ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದ ನಾಯಕ ಸಮರ್ಥ್ ಕೇರಳ ಬೌಲರುಗಳ ಬೆವರಿಳಿಸಿದರು. ಶ್ರೀಶಾಂತ್, ಬಾಸಿಲ್ ಥಂಪಿಯಂತಹ ಸ್ಟಾರ್ ಬೌಲರುಗಳನ್ನು ಟಾರ್ಗೆಟ್ ಮಾಡಿದ ಸಮರ್ಥ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ತಲುಪಿಸಿದರು. ಮತ್ತೊಂದೆಡೆ ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಕಟ್ಟಿದ ದೇವದತ್ ಪಡಿಕ್ಕಲ್ ನಾಯಕನಿಗೆ ಉತ್ತಮ ಸಾಥ್ ನೀಡಿದರು.