ನೋಡು ನೋಡುತ್ತಿದ್ದಂತೆ ದುಲೀಪ್ ಮೊದಲ ಶತಕ, ನಂತರ ದ್ವಿಶತಕ ಮತ್ತು ಅದರ ಬೆನ್ನಲ್ಲೇ ಟ್ರಿಪಲ್ ಶತಕವನ್ನು ದಾಟಿದರು. ನಾರ್ಥಾಂಟ್ಸ್ ಕ್ಲಬ್ ಬೌಲರುಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ದುಲೀಪ್ ಕೇವಲ 330 ನಿಮಿಷಗಳಲ್ಲಿ 333 ರನ್ ಚಚ್ಚಿ ಬಿಸಾಕಿದ್ದರು. ಇದರಲ್ಲಿ 33 ಬೌಂಡರಿ ಮತ್ತು ಒಂದು ಸಿಕ್ಸರ್ ಮೂಡಿ ಬಂದಿದ್ದವು.