ಮನೆಯೊಳಗೆ ಹೋಗುತ್ತಿದ್ದಂತೆ ಅಣ್ಣ ನನ್ನನ್ನು ತರಾಟೆಗೆ ತೆಗೆದುಕೊಂಡರು. ಲಕ್ಷ್ಮಣ್ ಜೊತೆ ಮೈದಾನದಲ್ಲಿ ನೀನು ಹಾಗೆ ನಡೆದುಕೊಳ್ಳಬಾರದಿತ್ತು. ಆತ ನಿನ್ನ ಸಹ ಆಟಗಾರ. ನಿನ್ನ ಹಾಗೆ ಆತನೂ ತಂಡಕ್ಕಾಗೆ ಆಡುತ್ತಿದ್ದಾನೆ. ನೀನೊಬ್ಬನೇ ಆಡೋ ಪಂದ್ಯವಲ್ಲ ಅದು ನೆನಪಿಟ್ಟುಕೊ ಎಂದು ಅಜಿತ್ ನನಗೆ ಬುದ್ದಿವಾದ ಹೇಳಿದ್ದರು ಎಂದು ಸಚಿನ್ ತೆಂಡೂಲ್ಕರ್ ನೆನಪಿಸಿಕೊಂಡಿದ್ದಾರೆ.