Irfan Pathan: ನನಗೆ ಪಾಕ್ಗೆ ಹೋಗಲು ಇಷ್ಟವಿರಲಿಲ್ಲ, ಆದರೆ...!
Irfan Pathan: ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಪಠಾಣ್ ಟೀಮ್ ಇಂಡಿಯಾ ಪರ 29 ಟೆಸ್ಟ್ ಪಂದ್ಯಗಳಲ್ಲಿ 1,105 ರನ್ ಮತ್ತು 100 ವಿಕೆಟ್ ಪಡೆದಿದ್ದಾರೆ. ಹಾಗೆಯೇ, 120 ಏಕದಿನ ಪಂದ್ಯಗಳಿಂದ 1,544 ರನ್ ಮತ್ತು 173 ವಿಕೆಟ್ ಉರುಳಿಸಿದ್ದಾರೆ.
ಇರ್ಫಾನ್ ಪಠಾಣ್...ಈ ಹೆಸರಿನ ಉದಯೋನ್ಮುಖ ಕ್ರಿಕೆಟಿಗ ಒಬ್ಬನಿದ್ದಾನೆ ಎಂದು ವಿಶ್ವಕ್ಕೆ ಗೊತ್ತಾಗಿದ್ದು ನವೆಂಬರ್ 4, 2003 ರಲ್ಲಿ. ಅಂದು ಪಠಾಣ್ ಸ್ವಿಂಗ್ ಅನ್ನು ಇಡೀ ಕ್ರಿಕೆಟ್ ಪ್ರೇಮಿಗಳು ಹಾಡಿ ಹೊಗಳಿದ್ದರು.
2/ 16
ಹೌದು, ಅದು ಏಷ್ಯಾ ಅಂಡರ್-19 ಟೂರ್ನಮೆಂಟ್. ಪಾಕಿಸ್ತಾನದ ಲಾಹೋರ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿತ್ತು.
3/ 16
ಅಂಬಾಟಿ ರಾಯುಡು ನೇತೃತ್ವದ ಯುವಪಡೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ದಿನೇಶ್ ಕಾರ್ತಿಕ್ ಅವರ 77 ರನ್ಗಳ ಸಹಾಯ ಭಾರತ 223 ರನ್ಗಳ ಸಾಧಾರಣ ಮೊತ್ತ ಪೇರಿಸುವಂತಾಯಿತು.
4/ 16
ಇತ್ತ ಪುಟಿದೇಳುವ ಯುವ ಪಡೆಯನ್ನೇ ಹೊಂದಿದ್ದ ಬಾಂಗ್ಲಾದೇಶ ಈ ಪಂದ್ಯವನ್ನು ತನ್ನದಾಗಿಸಿಕೊಳ್ಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದರೆ ಲಾಹೋರ್ ಪಿಚ್ನಲ್ಲಿ 223 ರನ್ ದೊಡ್ಡ ಗುರಿಯಾಗಿರಲಿಲ್ಲ.
5/ 16
ಆದರೆ ಎಲ್ಲರ ಲೆಕ್ಕಚಾರಗಳನ್ನು ತಲೆ ಕೆಳಗಾಗಿಸಿದ್ದು ಇರ್ಫಾನ್ ಪಠಾಣ್. ಹೌದು, ಎರಡನೇ ಎಸೆತದಲ್ಲಿ ಎಡಗೈ ವೇಗಿ ಆರಂಭಿಕನನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದ್ದರು.
6/ 16
ಏನಾಗ್ತಿದೆ ಎಂದು ಕ್ರಿಕೆಟ್ ಪ್ರೇಮಿಗಳು ನೋಡು ನೋಡುತ್ತಿದ್ದಂತೆ 34 ರನ್ಗಳಿಗೆ ಬಾಂಗ್ಲಾ ತಂಡ ಆಲೌಟಾಗಿತ್ತು. ಕೇವಲ 16 ರನ್ ನೀಡಿ ಇರ್ಫಾನ್ ಪಠಾಣ್ 9 ವಿಕೆಟ್ ಉರುಳಿಸಿ ಗೆಲುವಿನ ಸರ್ದಾರನಾಗಿದ್ದರು.
7/ 16
ಈ ರೋಚಕ ಬೌಲಿಂಗ್ ಬಗ್ಗೆ ಇರ್ಫಾನ್ ಪಠಾಣ್ ಮಾತನಾಡಿದ್ದಾರೆ. ಸುರೇಶ್ ರೈನಾ ಜೊತೆಗಿನ ಲೈವ್ ಚಿಟ್ ಚಾಟ್ನಲ್ಲಿ ಮಾತನಾಡಿದ ಇರ್ಫಿ ನನಗೆ 2003 ರಲ್ಲಿ ಪಾಕಿಸ್ತಾನಕ್ಕೆ ಹೋಗಲು ಇಷ್ಟವಿದ್ದಿರಲಿಲ್ಲ ಎಂದಿದ್ದಾರೆ.
8/ 16
14 ವರ್ಷಗಳ ಬಳಿಕ ಭಾರತ ಅಂಡರ್ 19 ತಂಡ ಪಾಕಿಸ್ತಾನದಲ್ಲಿ ಆಡಲಿದೆ ಎಂದಾಗ ನನಗೆ 19 ವರ್ಷ. ಅದೇ ವೇಳೆ ರಣಜಿ ಟ್ರೋಫಿ ಕೂಡ ನಡೆಯುತ್ತಿತ್ತು. ನಾನು ಉತ್ತಮ ಫಾರ್ಮ್ನಲ್ಲಿದ್ದೆ. ಮುಂಬೈ ವಿರುದ್ಧದ ಪಂದ್ಯ ನಮಗೆ ನಿರ್ಣಾಯಕವಾಗಿತ್ತು.
9/ 16
ಹೀಗಾಗಿ ನಾನು ಪಾಕ್ ಪ್ರವಾಸದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಏಕೆಂದರೆ ನನಗೆ ಬರೋಡಾ ತಂಡವನ್ನು ಗೆಲ್ಲಿಸಬೇಕೆಂಬ ಆಸೆಯಿತ್ತು. ಆದರೆ ನಾನು ಅತ್ತ ಏಷ್ಯಾ ಕಪ್ ಅಂಡರ್ 19 ತಂಡಕ್ಕೂ ಆಯ್ಕೆಯಾಗಿದ್ದೆ.
10/ 16
ನನಗೆ ಪಾಕ್ ಪ್ರವಾಸ ಕೈಗೊಳ್ಳಲು ಇಷ್ಟವಿಲ್ಲ. ನಾನು ಮುಂಬೈ ವಿರುದ್ಧ ಪಂದ್ಯದಿಂದ ನನ್ನ ಕೆರಿಯರ್ಗೆ ಅನುಕೂಲವಾಗಲಿದೆ ಎಂದು ಕೋಚ್ಗೆ ಹೇಳಿದೆ. ಆಗ ಕೋಚ್ ಶೆಟ್ಟಿ ಸರ್ ನನ್ನ ಮನವೊಲಿಸಿ ಅಂಡರ್ ಟೀಮ್ ಇಂಡಿಯಾ ಪ್ರವಾಸಕ್ಕೆ ಕಳುಹಿಸಿದ್ದರು. ನಾನು ನಿರಾಸೆಯಿಂದಲೇ ತೆರಳಿದ್ದೆ ಎಂದು ಇರ್ಫಾನ್ ಪಠಾಣ್ ನೆನಪಿಸಿಕೊಂಡರು.
11/ 16
ಆ ಬಳಿಕ ನಡೆದಿದ್ದು ಇತಿಹಾಸ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ಉರುಳಿಸಿ ರಾತ್ರೋರಾತ್ರಿ ನೀನು ಹೀರೋ ಆದೆ. ಆ ಪಂದ್ಯದಲ್ಲಿ ನೀನು ಹ್ಯಾಟ್ರಿಕ್ ವಿಕೆಟ್ ಪಡೆದಿರುವುದು ಈಗಲೂ ನನಗೆ ನೆನಪಿದೆ ಎಂದರು ಅಂದಿನ ಸಹಪಾಠಿ ಸುರೇಶ್ ರೈನಾ.
12/ 16
ಆ ಇನ್ನಿಂಗ್ಸ್ಗೆ ಧನ್ಯವಾದಗಳು. ಅದರಿಂದ ನನಗೆ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಚೊಚ್ಚಲ ಪಂದ್ಯದಲ್ಲೇ ಮ್ಯಾಥ್ಯೂ ಹೇಡನ್ ಮತ್ತು ಆಡಮ್ ಗಿಲ್ಕ್ರಿಸ್ಟ್ ಅವರ ವಿಕೆಟ್ ಉರುಳಿಸಿ ನಾಯಕ ಗಂಗೂಲಿ ಅವರ ವಿಶ್ವಾಸಗಳಿಸಿದರು.
13/ 16
ಆ ಬಳಿಕ ಪಾಕಿಸ್ತಾನ ವಿರುದ್ಧದ ಸರಣಿಗಾಗಿ ಭಾರತ ತಂಡದ ಪ್ರಮುಖ ವೇಗಿಯಾಗಿ ಇರ್ಫಾನ್ ಪಠಾಣ್ರನ್ನು ಆಯ್ಕೆ ಮಾಡಲಾಗಿತ್ತು. ದಾದಾನ ನಾಯಕತ್ವದಲ್ಲಿ ಪಠಾಣ್ ಪಾಕ್ ನೆಲದಲ್ಲಿ ಹ್ಯಾಟ್ರಿಕ್ನೊಂದಿಗೆ ಉದಯೋನ್ಮುಖ ತಾರೆಯಾಗಿ ಉದಯಿಸಿದರು.
14/ 16
ಆನಂತರ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಪಠಾಣ್ ಟೀಮ್ ಇಂಡಿಯಾ ಪರ 29 ಟೆಸ್ಟ್ ಪಂದ್ಯಗಳಲ್ಲಿ 1,105 ರನ್ ಮತ್ತು 100 ವಿಕೆಟ್ ಪಡೆದಿದ್ದಾರೆ. ಹಾಗೆಯೇ, 120 ಏಕದಿನ ಪಂದ್ಯಗಳಿಂದ 1,544 ರನ್ ಮತ್ತು 173 ವಿಕೆಟ್ ಉರುಳಿಸಿದ್ದಾರೆ.
15/ 16
2007 ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಡುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದ ಎಡಗೈ ಸ್ವಿಂಗ್ ವೇಗಿ ಭಾರತದ ಪರ 24 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 172 ರನ್ ಮತ್ತು 28 ವಿಕೆಟ್ ಪಡೆದಿದ್ದಾರೆ.
16/ 16
ಅವಕಾಶದ ಕೊರತೆ ಮತ್ತು ಗಾಯದ ಸಮಸ್ಯೆಯಿಂದ ಬಹುಕಾಲ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಇರ್ಫಾನ್ ಪಠಾಣ್ ಜನವರಿ ತಿಂಗಳಲ್ಲಿ ಎಲ್ಲಾ ಮಾದರಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.