Faf du Plessis: ಎಲ್ಲ ಮಾದರಿಯ ನಾಯಕತ್ವಕ್ಕೆ ದಿಢೀರ್ ಗುಡ್ ಬೈ ಹೇಳಿದ ಡುಪ್ಲೆಸಿಸ್!; ಕಾರಣ..?
ದ. ಆಫ್ರಿಕಾ ತಂಡ ಹೊಸ ಉದಯದ ಕಡೆಗೆ ಸಾಗುತ್ತಿದೆ. ಹೊಸ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸರ್ವತೋಮುಖ ಬೆಳವಣಿಗೆ ನಿಟ್ಟಿನಲ್ಲಿ ನಾನು ಎಲ್ಲಾ ಮಾದರಿಯ ಕ್ರಿಕೆಟ್ನ ನಾಯಕತ್ವದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಫಾಫ್ ಡುಪ್ಲೆಸಿಸ್ ಟೆಸ್ಟ್ ಹಾಗೂ ಟಿ-20 ಅಂತರಾಷ್ಟ್ರೀಯ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
2/ 9
ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಸ್ಪಷ್ಟ ಪಡಿಸಿದ್ದು, ತಕ್ಷಣಕ್ಕೆ ಜಾರಿಗೆ ಬರುವಂತೆ ನಾಯಕತ್ವಕ್ಕೆ ಡುಪ್ಲೆಸಿಸ್ ರಾಜೀನಾಮೆ ನೀಡಿದ್ದಾರೆಂದು ಎಂದು ತಿಳಿಸಿದೆ.
3/ 9
ಇವರ ನಾಯಕತ್ವದಲ್ಲಿ ಇತ್ತೀಚೆಗೆ ದ. ಆಫ್ರಿಕಾ ತಂಡ ಸತತ ಸೋಲಿನಿಂದ ಕಂಗೆಟ್ಟಿತ್ತು. ಅಲ್ಲದೆ ಮೊನ್ನೆಯಷ್ಟೆ ಡುಪ್ಲೆಸಿಸ್ ಅವರನ್ನೇ ಏಕದಿನ ತಂಡದಿಂದ ಕೈ ಬಿಟ್ಟಿದ್ದು ಸಾಕಷ್ಟು ಕುತೂಹಲ ಕೆರಳಿಸಿತ್ತು.
4/ 9
ಏಕದಿನದಿಂದ ಇವರನ್ನು ಕೈಬಿಟ್ಟ ಬಳಿಕ ದ. ಆಫ್ರಿಕಾ ಮಂಡಳಿ ಹೊಸ ನಾಯಕನಾಗಿ ಕ್ವಿಂಟನ್ ಡಿ ಕಾಕ್ ರನ್ನು ಆಯ್ಕೆ ಮಾಡಿತ್ತು.
5/ 9
ದ. ಆಫ್ರಿಕಾ ತಂಡ ಹೊಸ ಉದಯದ ಕಡೆಗೆ ಸಾಗುತ್ತಿದೆ. ಹೊಸ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸರ್ವತೋಮುಖ ಬೆಳವಣಿಗೆ ನಿಟ್ಟಿನಲ್ಲಿ ನಾನು ಎಲ್ಲಾ ಮಾದರಿಯ ಕ್ರಿಕೆಟ್ನ ನಾಯಕತ್ವದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.
6/ 9
ಮೈದಾನದ ಹೊರಗಿನ ಸಮಸ್ಯೆಗಳಿಗೆ ಹೆಚ್ಚು ಸಮಯ ಮತ್ತು ಶಕ್ತಿ ನೀಡಿದ್ದರಿಂದ ನನ್ನ ನಾಯಕತ್ವದ ಕೊನೆಯ ಆವೃತ್ತಿ, ಅತ್ಯಂತ ಸವಾಲಿನಿಂದ ಕೂಡಿತ್ತು. ಆಫ್ರಿಕಾ ಕ್ರಿಕೆಟ್ ತಂಡದ ಹಿತದೃಷ್ಟಿಯಿಂದ ನಾಯಕತ್ವ ತ್ಯಜಿಸುವುದು ಉತ್ತಮ ನಿರ್ಧಾರವೆಂದು ಭಾವಿಸಿದ್ದೇನೆ- ಡುಪ್ಲೆಸಿಸ್.
7/ 9
ಇದು ಅತ್ಯಂತ ಕಠಿಣ ನಿರ್ಧಾರ. ಆದರೆ, ಕ್ವಿಂಟನ್ ಡಿಕಾಕ್ ನಾಯಕತ್ವಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ನಾನು ಸಂಪೂರ್ಣ ಫಿಟ್ ಇದ್ದೇನೆ. ತಂಡಕ್ಕೆ ನನ್ನಿಂದಾಗುವ ಕೊಡುಗೆ ಸಲ್ಲಿಸಲು ಸಿದ್ಧ- ಡುಪ್ಲೆಸಿಸ್.
8/ 9
ಡುಪ್ಲೆಸಿಸ್ ಅವರು ದ. ಆಫ್ರಿಕಾವನ್ನು ನಾಯಕನಾಗಿ 2012ರ ಡಿಸೆಂಬರ್ನಿಂದ ಈವರೆಗೆ ಒಟ್ಟು 112 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.
9/ 9
2012ರ ಡಿಸೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಡುಪ್ಲೆಸಿಸ್ ಮೊದಲ ಬಾರಿ ನಾಯಕನ ಪಟ್ಟ ತೊಟ್ಟಿದ್ದರು.