ಸ್ಪೋಟಕ ಇನಿಂಗ್ಸ್ಗೆ ಹೆಸರುವಾಸಿಯಾಗಿರುವ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅದು ಕೂಡ ಭಾರತದ ವಿರುದ್ದ. 2005 ರಲ್ಲಿ ಕಾನ್ಪುರದಲ್ಲಿ ನಡೆದ ಪಂದ್ಯದಲ್ಲಿ ಅಫ್ರಿದಿ ಅಕ್ಷರಶಃ ಅಬ್ಬರಿಸಿದ್ದರು. ಟೀಂ ಇಂಡಿಯಾ ವಿರುದ್ಧ 9 ಸಿಕ್ಸ್ ಹಾಗೂ 10 ಬೌಂಡರಿ ಬಾರಿಸಿ 45 ಎಸೆತಗಳಲ್ಲಿ ಶತಕ ಪೂರೈಸಿದ್ದರು.
2014 ರಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗ ಕೋರೆ ಅಂಡರ್ಸನ್ ಅಫ್ರಿದಿಯ 37 ಎಸೆತಗಳ ಅತೀ ವೇಗದ ಶತಕದ ದಾಖಲೆಯನ್ನು ಅಳಿಸಿ ಹಾಕಿ ಹೊಸ ಇತಿಹಾಸ ಬರೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ಎಡಗೈ ದಾಂಡಿಗ ಸಿಕ್ಸ್ಗಳ ಸುರಿಮಳೆಗೈದರು. ಅದರ ಫಲವಾಗಿ ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿ ಎರಡು ದಶಕಗಳ ಹಿಂದಿನ ದಾಖಲೆಯನ್ನು ಮುರಿದರು. ಈ ಇನಿಂಗ್ಸ್ನಲ್ಲಿ ಅಜೇಯ 134 ರನ್ ಬಾರಿಸಿದ್ದ ಅಂಡರ್ಸನ್ 14 ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿದ್ದರು.
2015 ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಸಿಡಿಲಬ್ಬರದ ಬ್ಯಾಟಿಂಗ್ ಅಂದರೆ ಏನೂ ಎಂದು ತೋರಿಸಿದ್ದರು. ಕೆರಿಬಿಯನ್ ಬೌಲರುಗಳನ್ನು ಚೆಂಡಾಡಿದ ದಕ್ಷಿಣ ಆಫ್ರಿಕಾದ ಈ ಬ್ಯಾಟ್ಸ್ಮನ್ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ಇತಿಹಾಸ ಬರೆದರು. ಈ ಸ್ಪೋಟಕ ಇನಿಂಗ್ಸ್ನಲ್ಲಿ 146 ರನ್ ಚಚ್ಚಿದ್ದ ಎಬಿಡಿ 16 ಸಿಕ್ಸರ್ ಹಾಗೂ 9 ಬೌಂಡರಿ ಬಾರಿಸಿದ್ದರು.