ಅಲ್ಲದೆ, "ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಹಲ್ ಸಹ ಭಾರತೀಯ ಟೆಸ್ಟ್ ತಂಡಕ್ಕಾಗಿ ಉತ್ತಮವಾಗಿ ಆಡಿದರು. ತಂಡದಲ್ಲಿ ಕೆಲ ಕಾಲ ಇದ್ದರು. ಆದರೆ, ತಂಡದ ಸಂಯೋಜನೆಗಳು ಬದಲಾದಂತೆ, ನಾವು ಬರುವ ಅವಕಾಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಅವಕಾಶ ಸಿಕ್ಕಾಗ ಅದನ್ನು ಸಾಬೀತುಪಡಿಸಲು ನಾವು ಆಡುತ್ತೇನೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನನಗೆ ದೊರೆತ ಅವಕಾಶವನ್ನು ನಾನು ಬಳಸಿಕೊಂಡೆ" ಎಂದು ಅಕ್ಷರ್ ಪಟೇಲ್ ತಿಳಿಸಿದ್ದಾರೆ.
"ಜಡೇಜಾ ಮತ್ತು ನಾನು ಒಳ್ಳೆಯ ಸ್ನೇಹಿತರು. ಸಿಎಸ್ಕೆ ತಂಡದಲ್ಲಿ ನಾವಿಬ್ಬರೂ ಒಟ್ಟಿಗೆ ಆಡುತ್ತಿದ್ದೇವೆ. ಜಡೇಜಾ ಇರುವ ಸ್ಥಳವು ಯಾವಾಗಲೂ ತುಂಬಾ ಉತ್ಸಾಹಭರಿತ ವಾಗಿರುತ್ತದೆ. ಟೆಸ್ಟ್ ಪಂದ್ಯಗಳಲ್ಲಿ ಕೆಲವೊಮ್ಮೆ ಎದುರಾಳಿ ಬ್ಯಾಟ್ಸ್ಮನ್ಗಳು ಉತ್ತಮ ಜೊತೆಯಾಟ ನೀಡುತ್ತದ್ದರೆ, ಆಗ ನಮ್ಮ ಆಟಗಾರರನ್ನು ದಣಿವರಿಯದಂತೆ ನೋಡಿಕೊಳ್ಳಲು ಜಡೇಜಾ ಜೋಕ್ಗಳನ್ನು ಹೇಳುತ್ತಿರುತ್ತಾರೆ. ಇದು ಇಡೀ ತಂಡವನ್ನು ರೋಮಾಂಚನಗೊಳಿಸುತ್ತದೆ" ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.