ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

2011ರ ವಿಶ್ವಕಪ್ ಬಗ್ಗೆ ಮಾತನಾಡಿದ ಗಂಭೀರ್, ಭಾರತದಲ್ಲಿ ನಡೆದ ವಿಶ್ವಕಪ್‌ ವೇಳೆ ತಂಡದಲ್ಲಿ ಸೂಪರ್ ಸ್ಟಾರ್‌ಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಅವರಂತಹ ಪ್ರತಿಭಾವಂತರಿದ್ದರು.

First published:

  • 111

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಟೀಮ್ ಇಂಡಿಯಾ ಎರಡು ವಿಶ್ವಕಪ್​ ಗೆಲ್ಲುವಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಹಾಗೂ ಗೌತಮ್ ಗಂಭೀರ್ ಅವರ ಅದ್ಭುತ ಆಟ ಪ್ರಮುಖ ಪಾತ್ರವಹಿಸಿತ್ತು.

    MORE
    GALLERIES

  • 211

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಟಿ20 ವಿಶ್ವಕಪ್​ ಫೈನಲ್​ನಲ್ಲಿ 75 ರನ್ ಬಾರಿಸಿದ್ದ ಗಂಭೀರ್, 2011ರ ಏಕದಿನ ವಿಶ್ವಕಪ್​ನಲ್ಲಿ 97 ರನ್ ಸಿಡಿಸಿದ್ದರು. ಈ ಮೂಲಕ ಎರಡು ವರ್ಲ್ಡ್​ಕಪ್ ಗೆಲ್ಲುವಲ್ಲಿ ತನ್ನದೆಯಾದ ಕಾಣಿಕೆ ನೀಡಿದ್ದರು ಎಡಗೈ ದಾಂಡಿಗ.

    MORE
    GALLERIES

  • 311

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಸದ್ಯ ವೃತ್ತಿಜೀವನಕ್ಕೆ ವಿದಾಯ ಹೇಳಿರುವ ಗಂಭೀರ್, ವಿದಾಯ ಹೇಳಲು ತುದಿಗಾಲಲ್ಲಿ ನಿಂತಿರುವ ಮಹೇಂದ್ರ ಸಿಂಗ್ ಜೊತೆಗಿನ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 411

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಭಾರತ ಎ ತಂಡದ ಪರ ಜೊತೆಯಾಗಿಯೇ ಆಡಿದ್ದರು. ಅದರಲ್ಲೂ 2004 ರ ಜಿಂಬಾಬ್ವೆ ಪ್ರವಾಸದಲ್ಲಿ ಗೌತಿ ಹಾಗೂ ಧೋನಿ ರೂಮ್​ಮೇಟ್​ಗಳಾಗಿದ್ದರು.

    MORE
    GALLERIES

  • 511

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಈ ವೇಳೆ ಇಬ್ಬರ ನಡುವಣ ಚರ್ಚೆಯ ವಿಷಯವೆಂದರೆ ಕೂದಲು. ಹೌದು, ಉದ್ದ ಕೂದಲ ಸ್ಟೈಲಿಷ್ಟ್​ ಆಟಗಾರನಾಗಿದ್ದ ಧೋನಿಯ ಕೂದಲಿನ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡುತ್ತಿದ್ದೆವು ಎಂದು ಗಂಭೀರ್ ಹಳೆಯ ನೆನಪನ್ನು ಮೆಲುಕುಹಾಕಿದ್ದಾರೆ.

    MORE
    GALLERIES

  • 611

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ನಾವಿಬ್ಬರೂ ಒಂದು ತಿಂಗಳಿಗೂ ಹೆಚ್ಚು ಕಾಲ ಒಂದೇ ರೂಮ್​ನಲ್ಲಿದ್ದೆವು. ಕೊಠಡಿ ಚಿಕ್ಕದಾದ್ದರಿಂದ ಮಲಗಲು ಕಷ್ಟವಾಗುತ್ತಿತ್ತು. ಹೀಗಾಗಿ ರೂಮ್​ನಲ್ಲಿ ಹಾಕಲಾಗಿದ್ದ ಮಂಚವನ್ನು ತೆಗೆಸಿ ನೆಲದ ಮೇಲೆ ಹಾಸಿಗೆ ಹಾಕಿಕೊಂಡು ಮಲಗಿದ್ದೆವು ಗಂಭೀರ್ ಸ್ಮರಿಸಿದರು.

    MORE
    GALLERIES

  • 711

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಈ ವೇಳೆ ಕೂದಲು ನಿರ್ವಹಣೆಗೆ ಏನು ಮಾಡುತ್ತಾರೆ ಎಂಬ ಕುತೂಹಲವಿತ್ತು. ಹೀಗಾಗಿ ಅದರ ಬಗ್ಗೆ ನಮ್ಮ ನಡುವೆ ಚರ್ಚೆಗಳು ನಡೆಯುತ್ತಿದ್ದೆವು ಎಂದು ಗೌತಿ ತಿಳಿಸಿದರು.

    MORE
    GALLERIES

  • 811

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಜಿಂಬಾಬ್ವೆ ಪ್ರವಾಸವಲ್ಲದೆ, ಕೀನ್ಯಾದಲ್ಲಿ ನಡೆದ ಟೂರ್ನಿಗಾಗಿ ನಾವಿಬ್ಬರೂ ಜೊತೆಯಾಗಿ ಆಡಿದ್ದೆವು. ಹೀಗೆ ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆದಿದ್ದೇವೆ. ಒಬ್ಬ ಆಟಗಾರನೊಂದಿಗೆ ಒಂದು ತಿಂಗಳು ಕಳೆದಿದ್ದರಿಂದ ಅವರ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿ ಧೋನಿಯ ಬಗ್ಗೆ ಮೊದಲೇ ನನಗೆ ಗೊತ್ತಿತ್ತು ಎಂದಿದ್ದಾರೆ ಗಂಭೀರ್.

    MORE
    GALLERIES

  • 911

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಇದೇ ವೇಳೆ 2011ರ ವಿಶ್ವಕಪ್ ಬಗ್ಗೆ ಮಾತನಾಡಿದ ಗಂಭೀರ್, ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೂಪರ್ ಸ್ಟಾರ್‌ಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಅವರನ್ನು ಹೊಂದಿರುವ ಬಲಿಷ್ಠ ತಂಡ ಪಡೆಯಲು ಧೋನಿ ಅದೃಷ್ಟ ಮಾಡಿದ್ದರು ಎಂದು ಗೌತಿ ಅಭಿಪ್ರಾಯಪಟ್ಟರು.

    MORE
    GALLERIES

  • 1011

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಧೋನಿ ಬಹಳ ಅದೃಷ್ಟಶಾಲಿ ನಾಯಕ. ಏಕೆಂದರೆ ಎಲ್ಲಾ ಮಾದರಿಯಲ್ಲೂ ಅವರಿಗೆ ಅದ್ಭುತ ತಂಡ ಲಭಿಸಿತ್ತು. 2011 ರ ವಿಶ್ವಕಪ್ ತಂಡವನ್ನು ಮುನ್ನಡೆಸುವುದು ಧೋನಿಗೆ ಸುಲಭವಾಗಿತ್ತು. ಏಕೆಂದರೆ ನಮ್ಮಲ್ಲಿ ಸಚಿನ್, ಸೆಹ್ವಾಗ್, ನನ್ನ, ಯುವರಾಜ್, ಯೂಸುಫ್, ವಿರಾಟ್ ಮುಂತಾದ ಆಟಗಾರರು ಇದ್ದರು.

    MORE
    GALLERIES

  • 1111

    ಗಂಗೂಲಿಯ ಪರಿಶ್ರಮ, ಧೋನಿ ಅದೃಷ್ಟವಂತ: ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

    ಆದರೆ ಇಂತಹದೊಂದು ತಂಡವನ್ನು ಕಟ್ಟಲು ಮಾಜಿ ನಾಯಕ ಸೌರವ್ ಗಂಗೂಲಿ ತುಂಬಾ ಶ್ರಮವಹಿಸಬೇಕಾಯಿತು. ಅದರ ಪ್ರತಿಫಲವಾಗಿ ಧೋನಿಗೆ ಉತ್ತಮ ತಂಡ ಲಭಿಸಿತು. ಹಾಗೆಯೇ ಅನೇಕ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಗಂಭೀರ್ ಹೇಳಿದರು.

    MORE
    GALLERIES