2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊತ್ತಮೊದಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ಹೊಣೆಯನ್ನ ಎಂಎಸ್ ಧೋನಿಗೆ ಕೊಡಲಾಗಿತ್ತು. ಅದೂವರೆಗೂ ಯಾವ ತಂಡವನ್ನೂ ಮುನ್ನಡೆಸಿದ ಅನುಭವ ಇಲ್ಲದ ಧೋನಿಗೆ ದಿಢೀರ್ ಟೀಮ್ ಇಂಡಿಯಾ ಕ್ಯಾಪ್ಟನ್ಸಿ ಕೊಟ್ಟಿದ್ದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಟಿ20 ಕ್ರಿಕೆಟ್ನ ಅನುಭವ ಇಲ್ಲದ ಟೀಮ್ ಇಂಡಿಯಾ ನಾಕೌಟ್ ತಲುಪುವುದೇ ಕಷ್ಟ ಎಂದಿದ್ದರು ಹಲವರು. ಆದರೆ, ಧೋನಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಎಲ್ಲರ ಲೆಕ್ಕಾಚಾರ ಹುಸಿಗೊಳಿಸಿ ಚಾಂಪಿಯನ್ ಆಯಿತು. ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ, ಫೈನಲ್ ನಲ್ಲಿ ಪಾಕಿಸ್ತಾನವನ್ನ ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು. ಆ ತಂಡದ ಆಟಗಾರರು ಈಗ ಏನ್ಮಾಡ್ತಿದಾರೆ?
1) ಎಂಎಸ್ ಧೋನಿ: ಯಾವುದೇ ಹಂತದಲ್ಲೂ ಕ್ಯಾಪ್ಟನ್ಸಿ ಅನುಭವ ಇಲ್ಲದ ಧೋನಿ ನೇತೃತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿತು. ಅಲ್ಲಿಂದ ಧೋನಿ ಹಿಂದಿರುಗಿ ನೋಡಲಿಲ್ಲ. ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಕಂಡ ಅತ್ಯುತ್ತಮ ಕ್ಯಾಪ್ಟನ್ಗಳ ಪೈಕಿ ಅವರು ಪ್ರಮುಖರು. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರೂ ಸಿಎಸ್ಕೆ ತಂಡದ ನಾಯಕರಾಗಿ ನಾಲ್ಕನೇ ಬಾರಿ ಐಪಿಎಲ್ ಗೆಲ್ಲಿಸಿದ್ದಾರೆ. ಈಗ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಮೆಂಟಾರ್ ಆಗಿ ಕೆಲಸ ಮಾಡುತ್ತಿದ್ದಾರೆ.
2) ಯುವರಾಜ್ ಸಿಂಗ್: ಭಾರತ ಕಂಡ ಶ್ರೇಷ್ಠ ಮತ್ತು ಸ್ಫೋಟಕ ಕ್ರಿಕೆಟಿಗರಲ್ಲಿ ಇವರೂ ಒಬ್ಬರು. ಟಿ20 ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ರಂಥ ಬೌಲರ್ಗೆ 6 ಬಾಲ್ಗೆ ಆರು ಸಿಕ್ಸರ್ ಭಾರಿಸಿ ವಿಶ್ವದಾಖಲೆ ಸ್ಥಾಪಿಸಿದ್ದರು. ಆದರೆ, ಕ್ಯಾನ್ಸರ್ ರೋಗ ಬಂದು ಅವರ ಕ್ರಿಕೆಟ್ ವೃತ್ತಿ ಜೀವನ ಮುರುಟಿಹೋಗಿತ್ತು. ಕ್ಯಾನ್ಸರ್ ಗೆದ್ದ ಬಂದರೂ ಕ್ರಿಕೆಟ್ನಲ್ಲಿ ಮತ್ತೆ ಚೇತರಿಕೆ ಕಾಣಲು ಆಗಲಿಲ್ಲ. 2019ರಲ್ಲಿ ನಿವೃತ್ತರಾದ ಅವರು ಸದ್ಯ ಆಟದಲ್ಲಿ ಸಕ್ರಿಯವಾಗಿಲ್ಲ.
3) ವೀರೇಂದರ್ ಸೆಹ್ವಾಗ್: ಟೆಸ್ಟ್ ಕ್ರಿಕೆಟ್ನಲ್ಲಿ ಎರಡು ತ್ರಿಶತಕ ಭಾರಿಸಿದ ಏಕೈಕ ಭಾರತೀಯ ಕ್ರಿಕೆಟಿಗ ಇವರು. ಬ್ರಿಯಾನ್ ಲಾರಾ ಅವರ ವಿಶ್ವದಾಖಲೆ ಮುರಿಯಬಲ್ಲ ಸಾಮರ್ಥ್ಯ ಇರುವ ಬ್ಯಾಟರ್ ಎಂದೇ ಹಲವರು ನಿರೀಕ್ಷೆ ಇಟ್ಟುಕೊಂಡಿದ್ದವರು. ನಿವೃತ್ತರಾದ ಬಳಿಕ ಅವರು ತಮ್ಮದೇ ಶಾಲೆ ತೆರೆದಿದ್ದಾರೆ. ಕ್ರಿಕೆಟ್ ಕಾಮೆಂಟರಿ ಮಾಡುತ್ತಾರೆ. ಐಪಿಎಲ್ನಲ್ಲಿ ಪಂಜಾಬ್ ತಂಡದ ಕೋಚ್ ಕೂಡ ಆಗಿದ್ದಾರೆ.
5) ರಾಬಿನ್ ಉತ್ತಪ್ಪ: ಕೊಡುಗಿನ ರಾಬಿನ್ ಉತ್ತಪ್ಪ ಭಾರೀ ಭರವಸೆ ಹುಟ್ಟಿಸಿದ್ದ ಬ್ಯಾಟ್ಸ್ಮನ್. ಆದರೆ, ಟಿ20 ವಿಶ್ವಕಪ್ ಬಳಿಕ ಉತ್ತಪ್ಪ ಅವರಿಂದ ನಿರೀಕ್ಷಿತ ಪ್ರರ್ಶನ ಬರಲಿಲ್ಲ. ಐಪಿಎಲ್ ಮೂಲಕ ಇವರು ತಮ್ಮ ಸಾಮರ್ಥ್ಯ ತೋರ್ಪಡಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಐಪಿಎಲ್ನಲ್ಲೂ ಇವರಿಂದ ಸ್ಥಿರ ಪ್ರದರ್ಶನ ಬಂದಿರಲಿಲ್ಲ. ಈ ಐಪಿಎಲ್ನಲ್ಲಿ ಸಿಎಸ್ಕೆ ಪರ ಕೊನೆಯ ಕೆಲ ಪಂದ್ಯಗಳಲ್ಲಿ ರಾಬಿನ್ ಉತ್ತಪ್ಪ ಲಯ ಕಂಡುಕೊಂಡು ಗಮನ ಸೆಳೆದಿದ್ದಾರೆ.
6) ರೋಹಿತ್ ಶರ್ಮಾ: ಇವರು ಈಗಲೂ ಸಕ್ರಿಯರಾಗಿದ್ದಾರೆ. ಪೀಕ್ ಫಾರ್ಮ್ನಲ್ಲಿದ್ದಾರೆ. 2007ರ ಟಿ20 ವಿಶ್ವಕಪ್ನ ಫೈನಲ್ನಲ್ಲಿ ಇವರು 16 ಬಾಲ್ನಲ್ಲಿ 30 ರನ್ ಗಳಿಸಿದ್ದು ಭಾರತದ ಗೆಲುವಿಗೆ ಕೊಡುಗೆ ನೀಡಿತ್ತು. ಆ ವಿಶ್ವಕಪ್ನಲ್ಲಿ ಇವರಿಗೆ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಫೈನಲ್ ಪಂದ್ಯದ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ರೆಗ್ಯುಲರ್ ಸದಸ್ಯರಾದರು. ಈಗ ಮೂರು ಮಾದರಿಯ ಕ್ರಿಕೆಟ್ ತಂಡಗಳಲ್ಲೂ ಇವರು ಖಾಯಂ ಆಗಿ ಇರುತ್ತಾರೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಲವು ಬಾರಿ ಚಾಂಪಿಯನ್ ಹಂತಕ್ಕೆ ಕೊಂಡೊಯ್ದಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಇವರು ಅನೇಕ ಪಂದ್ಯಗಳಲ್ಲಿ ಮುನ್ನಡೆಸಿದ್ಧಾರೆ. ಕೊಹ್ಲಿ ನಂತರ ಇವರೇ ನಾಯಕರಾಗುವ ಸಾಧ್ಯತೆ ಇಲ್ಲದಿಲ್ಲ.
7) ದಿನೇಶ್ ಕಾರ್ತಿಕ್: ಎಂಎಸ್ ಧೋನಿ ಆಗಮನಕ್ಕೆ ಮುನ್ನ ಭಾರತ ತಂಡಕ್ಕೆ ಖಾಯಂ ವಿಕೆಟ್ ಕೀಪರ್ ಆಗುವ ಭರವಸೆ ಮೂಡಿಸಿದ್ದವರು ಇವರು. ಧೋನಿ ಬಂದ ನಂತರ ಇವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದೇ ದುಸ್ತರವಾಗಿದೆ. ಈಗ ರಿಷಭ್ ಪಂತ್, ಇಶಾನ್ ಕಿಶನ್ ಅವರಂತಹ ವಿಕೆಟ್ ಕೀಪರ್ ಬ್ಯಾಟರ್ಸ್ ಇರುವಾಗ ಟೀಮ್ ಇಂಡಿಯಾಗೆ ಸೇರಲು ದಿನೇಶ್ ಕಾರ್ತಿಕ್ಗೆ ಹೆಚ್ಚಿನ ಅವಕಾಶ ಇಲ್ಲ. ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರು ಇನ್ನೂ ನಿವೃತ್ತರಾಗಿಲ್ಲದಿದ್ದರೂ ಕಾಮೆಂಟರಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿಯಾಗುವುದು ಅಧಿಕೃತವಾಗಿ ಘೋಷಣೆ ಆಗಬೇಕಷ್ಟೇ.
8) ಇರ್ಫಾನ್ ಪಠಾಣ್: ಇವರು ಭಾರತ ಕಂಡ ಅತ್ಯುತ್ತಮ ವೇಗದ ಬೌಲರ್ಗಳಲ್ಲಿ ಒಬ್ಬರು. ಸ್ವಿಂಗ್ ಬೌಲಿಂಗ್ ಮಾಡಬಲ್ಲ ಅಪರೂಪದ ಬೌಲರ್. 2007ರ ವಿಶ್ವಕಪ್ನಲ್ಲಿ ಭಾರತದ ಗೆಲುವಿಗೆ ಇವರ ಬೌಲಿಂಗ್ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಸದ್ಯ ಇವರು ಟಿವಿ ಕಾಮೆಂಟರಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಇವರು ಜಮ್ಮು-ಕಾಶ್ಮೀರದಲ್ಲಿ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನ ಹೆಕ್ಕಿ ತೆಗೆದು ಪೋಷಿಸುವ ಕೆಲಸ ಮಾಡುತ್ತಿದ್ಧಾರೆ. ಇವರಿಂದ ಗುರುತಿಸಲ್ಪಟ್ಟ ಪ್ರತಿಭೆಗಳಲ್ಲಿ ಉಮರ್ ಮಲಿಕ್ ಕೂಡ ಒಬ್ಬರು.
9) ಯೂಸುಫ್ ಪಠಾಣ್: ಇರ್ಫಾನ್ ಪಠಾಣ್ ಅವರ ಅಣ್ಣನಾದ ಯೂಸುಫ್ ಪಠಾಣ್ ಅವರ ಬಿಗ್ ಹಿಟಿಂಗ್ ಸಾಮರ್ಥ್ಯ ಕಾರಣಕ್ಕೇ ಅವರನ್ 2007ರನ ಟಿ20 ವಿಶ್ವಕಪ್ಗೆ ಸೇರಿಸಿಕೊಳ್ಳಲಾಗಿತ್ತು. ಆದರೆ, ಆಡುವ ಅವಕಾಶ ಸಿಕ್ಕಿದ್ದು ಪಾಕಿಸ್ತಾನ ವಿರುದ್ಧದ ಫೈನಲ್ನಲ್ಲಿ ಮಾತ್ರ. ಅದಾದ ಬಳಿಕ ಅವರು ಏಕದಿನ ಮತ್ತು ಟಿ20 ಟೀಮ್ ಇಂಡಿಯಾದಲ್ಲಿ ಕೆಲ ವರ್ಷಗಳವರೆಗೆ ನಿಯಮಿತವಾಗಿ ಸ್ಥಾನ ಪಡೆದರು. ಆದರೆ, ಸ್ಥಿರ ಪ್ರದರ್ಶನ ತೋರಲು ವಿಫಲವಾದ್ದರಿಂದ ತಂಡದಲ್ಲಿ ಸ್ಥಾನ ಸಿಗುವುದು ಕಡಿಮೆ ಆಯಿತು. ಐಪಿಎಲ್ನಲ್ಲೂ ಅವರ ಆಟ ಹೆಚ್ಚು ದೂರ ಸಾಗಲಿಲ್ಲ. ಈಗ ಬರೋಡಾ ತಂಡದ ಪರ ದೇಶೀಯ ಕ್ರಿಕೆಟ್ನಲ್ಲಿ ನಿರತರಾಗಿದ್ಧಾರೆ.
10) ಅಜಿತ್ ಅಗರ್ಕರ್: ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತ ತಂಡದ ರೆಗ್ಯುಲರ್ ಮೆಂಬರ್ ಆಗಿದ್ದವರು. ಮಧ್ಯಮ ವೇಗದ ಬೌಲರ್ ಆಗಿದ್ದ ಅಜಿತ್ ಅಗರ್ಕರ್ 2013ರಲ್ಲೇ ನಿವೃತ್ತರಾದರು. ಬಳಿಕ ಮುಂಬೈ ಕ್ರಿಕೆಟ್ ತಂಡದ ಆಯ್ಕೆಗಾರರಾಗಿ ಕೆಲಸ ಮಾಡಿದರು. ಈಗ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕಾಮೆಂಟರಿ ಮಾಡುತ್ತಾರೆ. ಕೆಲ ವೆಬ್ಸೈಟ್ಗಳಲ್ಲಿ ಕ್ರಿಕೆಟ್ ವಿಶ್ಲೇಷಣೆ ಮಾಡುತ್ತಾರೆ.
12) ಜೋಗಿಂದರ್ ಶರ್ಮಾ: 2007ರ ಟಿ20 ವಿಶ್ವಕಪ್ಗೆ ಆಯ್ಕೆಯಾದಾಗ ಹೆಚ್ಚು ಪರಿಚಿತವಿದ್ದ ಬೌಲರ್ ಆಗಿರಲಿಲ್ಲ. ಪಾಕಿಸ್ತಾನ ವಿರುದ್ಧದ ಫೈನಲ್ನಲ್ಲಿ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದದ್ದು ಬಿಟ್ಟರೆ ಜೋಗಿಂದರ್ ಅವರಿಂದ ನೆನಪಿನಲ್ಲುಳಿಯುವ ಪ್ರದರ್ಶನ ಬರಲಿಲ್ಲ. ಐಪಿಎಲ್ನಲ್ಲೂ ಇವರು ಹೆಚ್ಚು ವರ್ಷ ಆಡಲಿಲ್ಲ. ಕೆಲ ವರ್ಷಗಳ ಬಳಿಕ ಹರ್ಯಾಣ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕಿತು ಈಗ ಅವರು ಡಿಎಸ್ಪಿಯಾಗಿ ಬಡ್ತಿ ಪಡೆದಿದ್ಧಾರೆ. ಕೋವಿಡ್ ಸಂಕಷ್ಟದ ವೇಳೆ ಇವರ ಜನಪರ ಕಾರ್ಯಕ್ಕೆ ಐಸಿಸಿ ಮೆಚ್ಚುಗೆ ವ್ಯಕ್ತಪಡಿಸಿತ್ತು.
14) ಆರ್.ಪಿ. ಸಿಂಗ್: ಮಧ್ಯಮ ವೇಗದ ಬೌಲರ್ ಆಗಿದ್ದ ಆರ್ ಪಿ ಸಿಂಗ್ ಸ್ವಿಂಗ್ ಬೌಲಿಂಗ್ಗೆ ಹೆಸರುವಾಸಿಯಾಗಿದ್ದವರು. 2007ರ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ ವಿಶ್ವಕಪ್ ಬಳಿಕ ಇವರಿಂದ ನಿರೀಕ್ಷಿತ ಪ್ರದರ್ಶನ ಬರದೇ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟವಾಯಿತು. ಸದ್ಯ ಇವರು ಟಿವಿ ಕಾಮೆಂಟರಿ ಕೆಲಸ ಮಾಡುತ್ತಿದ್ಧಾರೆ.
15) ಎಸ್ ಶ್ರೀಶಾಂತ್: ಚೊಚ್ಚಲ ಟಿ20 ವಿಶ್ವಕಪ್ ನಡೆದಾಗ ಶ್ರೀಶಾಂತ್ ಅಪ್ರತಿಮ ಫಾಸ್ಟ್ ಬೌಲರ್ ಆಗಿದ್ದರು. ಆ ವಿಶ್ವಕಪ್ ಶ್ರೀಶಾಂತ್ ಪಾಲಿಗೆ ಅವಿಸ್ಮರಣೀಯ. ಆದರೆ, ಆ ಬಳಿಕ ಶ್ರೀಶಾಂತ್ ಅವರು ಹೆಚ್ಚು ಕಾಲ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. 2013ರಲ್ಲಿ ಬೆಟ್ಟಿಂಗ್ ಹಗರಣ ಸಂಬಂಧ ಇವರಿಗೆ ನಿಷೇಧ ಹಾಕಲಾಯಿತು. ಕೆಲ ವರ್ಷಗಳ ಹಿಂದೆ ಕೇರಳ ರಾಜ್ಯ ತಂಡದ ಪರ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳನ್ನ ಆಡಿದರೂ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯಲು ಶಕ್ಯರಾಗಲಿಲ್ಲ. ನಟಿ ಪ್ರಿಯಾಮಣಿಯ ಸಂಬಂಧಿಕರಾದ ಶ್ರೀಶಾಂತ್ ಅವರು ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಿಂದಿಯ ಬಿಗ್ ಬಾಸ್ನಲ್ಲೂ ಕಾಣಿಸಿಕೊಂಡಿದ್ಧಾರೆ.