ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾತಿ ನಡೆಸುತ್ತಿದ್ದಾರೆ.
2/ 11
ಬರೋಬ್ಬರಿ ಏಳು ತಿಂಗಳ ಬಳಿಕ ಮೈದಾನಕ್ಕಿಳಿದಿರುವ ಧೋನಿ ಚೇಪಕ್ನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಕೂಡ ಶುರುಮಾಡಿದ್ದಾರೆ.
3/ 11
ವಿಶೇಷ ಎಂದರೆ ಧೋನಿ ನೆಟ್ನಲ್ಲಿ ಪ್ರ್ಯಾಕ್ಟೀಸ್ ನಡೆಸುವುದನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಕಿಕ್ಕಿರಿದು ಅಭಿಮಾನಿಗಳು ಸೇರುತ್ತಿದ್ದಾರೆ.
4/ 11
ಧೋನಿ ಅಭ್ಯಾಸ ಮಾಡುತ್ತಿರುವುದನ್ನು ವೀಕ್ಷಿಸಲು ಮೈದಾನದತ್ತ ಬರುತ್ತಿರುವ ಅಭಿಮಾನಿಗಳು.
5/ 11
ಧೋನಿ ಜೊತೆಗೆ ಸುರೇಶ್ ರೈನಾ ಹಾಗೂ ಅಂಬಟಿ ರಾಯಡು ಸೇರಿದಂತೆ ಕೆಲವು ಆಟಗಾರರು ಅಭ್ಯಾಸ ಆರಂಭಿಸಲಿದ್ದಾರೆ.
6/ 11
ಮಾರ್ಚ್ 29ರಿಂದ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಕಾದಾಟ ನಡೆಸಲಿವೆ.
7/ 11
38 ವರ್ಷದ ಧೋನಿ ಅವರು ಕೊನೆಯ ಬಾರಿಗೆ 2019ರ ವಿಶ್ವಕಪ್ನಲ್ಲಿ ಕ್ರಿಕೆಟ್ ಬ್ಯಾಟ್ ಬೀಸಿದ್ದರು. ಆದರೆ, ನಿಧಾನಗತಿ ಬ್ಯಾಟಿಂಗ್ ಶೈಲಿಯಿಂದ ಅವರು ಟೀಕೆಗೆ ಗುರಿಯಾಗಿದ್ದರು.
8/ 11
ಎಂ. ಎಸ್. ಧೋನಿಗೆ ಈ ಬಾರಿಯ ಐಪಿಎಲ್ ಬಹಳ ಮುಖ್ಯವಾಗಿದೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ ಅಕ್ಟೋಬರ್ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೇಳಿದ್ದರು.
9/ 11
ಎಂ. ಎಸ್ ಧೋನಿ ಹಾಗೂ ಸುರೇಶ್ ರೈನಾ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿರುವುದು.
10/ 11
ಅಭ್ಯಾಸದಲ್ಲಿ ನಿರತರಾಗಿರುವ ಚೆನ್ನೈ ತಂಡದ ಬ್ಯಾಟ್ಸ್ಮನ್ ಮುರಳಿ ವಿಜಯ್.