಿ ರೋಡ್ಸ್ ಖ್ಯಾತಿಯ ಕೈಫ್, ನಾನು ಒಂದು ವಿಭಾಗದಲ್ಲಿ ಮಿಂಚಲು ಬಯಸಿದ್ದೆ. ಹೀಗಾಗಿ ಫೀಲ್ಡಿಂಗ್‌ ಗೆ ಹೆಚ್ಚಿನ ಮಾನ್ಯತೆ ನೀಡಿರುವುದಾಗಿ ಹೇಳಿದರು. ನಾನು ಯಾವಾಗಲೂ ವಿಭಿನ್ನವಾಗಿರಲು ಬಯಸುತ್ತೇನೆ. ಹಾಗಾಗಿ ಫೀಲ್ಡಿಂಗ್‌ ವಿಭಾಗದಲ್ಲಿ ಹೆಚ್ಚಿನ ಶ್ರಮ ಹಾಕಿರುವೆ ಎಂದು ಕೈಫ್ ಹೇಳಿದರು.

    MORE
    GALLERIES

  • 2022

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಟೀಮ್ ಇಂಡಿಯಾದ ಫೀಲ್ಡಿಂಗ್​ನಲ್ಲಿ ಕೈಫ್ ಸೃಷ್ಟಿಸಿದ ಸಂಚಲನದಿಂದ ಇಂದು ಭಾರತ ತಂಡದಲ್ಲಿ ಅನೇಕ ಉತ್ತಮ ಫೀಲ್ಡರ್​ಗಳು ಇರುವಂತಾಗಿದೆ ಎಂದು ಯುವರಾಜ್ ಸಿಂಗ್ ಇದೇ ವೇಳೆ ಮೆಚ್ಚುಗೆ ಸೂಚಿಸಿದರು.

    MORE
    GALLERIES

  • 2122

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಈ  ಒಂದು ಭರ್ಜರಿ ಗೆಲುವು ಮ್ಯಾಚ್ ಫಿಕ್ಸಿಂಗ್​ ಸುದ್ದಿಯಿಂದ ಕ್ರಿಕೆಟ್ ನೋಡುವುದನ್ನು ಬಿಟ್ಟಿದ್ದ ಅನೇಕ ಕ್ರಿಕೆಟ್ ಪ್ರೇಮಿಗಳನ್ನು ಮತ್ತೆ ಟಿವಿ ಮುಂದೆ ಕೂರುವಂತೆ ಮಾಡಿತು. ಹಾಗೆಯೇ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಚೇಸಿಂಗ್ ಪಂದ್ಯಗಳಲ್ಲಿ ಕೈಫ್-ಯುವಿ ಇನಿಂಗ್ಸ್ ಗುರುತಿಸಿಕೊಂಡಿತು.

    MORE
    GALLERIES

  • 2222

    ಆ ಒಂದು ಪಂದ್ಯ...ಐತಿಹಾಸಿಕ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಯುವಿ-ಕೈಫ್

    ಗಂಗೂಲಿ ಸೆಲೆಬ್ರೇಷನ್

    MORE
    GALLERIES