ಟೀಂ ಇಂಡಿಯಾದಲ್ಲಿ ಬಹುಕಾಲದಿಂದ ಕಾಡುತ್ತಿರುವ ನಾಲ್ಕನೇ ಕ್ರಮಾಂಕದ ಸಮಸ್ಯೆಗೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಪರಿಹಾರ ಸೂಚಿಸಿದ್ದಾರೆ.
2/ 8
ಸೀಮಿತ ಓವರ್ ಕ್ರಿಕೆಟ್ನಲ್ಲಿ ನಂಬರ್ 4 ಸ್ಥಾನಕ್ಕೆ ಶ್ರೇಯಸ್ ಐಯರ್ ಸೂಕ್ತ ಆಟಗಾರ. ನಮ್ಮಲ್ಲಿದ್ದ ಬಹುಕಾಲದ ಸಮಸ್ಯೆ ಪರಿಹರಿಸುವ ಆಟಗಾರ ಐಯರ್ ಎಂದು ಎಂಎಸ್ಕೆ ಪ್ರಸಾದ್ ಹೇಳಿದ್ದಾರೆ.
3/ 8
ನಿಮಗೆ ನೆನಪಿರಬಹುದು 18 ತಿಂಗಳ ಹಿಂದೆ ವಿರಾಟ್ ಕೊಹ್ಲಿ ವಿಶ್ರಾಂತಿ ಬಯಸಿದಾಗ ಶ್ರೇಯಸ್ ಐಯರ್ಗೆ ಅವಕಾಶ ನೀಡಿದ್ದೆವು- ಎಂಎಸ್ಕೆ ಪ್ರಸಾದ್
4/ 8
ಆ ಸಂದರ್ಭ ಐಯರ್ ತಮ್ಮ ಜವಾಬ್ದಾರಿ ಅರಿತು ಉತ್ತಮ ಆಟ ಪ್ರದರ್ಶಿಸಿದ್ದರು. ದುರಾದೃಷ್ಟವಶಾತ್ ಅವರನ್ನು ಮುಂದಿನ ಸರಣಿಗೆ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ- ಎಂಎಸ್ಕೆ ಪ್ರಸಾದ್
5/ 8
ಆದರೆ, ನಂತರದಲ್ಲಿ ಅವರು ದೇಶೀಯ ಟೂರ್ನಿಯಲ್ಲಿ ಆಡಿ ಮತ್ತಷ್ಟು ಪ್ರಬುದ್ಧರಾಗಿ ಟೀಂ ಇಂಡಿಯಾಕ್ಕೆ ಆಯ್ಕೆಯಾದರು- ಎಂಎಸ್ಕೆ ಪ್ರಸಾದ್
6/ 8
ಸದ್ಯ ಭಾರತ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದು, 4ನೇ ಕ್ರಮಾಂಕದ ತೊಂದರೆಯನ್ನು ದೂರಮಾಡಿದ್ದಾರೆ ಎಂದು ಎಂಎಸ್ಕೆ ಪ್ರಸಾದ್ ಹೇಳಿದ್ದಾರೆ..
7/ 8
ಬಾಂಗ್ಲಾದೇಶ ವಿರುದ್ಧದ ನಾಗ್ಪುರ ಟಿ-20 ಯಲ್ಲಿ ಭಾರತ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡಾದ ಶ್ರೇಯಸ್ ಐಯರ್ ಸಂದರ್ಭವನ್ನು ಅರಿತು ಚೆನ್ನಾಗಿ ಬ್ಯಾಟ್ ಬೀಸಿದರು ಎಂದು ಐಯರ್ ಬಗ್ಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಮೆಚ್ಚುಗೆಯ ಮಾತನಾಡಿದ್ದಾರೆ.
8/ 8
ರಾಹುಲ್ ಹಾಗೂ ಐಯರ್ ಆಟದಿಂದ ಬಾರತ ಉತ್ತಮ ಮೊತ್ತ ಪೇರಿಸುವಂತಾಯಿತು. ಶ್ರೇಯಸ್ ಐಯರ್ ಬ್ಯಾಟ್ ಬೀಸುವ ಮುನ್ನ ತಂಡದ ಸ್ಥಿತಿ ಹೇಗಿದೆ ಎಂಬುವುದನ್ನು ಅರಿತುಕೊಳ್ಳುತ್ತಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.