ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ನಿಂದ ದೂರ ಉಳಿದಿರುವ ಟೀಂ ಇಂಡಿಯಾ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಬಗ್ಗೆ ದಯವಿಟ್ಟು ಯಾರೂ ಒತ್ತಡ ಹೇರದಿರಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಹೇಳಿದ್ದಾರೆ.
2/ 8
ಧೋನಿ ಒಬ್ಬ ಅದ್ಭುತ ಪ್ರತಿಭೆ, ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಡಿ. ಧೋನಿಯನ್ನು ಸದ್ಯದ ಸ್ಥಿತಿಯಲ್ಲಿ ನಿವೃತ್ತಿಗೆ ತಳ್ಳುವುದು ಒಳ್ಳೆಯದಲ್ಲ. ಅವರು ಒಮ್ಮೆ ಹೋದರೆ, ಮತ್ತೇ ತಂಡಕ್ಕೆ ಹಿಂತಿರುಗಲು ಸಾಧ್ಯವಾಗುವುದಿಲ್ಲ ಎಂಬುದು ಹುಸೇನ್ ಅಭಿಪ್ರಾಯ.
3/ 8
ಭಾರತ ತಂಡಕ್ಕೆ ಮತ್ತೆ ಹಿಂತಿರುಗಲು ಧೋನಿ ಅವರಲ್ಲಿ ಈಗಲೂ ಸಾಮರ್ಥ್ಯವಿದೆ. ಈ ವಿಚಾರ ಮಂಡಳಿಯಲ್ಲಿರುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು- ಹುಸೇನ್.
4/ 8
ಕಳೆದ ವಿಶ್ವಕಪ್ ಟೂರ್ನಿ ಸೇರಿದಂತೆ ಕೆಲವು ಪಂದ್ಯಗಳಲ್ಲಿ ಧೋನಿ ಅವರು ರನ್ ಚೇಸ್ ಮಾಡುವಲ್ಲಿ ಎಡವಿರಬಹುದು. ಆದರೆ, ಅವರು ಈಗಲೂ ಅದ್ಭುತ ಪ್ರತಿಭಾವಂತ ಆಟಗಾರ. ಧೋನಿ ನಿವೃತ್ತಿಯ ವಿಷಯದಲ್ಲಿ ಈಗ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು- ನಾಸಿರ್ ಹುಸೇನ್.
5/ 8
ಕಳೆದ ವರ್ಷ ಜುಲೈನಲ್ಲಿ ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಧೋನಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಬಳಿಕ ಅನಿರ್ಧಿಷ್ಟಾವಧಿಯ ಕಾಲ ವಿಶ್ರಾಂತಿ ಮೊರೆ ಹೋಗಿದ್ದರು.
6/ 8
13ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನಾಗಿ ಆಡಿದರೆ ಮಾತ್ರ ಧೋನಿಗೆ ಐಸಿಸಿ ಟಿ-20 ವಿಶ್ವಕಪ್ನಲ್ಲಿ ಸ್ಥಾನ ಸಿಗಲಿದೆ ಎನ್ನಲಾಗಿತ್ತು.
7/ 8
ಆದರೆ, ಈ ಬಾರಿ ಐಪಿಎಲ್ ಟೂರ್ನಿ ನಡೆಯುವುದು ಬಹುತೇಕ ಅನುಮಾನ ಎನ್ನಲಾಗುತ್ತದೆ.
8/ 8
ಏಪ್ರಿಲ್ 15ಕ್ಕೆ ಐಪಿಎಲ್ ಅನ್ನು ಮುಂದೂಡಲಾಗಿದೆಯಾದರೂ ಟೂರ್ನಿ ನಡೆಯುವ ಬಗ್ಗೆ ಯಾವುದೇ ಮಾಹಿತಿಯಿಲ್ಲ.