ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

First published:

  • 111

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಹೆಸರು ದಿವ್ಯಾನ್ಶ್ ಜೋಶಿ. ವಯಸ್ಸು 18 ವರ್ಷ. ಮಿಜೋರಂ ರಾಜ್ಯದಿಂದ ಟೀಂ ಇಂಡಿಯಾ ಅಂಡರ್​ 19 ತಂಡವನ್ನು ಪ್ರತಿನಿಧಿಸುತ್ತಿರುವ ಮೊದಲ ಆಟಗಾರ.

    MORE
    GALLERIES

  • 211

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಹೌದು, ಭಾರತ ಕಿರಿಯರ ತಂಡದಲ್ಲಿ ಹೊಸ ಆಲ್​ರೌಂಡರ್​ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗುವುದರೊಂದಿಗೆ ದಿವ್ಯಾನ್ಶ್​ ಹೆಸರು ಇಂಡಿಯನ್ ಕ್ರಿಕೆಟ್​ ಅಂಗಳದಲ್ಲಿ ಚರ್ಚೆಗೆ ಕಾರಣವಾಗಿದೆ.

    MORE
    GALLERIES

  • 311

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಏಕೆಂದರೆ ದಿವ್ಯಾನ್ಶ್ 14 ವರ್ಷದೊಳಗಿನ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು 16 ವರ್ಷದೊಳಗಿನ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದಿದ್ದರು. ಇದೀಗ ಅಂಡರ್ 19 ತಂಡಕ್ಕೆ ಆಯ್ಕೆಯಾಗುವ ಮೂಲಕ ಟೀಂ ಇಂಡಿಯಾದ ಮುಂದಿನ ಆಲ್​ರೌಂಡರ್ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 411

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ದಿವ್ಯಾನ್ಶ್ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್​ಗಾಗಿ ಸಕಲ ತಯಾರಿಯಲ್ಲಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 511

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಪ್ರಸ್ತುತ ಟೀಂ ಇಂಡಿಯಾದ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿದ್ದಾರೆ. ಅವರೊಂದಿಗೆ ಹೋಲಿಕೆಗೆ ನಾನು ಅರ್ಹನಲ್ಲ. ಆದರೆ ಖಂಡಿತವಾಗಿಯೂ ಒಂದು ದಿನ ಅವರೊಂದಿಗೆ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿಗೆ ಇಳಿಯುತ್ತೇನೆ ಎಂದಿದ್ದಾರೆ ದಿವ್ಯಾನ್ಶ್.

    MORE
    GALLERIES

  • 611

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಈ ಹಿಂದೆ ದಿವ್ಯಾನ್ಶ್ ಆಟವನ್ನು ನೋಡಿದ ಬಾಂಗ್ಲಾದೇಶದ ಆಲ್​ರೌಂಡರ್ ಮುಶ್ರಫೆ ಮೊರ್ತಜಾ ಈ ಯುವ ಆಟಗಾರ ಟೀಂ ಇಂಡಿಯಾದ ಮುಂದಿನ ಹಾರ್ದಿಕ್ ಪಾಂಡ್ಯ ಆಗಲಿದ್ದಾನೆ ಎಂದು ಭವಿಷ್ಯ ನುಡಿದಿದ್ದರು.

    MORE
    GALLERIES

  • 711

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಅದರಂತೆ ಇದೀಗ ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲೂ ಮಿಂಚುತ್ತಿರುವ ದಿವ್ಯಾಂಶ್ ಟೀಂ ಇಂಡಿಯಾ ಅಂಡರ್ 19 ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

    MORE
    GALLERIES

  • 811

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ದಿವ್ಯಾನ್ಶ್ ಜೋಶಿ ಕೂಡ ಹಾರ್ದಿಕ್ ಪಾಂಡ್ಯ ಅವರಂತೆ ಸ್ಟೈಲಿಶ್ ಆಟಗಾರ. ಫೀಲ್ಡ್​ನಲ್ಲೂ ಆನ್​ಫೀಲ್ಡ್​ನಲ್ಲೂ ಡಿಫೆರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳಲು ಬಯಸುವ ಯುವ ಆಟಗಾರ. ಇನ್ನು ದಿವ್ಯಾನ್ಶ್ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ತಂದೆ ಶ್ಯಾಮ್ ಪ್ರಕಾಶ್ ಜೋಶಿ ಸಾಫ್ಟ್‌ವೇರ್ ಎಂಜಿನಿಯರ್. ಹಾಗೆಯೇ ತಾಯಿ ಶಶಿ ಜೋಶಿ ಗೃಹಿಣಿ.

    MORE
    GALLERIES

  • 911

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಮಧ್ಯಮ ವೇಗಿ, ಜೊತೆಗೆ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡುವ ಗಮನ ಸೆಳೆಯುತ್ತಿರುವ ದಿವ್ಯಾನ್ಶ್ ಇದುವರೆಗೆ ಕೇವಲ ಎರಡು ಯುವ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರೊಳಗಿನ ಪ್ರತಿಭೆಯನ್ನು ಗಮನಿಸಿರುವ ಆಯ್ಕೆ ಸಮಿತಿ ಇದೀಗ ಅಂಡರ್ 19 ತಂಡದಲ್ಲಿ ಸ್ಥಾನ ನೀಡಿದೆ.

    MORE
    GALLERIES

  • 1011

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ಟೀಂ ಇಂಡಿಯಾ ಅಂಡರ್​ 19 ತಂಡವನ್ನು ಪ್ರಿಯಂ ಗರ್ಗ್ ಮುನ್ನಡೆಸಲಿದ್ದಾರೆ. ಅವರೊಂದಿಗೆ ಧ್ರುವ್ ಜುರೆಲ್(ಉಪನಾಯಕ-ವಿಕೆಟ್​ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾನ್ಶ್ ಸಕ್ಸೇನಾ, ಶಾಶ್ವತ್ ರಾವತ್, ದಿವ್ಯಾನ್ಶ್ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಷ್ಣೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೇಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 1111

    ದ್ರಾವಿಡ್ ಗರಡಿಯಲ್ಲಿ ಯುವ ಆಲ್​ರೌಂಡರ್​: ಹಾರ್ದಿಕ್ ಪಾಂಡ್ಯಗೆ ಪಕ್ಕಾ ಟಕ್ಕರ್ ಕೊಡ್ತಾನಂತೆ..!

    ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಈ ಮರಿಹುಲಿಗಳು ಭಾರತಕ್ಕೆ ಐದನೇ ಕಿರಿಯರ ವಿಶ್ವಕಪ್ ಮುಕುಟ ದೊರಕಿಸಿಕೊಡಲು ಸಮರ್ಥವಾಗಿದೆ. ಜನವರಿ 17ರಂದು ಪ್ರಾರಂಭವಾಗುವ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ತಂಡ ಎ ಗುಂಪಿನಲ್ಲಿದೆ. ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಜಪಾನ್ ತಂಡ ಭಾರತದೊಂದಿಗೆ ಈ ಗುಂಪಿನಲ್ಲಿವೆ. ಫೆ. 9ರಂದು ಫೈನಲ್ ಪಂದ್ಯ ನಡೆಯಲಿದೆ.

    MORE
    GALLERIES