2014 ರಿಂದ ಸನ್ರೈಸರ್ಸ್ ತಂಡದ ಭಾಗವಾಗಿರುವ ಆಸ್ಟ್ರೇಲಿಯನ್ ಓಪನರ್ ಡೇವಿಡ್ ವಾರ್ನರ್ 47 ಪಂದ್ಯಗಳಲ್ಲಿ ಎಸ್ಆರ್ಎಚ್ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ 25 ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಅತ್ಯುತ್ತಮ ನಾಯಕ ಎನಿಸಿಕೊಂಡಿದ್ದರು. ಆದರೆ ಈ ಬಾರಿ ವಾರ್ನರ್ ಐಪಿಎಲ್ನಲ್ಲಿ ಭಾಗವಹಿಸದಿದ್ದರೆ ಮನೀಶ್ ಪಾಂಡೆ ಎಸ್ಆರ್ಎಚ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.