ಇಂದು ಶಿಕ್ಷಕರ ದಿನಾಚರಣೆಯಾಗಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ತಮ್ಮ ಬಾಲ್ಯದ ಕೋಚ್, ಗುರು ರಮಾಕಾಂತ್ ಅಚ್ರೇಕರ್ ಅವರನ್ನು ಸ್ಮರಿಸಿದ್ದಾರೆ
2/ 8
ಶಿಕ್ಷಕರು ಕೇವಲ ಶಿಕ್ಷಣ ಮಾತ್ರವಲ್ಲದೆ ಅತ್ಯಮೂಲ್ಯ ಮೌಲ್ಯವನ್ನು ನೀಡುತ್ತಾರೆ, ಜೀವನ ಹಾಗೂ ಮೈದಾನದಲ್ಲಿ ಯಾವ ರೀತಿ ಇರಬೇಕೆಂದು ಅಚ್ರೇಕರ್ ಸರ್ ನನಗೆ ಕಲಿಸಿಕೊಟ್ಟರು ಎಂದು ಸಚಿನ್ ಹೇಳಿದ್ದಾರೆ
3/ 8
ಅಂದು ಅಚ್ರೇಕರ್ ನನಗೆ ಮಾಡಿದ ಪಾಠಗಳು ಇಂದಿಗೂ ಮಾರ್ಗದರ್ಶನ ನೀಡುತ್ತಿದೆ. ಅವರಿಗೆ ನಾನು ಎಂದಿಗೂ ಕೃತಜ್ಞನಾಗಿರುತ್ತೇನೆ- ಸಚಿನ್
4/ 8
ಪ್ರತಿ ವರ್ಷದ ಶಿಕ್ಷಕರ ದಿನಾಚರಣೆಯಂದು ಸಚಿನ್ ತಮ್ಮ ಗುರುಗಳಾದ ಅಚ್ರೇಕರ್ರನ್ನು ನೆನಪಿಸುತ್ತಾರೆ
5/ 8
ಸಚಿನ್ ಕ್ರಿಕೆಟ್ ಹಾಗೂ ಜೀವನದಲ್ಲಿ ಅಚ್ರೇಕರ್ ಬೀರಿರುವ ಪ್ರಭಾವ ಮಹತ್ವದ್ದು
6/ 8
ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಜಗತ್ತಿನಾದ್ಯಂತ ಹಲವು ದಿನಾಂಕಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತೀಯ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರ ದಿನಾಚರಣೆ ಎಂದರೆ ಸೆಪ್ಟಂಬರ್ 5.
7/ 8
ಭಾರತದ ಮೊದಲ ಉಪ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ
8/ 8
ಅಮೆರಿಕದಲ್ಲಿ ಮೇ ತಿಂಗಳ ಮೊದಲ ಮಂಗಳವಾರದಿಂದ ಒಂದು ವಾರವನ್ನು ಗುರುವಿಗೆ ಅರ್ಪಿಸಲಾಗುತ್ತದೆ. ಇಂಡೋನೇಷ್ಯಾದಲ್ಲಿ ನವೆಂಬರ್ 25, ಚೀನಾ ಸೆಪ್ಟಂಬರ್-28, ವಿಯೆಟ್ನಾಂ ನವೆಂಬರ್-20, ಮಲೇಷ್ಯಾ ಮೇ-16..ಹೀಗೆ ಹಲವು ದೇಶಗಳಲ್ಲಿ ಬೇರೆ ಬೇರೆ ದಿನಗಳನ್ನು ಗುರುವಿಗಾಗಿ ಮೀಸಲಿಡಲಾಗಿದೆ.