ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ನಡುವಣ ಶೀತಲ ಸಮರ ಮುಂದುವರೆದಿದೆ. 2007ರಲ್ಲಿ ನಾಗ್ಪುರದಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಣ ಪಂದ್ಯದಿಂದ ಆರಂಭವಾದ ಈ ಕಿತ್ತಾಟ ನಿವೃತ್ತಿ ಬಳಿಕ ಕೂಡ ಮುಂದುವರೆದಿರುವುದು ವಿಶೇಷ. ಇಬ್ಬರು ಆಟಗಾರರ ಆರೋಪ ಪ್ರತ್ಯಾರೋಪಗಳಿಗೆ ಹಲವು ಬಾರಿ ಸೋಷಿಯಲ್ ಮೀಡಿಯಾ ಸಾಕ್ಷಿಯಾಗಿತ್ತು.