ಭಾರತೀಯ ಕ್ರಿಕೆಟ್ ತಂಡಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೀಡಿದ ಕೊಡುಗೆ ಅಪಾರ. ಅನೇಕ ದಾಖಲೆಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿರುವ ಕ್ರಿಕೆಟ್ ದೇವರು ಅದೆಷ್ಟೊ ಆಟಗಾರರಿಗೆ ಮಾದರಿಯಾಗಿದ್ದಾರೆ.
2/ 10
ಸಚಿನ್ ಏಕದಿನ ಕ್ರಿಕೆಟ್ನಲ್ಲೂ ದ್ವಿಶತಕ ಸಿಡಿಸಬಹುದು ಎಂಬುವುದನ್ನು ತೋರಿಸಿಕೊಟ್ಟವರು. ಆ ಬಳಿಕ ರೋಹಿತ್ ಶರ್ಮಾ ಸೇರಿ ಇತರೆ ಆಟಗಾರರು ಈ ಸಾಧನೆ ಮಾಡಿದರು.
3/ 10
ಹೀಗೆ ಬ್ಯಾಟಿಂಗ್ನಲ್ಲಿ ತನ್ನದೆ ಆದ ವಿಶಿಷ್ಠ ಛಾಪು ಮೂಡಿಸಿದ್ದ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ನ ಆರಾಧ್ಯ ದೈವ ಕೂಡ ಹೌದು.
4/ 10
ಹಾಗಾದ್ರೆ ಟೀಂ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಸಚಿನ್ ತೆಂಡೂಲ್ಕರ್ ಯಾರು?. ಇದಕ್ಕೆ ಸುರೇಶ್ ರೈನಾ ಉತ್ತರ ಕೊಟ್ಟಿದ್ದಾರೆ.
5/ 10
ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಪ್ರಮುಖವಾದ ಜಹೀರ್ ಖಾನ್ ನಮ್ಮ ತಂಡದ ಪಾಲಿಗೆ ಬೌಲಿಂಗ್ ವಿಭಾಗದ ಸಚಿನ್ ತೆಂಡೂಲ್ಕರ್ ಎಂದು ರೈನಾ ಹೇಳಿದ್ದಾರೆ.
6/ 10
2011ರ ವಿಶ್ವಕಪ್ ಕ್ಷಣವನ್ನು ನೆನಪಿಸಿಕೊಂಡ ಸುರೇಶ್ ರೈನಾ, ನಾವಂದು ವಿಶ್ವಕಪ್ ಗೆಲ್ಲಲು ಮಾಡಿದ ಸಾಹಸದಲ್ಲಿ ಟೀಂ ಇಂಡಿಯಾ ಬೌಲರ್ಗಳ ಪಾತ್ರವೂ ಮುಖ್ಯವಾಗಿತ್ತು. ಬೌಲಿಂಗ್ ವಿಭಾಗಕ್ಕೆ ಜಹೀರ್ ಖಾನ್ ಬಾಸ್ ಆಗಿದ್ದರು ಎಂಬುದು ರೈನಾ ಮಾತು.
7/ 10
ಇನ್ನೂ ವಿಶ್ವಕಪ್ ಗೆದ್ದ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿರುವ ರೈನಾ, ದೀಪಾವಳಿ, ಹೋಳಿ ಹಬ್ಬದಂತೆ ಪ್ರತಿ ವರ್ಷ ವಿಶ್ವಕಪ್ ಗೆಲುವನ್ನು ಸಂಭ್ರಮಿಸುತ್ತೇವೆ ಎಂದರು.
8/ 10
2011 ಏಕದಿನ ವಿಶ್ವಕಪ್ನಲ್ಲಿ ಜಹೀರ್ ಖಾನ್ ಒಟ್ಟು 21 ವಿಕೆಟ್ಗಳನ್ನು ಕಬಳಿಸಿದ್ದರು. 9 ಪಂದ್ಯಗಳಲ್ಲಿ 18.76ರ ಸರಾಸರಿಯನ್ನು ಕಾಪಾಡಿದ್ದರು.
9/ 10
ಸುರೇಶ್ ರೈನಾ ಸದ್ಯ ಟೀಂ ಇಂಡಿಯಾ ಪರ ಕಣಕ್ಕಿಳಿಯದೆ ಸುಮಾರು ಎರಡು ವರ್ಷಗಳು ಕಳೆದಿವೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ.
10/ 10
ಸದ್ಯ ಟೀಂ ಇಂಡಿಯಾ ಯುವ ಆಟಗಾರರಿಂದಲೇ ಕೂಡಿದ್ದು, ಸುರೇಶ್ ರೈನಾ ಭಾರತೀಯ ಜೆರ್ಸಿ ತೊಡುವುದು ಅನುಮಾನ ಎಂದೇ ಹೇಳಬಹುದು.