ಬೌಂಡರಿ ಲೈನ್ನಲ್ಲಿ ಚೆಂಡನ್ನು ಹಿಡಿಯುವ ಯತ್ನದಲ್ಲಿ ಡುಪ್ಲೆಸಿಸ್ ಡೈವ್ ಮಾಡಿದ್ದರು. ಈ ವೇಳೆ ಎದುರಿನಿಂದ ಬಂದ ಹಸ್ನೈನ್ ಕಾಲು ಡುಪ್ಲೆಸಿಸ್ ತಲೆಗೆ ಬಡಿದಿದೆ. ಮೈದಾನದಲ್ಲೇ ಕುಸಿದ ಬಿದ್ದ ದಕ್ಷಿಣ ಆಫ್ರಿಕಾ ಆಟಗಾರನನ್ನು ಆ ಬಳಿಕ ಚಿಕಿತ್ಸೆಗೆ ಅಬುಧಾಬಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಚೇತರಿಸಿಕೊಂಡ ಡುಪ್ಲೆಸಿಸ್ ಪಿಎಸ್ಎಲ್ ತೊರೆದು ತವರಿಗೆ ಮರಳಿದ್ದರು. ಅಲ್ಲದೆ ತಲೆಗೆ ಉಂಟಾದ ಪೆಟ್ಟಿನಿಂದ ನೆನಪಿನ ಶಕ್ತಿ ಕಡಿಮೆಯಾಗಿದ್ದು, ಮರೆವಿನ ಸಮಸ್ಯೆ ಎದುರಾಗುತ್ತಿದೆ ಎಂದು ತಿಳಿಸಿದ್ದರು.