ವಿಶ್ವಕಪ್ ಇತಿಹಾಸದಲ್ಲೇ ಅತ್ಯದ್ಭುತ ಫೈನಲ್ ಮೂಲಕ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.
2/ 11
ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿ ಸಂಭ್ರಮಿಸುತ್ತಿರುವ ಇಂಗ್ಲೆಂಡ್ ಆಟಗಾರರು
3/ 11
ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಮೆಗಾ ಫೈನಲ್ ಎರೆಡೆರಡು ಬಾರಿ ರೋಚಕ ಟೈನಲ್ಲಿ ಅಂತ್ಯಗೊಂಡು, ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ನೂತನ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
4/ 11
ಚೆಂಡನ್ನು ಕ್ಯಾಚ್ ಹಿಡಿಯುತ್ತಿರುವ ನ್ಯೂಜಿಲೆಂಡ್ ಆಟಗಾರ ಲಾಕಿ ಫರ್ಗುಸನ್
5/ 11
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 16 ರನ್ಗಳನ್ನು ಗುರಿ ನೀಡಿತು. ಈ ಸವಾಲನ್ನು ಭರ್ಜರಿಯಾಗಿಯೇ ಚೇಸ್ ಮಾಡಿದ ನ್ಯೂಜಿಲೆಂಡ್ಗೆ ಅಂತಿಮ ಎಸೆತದಲ್ಲಿ 2 ರನ್ಗಳ ಅವಶ್ಯಕತೆಯಿತ್ತು. ಆದರೆ ಇಲ್ಲೂ ಅದೃಷ್ಟ ಲಕ್ಷ್ಮಿಯ ಕಣ್ಣಾ ಮುಚ್ಚಾಲೆ ಆಟ ನಡೆದಿತ್ತು.ಪರಿಣಾಮ ಮತ್ತೊಮ್ಮೆ ಸೂಪರ್ ಪಂದ್ಯ ಟೈಯಲ್ಲಿ ಅಂತ್ಯವಾಯಿತು.
6/ 11
ಚೆಂಡನ್ನು ಎದುರಿಸುತ್ತಿರುವ ಇಂಗ್ಲೆಂಡ್ ಬ್ಯಾಟ್ಸ್ಮನ್
7/ 11
ಕ್ರಿಕೆಟ್ ನಿಯಮದ ಪ್ರಕಾರ ಅಧಿಕ ಬೌಂಡರಿ ಬಾರಿಸಿದ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇದರೊಂದಿಗೆ ನ್ಯೂಜಿಲೆಂಡ್ನ ಚೊಚ್ಚಲ ವಿಶ್ವಕಪ್ ಕನಸು ಭಗ್ನಗೊಂಡಿತು.
8/ 11
ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ಗೆ 242 ರನ್ಗಳ ಗುರಿ ನೀಡಿತು. ಆರಂಭಿಕ ನಿಕೋಲ್ಸ್ (55) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಲಾಥಮ್ (47) ಅವರ ಉಪಯುಕ್ತ ಕಾಣಿಕೆಯಿಂದ ಕಿವೀಸ್ ಪಡೆ ನಿರ್ಣಾಯಕ ಪಂದ್ಯದಲ್ಲಿ ಸ್ಪರ್ಧಾತ್ಮಕ ಸವಾಲು ನೀಡುವಂತಾಯಿತು.
9/ 11
ನಾಲ್ಕು ವರ್ಷದಿಂದ ಸತತವಾಗಿ ವಿಶ್ವ ಕಪ್ ಪಟ್ಟಕ್ಕಾಗಿ ಪಟತೊಟ್ಟು ಗೆಲುವು ಮುಡಿಗೇರಿಸಿಕೊಂಡ ಇಂಗ್ಲೆಂಡ್ ತಂಡ. (ಚಿತ್ರ: ಕ್ರಿಕೆಟ್ ವಲ್ಡ್ ಕಪ್)