ಈ ಬಗ್ಗೆ ಲೈವ್ನಲ್ಲಿ ಮಾತನಾಡಿದ್ದ ಶಮಿ 18 ತಿಂಗಳ ಕಾಲ ಚೇತರಿಸಿಕೊಳ್ಳಲು ತೆಗೆದುಕೊಂಡ ಸಮಯವು ನನ್ನ ಜೀವನದ ಅತ್ಯಂತ ನೋವಿನ ಕ್ಷಣವಾಗಿತ್ತು. ಒತ್ತಡದ ಸಮಯವಾಗಿತ್ತು. ನಾನು ಮತ್ತೆ ಮರಳಿ ಆಟವಾಡಲು ಪ್ರಾರಂಭಿಸಿದಾಗ ಕೆಲವು ವೈಯ್ಯಕ್ತಿಕ ವಿಚಾರಗಳಿಂದ ಅಡಚಣೆಯಾಯಿತು. ಆ ಸಮಯದಲ್ಲಿ ನಾನು ಮೂರು ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚನೆ ಮಾಡಿದ್ದೆ ಎಂದು ಹೇಳಿದರು.
ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಪ್ರವೀಣ್ ಕಮಾಲ್ ನಡೆಯಲಿಲ್ಲ. ಆರಂಭದಲ್ಲಿ ಎದುರಾಳಿಗರ ಮೈಚಳಿ ಬಿಡಿಸುತ್ತಿದ್ದ ಇವರು ಬರಬರುತ್ತಾ ದುಬಾರಿಯಾದರು. ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ತೋರಿದ ಪರಿಣಾಮ ಇಲ್ಲಿಗೆ ಇವರ ಕ್ರಿಕೆಟ್ ಜೀವನ ಅಂತ್ಯವಾಯಿತು ಎಂಬ ಮಾತುಗಳು ಕೇಳಬರಲಾರಂಭಿಸಿದವು. ಈ ವೇಳೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಜಚೆ ಮಾಡಿಕೊಂಡಿದ್ದರಂತೆ.
2009 ರಿಂದ 2011 ನನಗೆ ಕಷ್ಟದ ಸಮಯವಾಗಿತ್ತು. ಅವಕಾಶ ಮತ್ತು ಪಂದ್ಯಗಳಿಂದ ನಾನು ವಂಚಿನಾಗಿದ್ದೆ. ಈ ಸಮಯದಲ್ಲಿ ನನ್ನಲ್ಲಿ ಪ್ರತಿದಿನ ಆತ್ಮಹತ್ಯೆಯಂತಹ ಆಲೋಚನೆಗಳು ಮೂಡುತ್ತಿದ್ದವು. ಅಂದು ನಾನು ಅನುಭವಿಸಿದ ನೋವು ಇಂದಿಗೂ ನೆನಪಿದೆ. ನನ್ನ ಮುಂದಿನ ಜೀವನದ ಬಗ್ಗೆ ಚಿಂತಿತನಾಗುತ್ತಿದೆ. ಏಕೆಂದರೆ ನಾನು ಕ್ರಿಕೆಟ್ ಬಗ್ಗೆ ಸ್ವಲ್ಪ ಯೋಚಿಸುತ್ತಿದ್ದೆ. ನನ್ನ ಗುರಿ ಯಾವ ದಿಕ್ಕಿನಲ್ಲಿದೆ. ಮುಂದೆ ಏನು ಮಾಡಬೇಕಿದೆ ಎಂಬ ನೂರೆಂಟು ಪ್ರಶ್ನೆಗಳು ನನ್ನನ್ನು ಕಾಡುತ್ತಿತ್ತು .ಪಂದ್ಯಗಳು ಇಲ್ಲದಿದ್ದಾಗ ಯೋಚಿಸಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದೆ. ಆದರೆ ಕ್ರಿಕೆಟ್ ಆಡುವಾಗ ಅಂತಹ ಆಲೋಚನೆಯಿಂದ ದೂರವಾಗುತ್ತಿದ್ದವು ಎಂದು ಹಳೇಯ ಕಹಿ ಘಟನೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಕ್ರಿಕೆಟಿಗ ಶ್ರೀಶಾಂತ್ 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಂತರ ವಿಚಾರಣೆ ವೇಳೆ ಬಿಸಿಸಿಐ ಶ್ರೀಶಾಂತ್ ಅವರಿಗೆ ಕ್ರಿಕೆಟ್ ಆಡಲು ನಿಷೇಧ ಹೇರಿತು. 2019ರ ಸುಪ್ರಿಂ ಕೋಟ್ ಹತ್ತಕ್ಷೇಪದ ನಂತರ ಶ್ರೀಶಾಂತ್ ಶಿಕ್ಷೆಯ ಸಮಯವನ್ನು ಏಳು ವರ್ಷಕ್ಕೆ ಇಳಿಸಿದೆ. ಹಾಗಾಗಿ 2020ರಿಂದ ಶ್ರೀಶಾಂತ್ ಕ್ರಿಕೆಟ್ ಆಡಲು ಅವಕಾಶವಿರುತ್ತದೆ.