ಮ್ಯಾಚ್ ಫಿಕ್ಸಿಂಗ್ ನಿಷೇಧ: 14 ವರ್ಷಗಳ ಬಳಿಕ ಕ್ರಿಕೆಟಿಗನಿಗೆ 1 ಕೋಟಿ ರೂ. ನೀಡಿದ ಬಿಸಿಸಿಐ
ಭಾರತ ತಂಡದ ಕೆಲ ಸ್ಟಾರ್ ಆಟಗಾರರು ಹೆಸರುಗಳು ಕೇಳಿ ಬಂದಿದ್ದರಿಂದ ಕ್ರಿಕೆಟ್ ಮೇಲೆ ಭಾರತೀಯರಲ್ಲಿ ಅವಿಶ್ವಾಸ ಮೂಡಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸೌರವ್ ಗಂಗೂಲಿ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿದ್ದರು.
1999-2000ನೇ ಇಸವಿಯಲ್ಲಿ ಟೀಮ್ ಇಂಡಿಯಾದ ಮ್ಯಾಚ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಿತ್ತು. ಈ ಕಳ್ಳಾಟದಲ್ಲಿ ಅನೇಕ ಆಟಗಾರರ ಹೆಸರುಗಳು ಕೇಳಿ ಬಂದಿದ್ದವು.
2/ 9
ಅದರಲ್ಲೂ ತಂಡದ ಕೆಲ ಸ್ಟಾರ್ ಆಟಗಾರರು ಹೆಸರುಗಳು ಕೇಳಿ ಬಂದಿದ್ದರಿಂದ ಕ್ರಿಕೆಟ್ ಮೇಲೆ ಭಾರತೀಯರಲ್ಲಿ ಅವಿಶ್ವಾಸ ಮೂಡಿತ್ತು. ಈ ಕಠಿಣ ಪರಿಸ್ಥಿತಿಯಲ್ಲಿ ಸೌರವ್ ಗಂಗೂಲಿ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿದ್ದರು.
3/ 9
ಅಲ್ಲಿಂದ ಬಳಿಕ ಯುವ ತಂಡವನ್ನು ಕಟ್ಟುವ ಮೂಲಕ ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದರು. ಆದರೆ ಇದಕ್ಕೂ ಮುನ್ನ ಫಿಕ್ಸಿಂಗ್ ಆರೋಪದಲ್ಲಿ ಮನೋಜ್ ಪ್ರಭಾಕರ್ ಅವರ ಮೇಲೆ 5 ವರ್ಷ ನಿಷೇಧ ಹೇರಲಾಯಿತು.
4/ 9
2005ರಲ್ಲಿ ಶಿಕ್ಷೆ ಪೂರ್ಣಗೊಳಿಸಿದ ಮನೋಜ್ ಪ್ರಭಾಕರ್ ನಂತರ ಯಾವುದೇ ವಿವಾದಕ್ಕೀಡಾಗಿರಲಿಲ್ಲ. ಹೀಗಾಗಿ ದೆಹಲಿ ತಂಡದ ಕೋಚ್ ಹುದ್ದೆ ಸ್ಥಾನ ಮಾಜಿ ಆಟಗಾರನಿಗೆ ಲಭಿಸಿತು.
5/ 9
ಆದರೆ 2011ರಲ್ಲಿ ಆಯ್ಕೆಗಾರರನ್ನು ಬಹಿರಂಗವಾಗಿ ಟೀಕಿಸಿದ ಆರೋಪದಲ್ಲಿ ದೆಹಲಿ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ವಜಾಗೊಳಿಸಲಾಯಿತು. ನಿಷೇಧ, ಬಿಸಿಸಿಐ ಜೊತೆಗಿನ ಜಟಾಪಟಿ ಎಲ್ಲಾ ಮುಗಿದ ಬಳಿಕ ಇದೀಗ ಮಾಜಿ ಆಟಗಾರನಿಗೆ ಪಿಂಚಣಿ ಸೇರಿದಂತೆ ಉಳಿದ ಹಣ ನೀಡಲಾಗಿದೆ.
6/ 9
ಹೌದು, 14 ವರ್ಷಗಳ ಬಳಿಕ ಮನೋಜ್ ಪ್ರಭಾಕರ್ ಅವರಿಗೆ ಪಿಂಚಣಿ ಮೊತ್ತ, ಹಾಗೂ ಉಳಿದ ಹಣ ಸೇರಿದಂತೆ ಒಟ್ಟು 1 ಕೋಟಿ ರೂ. ಬಿಸಿಸಿಐ ಪಾವತಿಸಿದೆ.
7/ 9
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮನೋಜ್ ಪ್ರಭಾಕರ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಪಂದ್ಯದಲ್ಲಿ ನಿಧಾನಗತಿ ಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದರು.
8/ 9
ಭಾರತದ ಪರ ಭಾರತ ಪರ 39 ಟೆಸ್ಟ್ಗಳಲ್ಲಿ ಮನೋಜ್ ಪ್ರಭಾಕರ್ 1600 ರನ್ ಹಾಗೂ 96 ವಿಕೆಟ್ ಕಬಳಿಸಿದ್ದಾರೆ.
9/ 9
ಹಾಗೆಯೇ 130 ಏಕದಿನ ಪಂದ್ಯಗಳಲ್ಲಿ 1858 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್ನಲ್ಲೂ 157 ವಿಕೆಟ್ ಉರುಳಿಸುವ ಮೂಲಕ ಗಮನ ಸೆಳೆದಿದ್ದರು.