Gautam Gambhir: ಮಾಡದ ತಪ್ಪಿಗೆ ನನ್ನನ್ನು ಬ್ಯಾನ್ ಮಾಡಲಾಗಿತ್ತು..!
Gautam Gambhir: ಆಸ್ಟ್ರೇಲಿಯಾ ಆಟಗಾರನ ವಿರುದ್ಧದ ಜಟಾಪಟಿ ಬಗ್ಗೆ ಖುದ್ದು ಗೌತಮ್ ಗಂಭೀರ್ ಮಾತನಾಡಿದ್ದಾರೆ. ಅಂದು ನಿಜಕ್ಕೂ ಏನು ನಡೆಯಿತು, ಯಾಕಾಗಿ ಬ್ಯಾನ್ ಮಾಡಿದ್ರೂ ಎಂಬ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.
2008 ರಲ್ಲಿ ಆಸ್ಟ್ರೇಲಿಯಾ ಟೀಮ್ ಇಂಡಿಯಾ ವಿರುದ್ಧದ ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿತ್ತು. ಬಲಿಷ್ಠ ಎರಡು ತಂಡಗಳ ಮುಖಾಮುಖಿ ಮೈದಾನದಲ್ಲೂ ರೋಚಕತೆಗೆ ಸಾಕ್ಷಿಯಾಗಿತ್ತು.
2/ 7
ಇದೇ ವೇಳೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯ ಗಂಭೀರ್ ಹಾಗೂ ಶೇನ್ ವಾಟ್ಸ್ನ್ ನಡುವೆ ಜಟಾಪಟಿಗೆ ಕಾರಣವಾಗಿತ್ತು. ರನ್ ಕದಿಯಲು ಓಡುವಾಗ ಗಂಭೀರ್ ಮೊಣಕೈ ಆಸೀಸ್ ಆಟಗಾರನ ಹೊಟ್ಟೆಗೆ ಗುದ್ದಿಕೊಂಡಿತ್ತು. ಮೈದಾನದಲ್ಲಿನ ಅಹಿತಕರ ಘಟನೆ ಬಳಿಕ ಟೀಮ್ ಇಂಡಿಯಾ ಆರಂಭಿಕನಿಗೆ ಒಂದು ಪಂದ್ಯದ ಮೇಲೆ ನಿಷೇಧ ಹೇರಲಾಗಿತ್ತು.
3/ 7
ಈ ಬಗ್ಗೆ ಖುದ್ದು ಗೌತಮ್ ಗಂಭೀರ್ ಮಾತನಾಡಿದ್ದಾರೆ. ಅಂದು ನಿಜಕ್ಕೂ ಏನು ನಡೆಯಿತು, ಯಾಕಾಗಿ ಬ್ಯಾನ್ ಮಾಡಿದ್ರೂ ಎಂಬ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.
4/ 7
ಅನಿಲ್ ಕುಂಬ್ಳೆ ನಾಯಕತ್ವದಡಿಯಲ್ಲಿ ನಾವು ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡುತ್ತಿದ್ದೆವು. ಪಂದ್ಯವೊಂದರ ವೇಳೆ ನಾನು ರನ್ ಕದಿಯುವಾಗ ಶೇನ್ ವಾಟ್ಸನ್ ಅವರ ಹೊಟ್ಟೆಗೆ ನನ್ನ ಮೊಣಕೈ ತಾಗಿತ್ತು. ಆದರೆ ಅದು ಉದ್ದೇಶಪೂರ್ವಕವಾಗಿರಲಿಲ್ಲ.
5/ 7
ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಎಲ್ಲರೂ ನಂದೇ ತಪ್ಪು ಎಂದು ಭಾವಿಸಿದ್ದರು. ಆದರೆ ನಾನು ಒಪ್ಪಿಕೊಂಡಿರಲಿಲ್ಲ. ಮ್ಯಾಚ್ ರೆಫರಿ ಕ್ರಿಸ್ ಬೋರ್ಡ್ ನನ್ನನ್ನು ವಿಚಾರಣೆಗೆ ಕರೆದಿದ್ದರು. ಈ ಬಗ್ಗೆ ತಂಡದ ಅಂದಿನ ಕೋಚ್ ಗ್ಯಾರಿ ಕಸ್ಟರ್ನ್ ಅವರೊಂದಿಗೆ ಚರ್ಚಿಸಿದೆ.
6/ 7
ಅವರು ಚಿಂತಿಸಬೇಡ, ತಪ್ಪನ್ನು ಒಪ್ಪಿಕೊ, ಇನ್ಮುಂದೆ ತಪ್ಪು ಮಾಡುವುದಿಲ್ಲ ಎಂದು ಅವರಿಗೆ ಹೇಳು. ಇದರಿಂದ ನಿನ್ನ ಮೇಲೆ ಯಾವುದೇ ಕ್ರಮಕೈಗೊಳಲ್ಲ ಎಂದರು. ನಾನೂ ಕೂಡ ಮಾಡದ ತಪ್ಪನ್ನು ರೆಫರಿ ಮುಂದೆ ಒಪ್ಪಿಕೊಂಡೆ.
7/ 7
ಇದರ ಫಲಿತಾಂಶ ನನ್ನನ್ನು ಒಂದು ಮ್ಯಾಚ್ನಿಂದ ಬ್ಯಾನ್ ಮಾಡಿದರು. ಅಂದು ಗ್ಯಾರಿ ಮಾತನ್ನು ಕೇಳಿ ನಾನು ಸುಮ್ಮನೆ ನಿಷೇಧಕ್ಕೊಳಗಾದೆ ಎಂದು ಗೌತಮ್ ಗಂಭೀರ್ ತಮ್ಮ ವೃತ್ತಿಜೀವನದ ಕ್ರಿಕೆಟ್ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ.