10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

Hedley Verity: ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್‌ರಂತಹ ಬ್ಯಾಟ್ಸ್‌ಮನ್‌ರನ್ನು ಅತೀ ಹೆಚ್ಚು ಕಾಡಿದ ಬೌಲರ್​ಗಳಲ್ಲಿ ಹೆಡ್ಲಿ ಮುಂಚೂಣಿಯಲ್ಲಿದ್ದಾರೆ. ಅದರ ಫಲಿತಾಂಶವೇ 8 ಬಾರಿ ಬ್ರಾಡ್ಮನ್ ಈ ಸ್ಪಿನ್ನರ್​ಗೆ ಔಟಾಗಿರುವುದು.

First published:

 • 113

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಕ್ರಿಕೆಟ್ ಅಂಗಳ ಹಲವು ಶ್ರೇಷ್ಠ ಸಾಧನೆಗೆ ಸಾಕ್ಷಿಯಾಗಿದೆ. ಹಾಗೆಯೇ ವಿಶ್ವ ಶ್ರೇಷ್ಠ ಆಟಗಾರರಿಗೂ. ಆದರೆ ಮೈದಾನದಲ್ಲಿ ಮಾತ್ರವಲ್ಲದೆ, ಯುದ್ದ ಭೂಮಿಯಲ್ಲೂ ಕಣಕ್ಕಿಳಿದ ಆಟಗಾರರೊಬ್ಬರಿದ್ದಾರೆ.

  MORE
  GALLERIES

 • 213

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಅವರ ಹೆಸರು ಹೆಡ್ಲಿ ವೆರಿಟಿ. ಇಂಗ್ಲೆಂಡ್ ತಂಡದ ಆಟಗಾರ. ಆಟಗಾರ ಎನ್ನುವುದಕ್ಕಿಂತ ಮಹಾನ್ ಗ್ರೇಟ್ ಲೆಜೆಂಡ್ ಎನ್ನಬಹುದು. ಏಕೆಂದರೆ ಹೆಡ್ಲಿ ತಮ್ಮ ಫಸ್ಟ್ ಕ್ಲಾಸ್ ಕ್ರಿಕೆಟ್ ವೃತ್ತಿಜೀವನದಲ್ಲಿ ಪಡೆದಿರುವ ವಿಕೆಟ್ ಸಂಖ್ಯೆ 1956 ಎಂದರೆ ನಂಬಲೇಬೇಕು.

  MORE
  GALLERIES

 • 313

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಮೇ 18, 1905 ರಂದು ಜನಿಸಿದ ಹೆಡ್ಲಿ ವೆರಿಟಿ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದರು. ಎಡಗೈ ಸ್ಪಿನ್ನರ್ ಆಗಿ ತಮ್ಮ ಕನಸು ಈಡೇರಿಸಿಕೊಂಡ ಹೆಡ್ಲಿ ಅವರನ್ನು ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

  MORE
  GALLERIES

 • 413

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್‌ರಂತಹ ಬ್ಯಾಟ್ಸ್‌ಮನ್‌ರನ್ನು ಅತೀ ಹೆಚ್ಚು ಕಾಡಿದ ಬೌಲರ್​ಗಳಲ್ಲಿ ಹೆಡ್ಲಿ ಮುಂಚೂಣಿಯಲ್ಲಿದ್ದಾರೆ. ಅದರ ಫಲಿತಾಂಶವೇ 8 ಬಾರಿ ಬ್ರಾಡ್ಮನ್ ಈ ಸ್ಪಿನ್ನರ್​ಗೆ ಔಟಾಗಿದ್ದರು. ಇದುವೇ ಹೆಡ್ಲಿ ಅವರು ಎಂತಹ ಅದ್ಭುತ ಸ್ಪಿನ್ನರ್ ಎಂಬುದಕ್ಕೆ ಸಾಕ್ಷಿ.

  MORE
  GALLERIES

 • 513

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಅಲ್ಲದೆ ಹೆಡ್ಲಿ ಅವರ ಹೆಸರಿನಲ್ಲೊಂದು ವಿಶ್ವದಾಖಲೆ ಇದೆ. ಆ ದಾಖಲೆಯನ್ನು ಸದ್ಯಕ್ಕಂತು ಯಾರಿಂದಲೂ ಮುರಿಯಲು ಅಸಾಧ್ಯ. ಜುಲೈ 12, 1932 ರಂದು ಯಾರ್ಕ್​ಶೈರ್ ಮತ್ತು ನಾಟಿಂಗ್​ಹ್ಯಾಮ್​ಶೈರ್ ತಂಡಗಳು ಮುಖಾಮುಖಿಯಾಗಿದ್ದವು.

  MORE
  GALLERIES

 • 613

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಮಳೆಯಿಂದಾಗಿ ಎರಡನೇ ದಿನ ಕೆಲವೊತ್ತು ಮಾತ್ರ ಪಂದ್ಯ ನಡೆಯಿತು. ಈ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಯಾರ್ಕ್​ಶೈರ್ ತಂಡವು ನ್ಯಾಟಿಂಗ್​ಹ್ಯಾಮ್​ಗಿಂತ 71 ರನ್​ಗಳ ಹಿನ್ನೆಡೆ ಹೊಂದಿತ್ತು.

  MORE
  GALLERIES

 • 713

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಮಳೆಯ ಕಾರಣ ಯಾರ್ಕ್​ಶೈರ್ ತಮ್ಮ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು. ಅತ್ತ ಎರಡನೇ ಇನಿಂಗ್ಸ್ ಆರಂಭಿಸಿದ ನ್ಯಾಟಿಂಗ್​ಹ್ಯಾಮ್ ವಿಕೆಟ್ ತರಗೆಲೆಗಳಂತೆ ಉದುರಿದ್ದವು. ಹೆಡ್ಲಿ ಬೌಲಿಂಗ್ ಮುಂದೆ ಯಾವುದೇ ಬ್ಯಾಟ್ಸ್​ಮನ್​ ಕ್ರೀಸ್ ಕಚ್ಚಿ ನಿಲ್ಲಲಾಗಲಿಲ್ಲ.

  MORE
  GALLERIES

 • 813

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಕೇವಲ 10 ರನ್ ನೀಡಿದ ಹೆಡ್ಲಿ ನಾಟಿಂಗ್​ಹ್ಯಾಮ್​ಶೈರ್ ತಂಡದ 10 ಮಂದಿ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಕಳುಹಿಸಿದ್ದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನ ಸರ್ವಶ್ರೇಷ್ಠ ದಾಖಲೆಯಾಗಿದೆ. ಹಾಗೆಯೇ 10 ವಿಕೆಟ್‌ಗಳನ್ನು ಕಬಳಿಸಿ ಹ್ಯಾಟ್ರಿಕ್ ಪಡೆದ ವಿಶ್ವದ ಏಕೈಕ ಬೌಲರ್ ಎಂಬ ದಾಖಲೆ ಕೂಡ ಹೆಡ್ಲಿ ವೆರಿಟಿ ಹೆಸರಿನಲ್ಲಿದೆ.

  MORE
  GALLERIES

 • 913

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಹೆಡ್ಲಿ ವೆರಿಟಿ ಕೇವಲ ಕ್ರಿಕೆಟಿಗನಾಗಿರಲಿಲ್ಲ. ಬದಲಾಗಿ ಸೇನೆಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದರು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಹೆಡ್ಲಿ ಇಟಾಲಿಯನ್ ನಗರ ಸಿಸಿಲಿಗೆ ದೇಶ ಸೇವೆಗಾಗಿ ತೆರಳಿದ್ದರು. ಅದಾಗಲೇ ಜರ್ಮನ್ ಸೈನ್ಯವು ಈ ನಗರವನ್ನು ಆಕ್ರಮಿಸಿಕೊಂಡಿತ್ತು.

  MORE
  GALLERIES

 • 1013

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಜರ್ಮನಿಯ ವಿರುದ್ಧದ ಯುದ್ದದ ವೇಳೆ ಹೆಡ್ಲಿಗೆ ಗುಂಡು ತಾಗಿತು. ಅಲ್ಲದೆ ವೆರಿಟಿ ಅವರನ್ನು ಕಸೆರ್ಟಾ ಸಿಟಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದಾಗ್ಯೂ, ವಿಪರೀತ ರಕ್ತಸ್ರಾವದಿಂದಾಗಿ 31 ಜುಲೈ 1943 ರಂದು ಹೆಡ್ಲಿ ಹುತಾತ್ಮರಾದರು.

  MORE
  GALLERIES

 • 1113

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಈ ವೇಳೆ ಕ್ರಿಕೆಟ್ ಅಂಗಳದ ಶ್ರೇಷ್ಠ ಸಾಧಕನಿಗೆ ಕೇವಲ ಕೇವಲ 38 ವರ್ಷ. ಇಡೀ ಕ್ರಿಕೆಟ್ ಜಗತ್ತು ಮತ್ತು ಇಂಗ್ಲೆಂಡ್ ಸರ್ಕಾರ ಹುತಾತ್ಮ ಆಟಗಾರನಿಗೆ ಗೌರವ ಸಲ್ಲಿಸಿತು.

  MORE
  GALLERIES

 • 1213

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಹೆಡ್ಲಿ ಇಂಗ್ಲೆಂಡ್ ಪರ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 144 ವಿಕೆಟ್ ಪಡೆದಿದ್ದರು. ಹಾಗೆಯೇ 1932–33ರಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು 4–1 ಅಂತರದಿಂದ ಸೋಲಿಸಿತು. ಆ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೆಡ್ಲಿ  104 ರನ್‌ಗಳಿಗೆ  15 ವಿಕೆಟ್ ಪಡೆದಿದ್ದರು.

  MORE
  GALLERIES

 • 1313

  10 ರನ್​ಗೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದರು: ಬಳಿಕ ದೇಶಕ್ಕಾಗಿ ಹುತಾತ್ಮರಾದರು..!

  ಅದರಲ್ಲೂ ಈ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಹೆಡ್ಲಿ, ಡಾನ್ ಬ್ರಾಡ್ಮನ್​ರನ್ನು ಔಟ್ ಮಾಡಿದ್ದರು ಎಂಬುದು ವಿಶೇಷ. ಹಾಗೆಯೇ  378 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಹೆಡ್ಲಿ  1956 ವಿಕೆಟ್ ಪಡೆದಿದ್ದಾರೆ.

  MORE
  GALLERIES