Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

1999, 2003, 2007ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಸತತ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮೆಕ್​ಗ್ರಾತ್ ಕೊಡುಗೆ ಕೂಡ ಇದೆ. ನಿವೃತ್ತಿ ಅಂಚಿನಲ್ಲಿ ಆಡಿದ 2007ರ ವಿಶ್ವಕಪ್​ನಲ್ಲಿ ಒಟ್ಟು 26 ವಿಕೆಟ್ ಉರುಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

First published:

  • 18

    Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

    ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾತ್ ಅವರು ವಿಶ್ವ ಶ್ರೇಷ್ಠ ಬೌಲರುಗಳನ್ನು ಗುರುತಿಸಿಕೊಂಡಿದ್ದರು. 14 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ 250 ಏಕದಿನ ಪಂದ್ಯಗಳನ್ನಾಡಿರುವ ಮೆಕ್​ಗ್ರಾತ್ 381 ವಿಕೆಟ್ ಪಡೆದಿರುವುದೇ ಅವರ ಶ್ರೇಷ್ಠತೆಗೆ ಸಾಕ್ಷಿ.

    MORE
    GALLERIES

  • 28

    Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

    ಅದರಲ್ಲೂ 1999, 2003, 2007ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಸತತ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮೆಕ್​ಗ್ರಾತ್ ಕೊಡುಗೆ ಕೂಡ ಇದೆ. ನಿವೃತ್ತಿ ಅಂಚಿನಲ್ಲಿ ಆಡಿದ 2007ರ ವಿಶ್ವಕಪ್​ನಲ್ಲಿ ಒಟ್ಟು 26 ವಿಕೆಟ್ ಉರುಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

    MORE
    GALLERIES

  • 38

    Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

    ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಗ್ಲೆನ್ ಮೆಕ್​ಗ್ರಾತ್, ಏಕದಿನ ಕ್ರಿಕೆಟ್ ಶ್ರೇಷ್ಠ ಬೌಲರುಗಳನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಲ್ಲ ಎಂಬುದು ವಿಶೇಷ. ಆಸ್ಟ್ರೇಲಿಯಾ ವೇಗಿ ತಿಳಿಸಿದ ಶ್ರೇಷ್ಠ ಬೌಲರುಗಳ ಹೆಸರು ಈ ಕೆಳಗಿನಂತಿವೆ.

    MORE
    GALLERIES

  • 48

    Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

    5. ಶಾನ್ ಪೊಲಾಕ್ : 303 ಏಕದಿನ ಪಂದ್ಯಗಳನ್ನು ಆಡಿರುವ ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ 393 ವಿಕೆಟ್‌ಗಳನ್ನು ಪಡೆದಿದ್ದಾರೆ.

    MORE
    GALLERIES

  • 58

    Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

    4. ಚಾಮಿಂಡ ವಾಸ್: ಶ್ರೀಲಂಕಾದ ವೇಗಿ ಚಮಿಂಡಾ ವಾಸ್ ಅವರಿಗೆ ಗ್ಲೆನ್ ಮೆಕ್​ಗ್ರಾತ್​ 4ನೇ ಸ್ಥಾನ ನೀಡಿದ್ದಾರೆ. 322 ಏಕದಿನ ಪಂದ್ಯಗಳಿಂದ ಲಂಕಾ ವೇಗಿ 400 ವಿಕೆಟ್ ಉರುಳಿಸಿದ್ದಾರೆ.

    MORE
    GALLERIES

  • 68

    Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

    3. ಬ್ರೆಟ್ ಲೀ: ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಮೆಕ್​ಗ್ರಾತ್ ಅವರ ಶ್ರೇಷ್ಠ ಬೌಲರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 221 ಏಕದಿನ ಪಂದ್ಯಗಳನ್ನು ಆಡಿರುವ ಬ್ರೆಟ್ ಲೀ 380 ವಿಕೆಟ್ ಕಬಳಿಸಿದ್ದಾರೆ.

    MORE
    GALLERIES

  • 78

    Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

    2. ಮುತ್ತಯ್ಯ ಮುರಳೀಧರನ್: ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡವರು. ಹೀಗಾಗಿ ಮೆಕ್​ಗ್ರಾತ್ ಪಟ್ಟಿಯಲ್ಲೂ ಮುರಳೀಧರನ್ ಹೆಸರು ಕಾಣಿಸಿಕೊಂಡಿದೆ. 350 ಏಕದಿನ ಪಂದ್ಯಗಳನ್ನಾಡಿರುವ ಮುರಳಿ 534 ವಿಕೆಟ್ ಕಬಳಿಸಿದ್ದಾರೆ.

    MORE
    GALLERIES

  • 88

    Glenn McGrath: ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ ಟಾಪ್ ಬೌಲರುಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾತ್

    1. ವಾಸಿಮ್ ಅಕ್ರಮ್: ಪಾಕಿಸ್ತಾನದ ಎಡಗೈ ಸ್ವಿಂಗ್ ಮಾಂತ್ರಿಕ ವಾಸಿಮ್ ಅಕ್ರಮ್ ಅವರು ಮೆಕ್​ಗ್ರಾತ್ ಅವರ ಸರ್ವಶ್ರೇಷ್ಠ ಬೌಲರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. 356 ಏಕದಿನ ಪಂದ್ಯಗಳನ್ನಾಡಿರುವ ಅಕ್ರಮ್ 502 ವಿಕೆಟ್ ಉರುಳಿಸಿ ಮಿಂಚಿದ್ದಾರೆ.

    MORE
    GALLERIES