ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ ಕ್ರಿಕೆಟ್ ಜತೆಗೆ ಸಂಗೀತ ಲೋಕದಲ್ಲಿ ಸಾಕಷ್ಟು ಜನಪ್ರಿಯತೆಗಳಿಸಿದ್ದಾರೆ.
2/ 7
ಬ್ರಾವೊ ‘ಚಾಂಪಿಯನ್‘ ಆಲ್ವಂ ಸಾಂಗ್ನಲ್ಲಿ ವೆಸ್ಟ್ ಇಂಡೀಸ್ ಎಲ್ಲಾ ಕ್ರಿಕೆಟ್ ಆಟಗಾರರನ್ನು ಚಾಂಪಿಯನ್ಗಳು ಎಂದು ಹಾಡಿ ಹೊಗಳಿದ್ದರು. ಈ ಹಾಡು ಸಖತ್ ವೈರಲ್ ಕೂಡ ಆಗಿತ್ತು.
3/ 7
ಇದೀಗ ಬ್ರಾವೊ ಮತ್ತೊಂದು ಹೊಸ ಹಾಡನ್ನು ಸಿದ್ಧ ಪಡಿಸಿದ್ದಾರೆ. ಆದರೆ ಈ ಹಾಡು ಟೀಂ ಇಂಡಿಯಾದ ಆಟಗಾರ ಮಾಹೇಂದ್ರ ಸಿಂಗ್ ಧೋನಿಗಾಗಿ ಬರೆದಿದ್ದಾರೆ ಎಂಬುದು ವಿಶೇಷ.
4/ 7
ಇತ್ತೀಚೆಗೆ ಸನ್ನಿ ಲಿಯೋನ್ ಜತೆಗೆ ಇನ್ಸ್ಟಾಗ್ರಾಂ ಲೈವ್ ಕಾರ್ಯಕ್ರಮದ ವೇಳೆ ಬ್ರಾವೊ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
5/ 7
ಬ್ರಾವೊ ಲೈವ್ನಲ್ಲಿ ಮಾತನಾಡುತ್ತ ನಾನೀಗ ‘ನಂಬರ್ 7‘ ಎಂಬ ಹೊಸ ಹಾಡನ್ನು ಸಿದ್ಧಪಡಿಸಿದ್ದೇನೆ. ಚೆನ್ನೈ ಸೂಪರ್ ಕಿಂಗ್ ನಾಯಕ ಮಾಹಿಗಾಗಿ ಈ ಹಾಡನ್ನು ಬರೆದಿದ್ದೇನೆ ಎಂದಿದ್ದಾರೆ.
6/ 7
ಧೋನಿ ಅವರ ವೃತ್ತಿ ಜೀವನ, ಸಾಧನೆ ಮತ್ತು ಎಲ್ಲ ಕ್ರಿಕೆಟಿಗರು ಅವರ ಮೇಲಿಟ್ಟಿರುವ ಪ್ರೀತಿಯ ಬಗೆಗಿನ ಹಾಡು ಇದಾಗಿದೆ. ಹೀಗಾಗಿ ಈ ಹಾಡಿಗೆ ‘ನಂಬರ್ 7‘ ಎಂದು ಹೆಸರು ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
7/ 7
ಧೋನಿ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ತಂಡದ ಎಲ್ಲಾ ಆಟಗಾರರನ್ನು ತುಂಬಾ ಆತ್ಮೀಯರಾಗಿ ಕಾಣುವ ಧೋನಿಗೆ ಕ್ಯಾಪ್ಟನ್ ಕೂಲ್ ಎಂದು ಕರೆಯುತ್ತಾರೆ.