ಅಬ್ಬಾ..! 75 ಕೋಟಿ ಬೆಲೆಯ ಕಾರು; ಖ್ಯಾತ ಫುಟ್ಬಾಲ್ ತಾರೆಯ ಮನೆಗೆ ಹೊಸ ಅತಿಥಿ
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹವ್ಯಾಸ ಇದ್ದೇ ಇರುತ್ತದೆ. ಅದರಂತೆ ಕೆಲವು ಸೆಲೆಬ್ರಿಟಿಗಳಿಗೆ ಕಾರು ಸಂಗ್ರಹಿಸುವ, ಬೈಕ್ ಸಂಗ್ರಹಿಸುವ ಹವ್ಯಾಸವಿರುತ್ತದೆ. ಇನ್ನು ಕೆಲವರಿಗೆ ದುಬಾರಿ ವಸ್ತುಗಳನ್ನು ಕೊಂಡುಕೊಳ್ಳುವ ಹವ್ಯಾಸ ಇರುತ್ತದೆ.
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹವ್ಯಾಸ ಇದ್ದೇ ಇರುತ್ತದೆ. ಅದರಂತೆ ಕೆಲವು ಸೆಲೆಬ್ರಿಟಿಗಳಿಗೆ ಕಾರು ಸಂಗ್ರಹಿಸುವ, ಬೈಕ್ ಸಂಗ್ರಹಿಸುವ ಹವ್ಯಾಸವಿರುತ್ತದೆ. ಇನ್ನು ಕೆಲವರಿಗೆ ದುಬಾರಿ ವಸ್ತುಗಳನ್ನು ಕೊಂಡುಕೊಳ್ಳುವ ಹವ್ಯಾಸ ಇರುತ್ತದೆ.
2/ 9
ಇದೀಗ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡೊ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ. ಹೌದು 75 ಕೋಟಿ ರೂ ಬೆಲೆಬಾಳುವ ಕಾರಿನ ಒಡೆಯನಾಗಿದ್ದಾರೆ ರೊನಾಲ್ಡೊ.
3/ 9
ಈ ಪೋರ್ಚುಗಲ್ ತಾರೆಗೆ ಕಾರಿನ ಮೇಲೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ರೊನಾಲ್ಡೊ ಬಳಿ ಅನೇಕ ಕಾರು ಸಂಗ್ರಹವಿದೆ. ಅದರಲ್ಲಿ ಹೆಚ್ಚಿನವು ದುಬಾರಿ ಬೆಲೆಯ ಕಾರುಗಳೇ ಆಗಿವೆ. ಇದೀಗ 75 ಕೋಟಿ ರೂ.ವಿನ ಕಾರೊಂದು ಸೇರ್ಪಡೆಯಾಗಿದೆ.
4/ 9
ಜಗತ್ತಿನ ಶ್ರೀಮಂತ ಆಟಗಾರ ಎಂಬ ಪ್ರಸಿದ್ಧಿ ಪಡೆದಿರುವ ರೊನಾಲ್ಡೊ ಅವರಿಗೆ ಫುಟ್ಬಾಲ್ ನಂತರ ಕಾರಿನ ಮೇಲೆ ಹೆಚ್ಚಿನ ಪ್ರೀತಿ ಹಾಗಾಗಿ ಬುಗಾಟಿ ಸಂಸ್ಥೆಯ ದುಬಾರಿ ಕಾರನ್ನು ಖರೀದಿಸಿದ್ದಾರೆ.
5/ 9
8.5 ದಶಲಕ್ಷ ಯುರೋ ಬೆಲೆಯ ಈ ಕಾರು ದುಬಾರಿಗಳ ಕಾರುಗಳ ಪಟ್ಟಿಯಲ್ಲಿ ಒಂದಾಗಿದೆ.
6/ 9
ಈ ಕಾರಿನ ಹೆಸರು ಬುಗಾಟಿ ಲಾ ವೂಯೆಟ್ ನೊಯೀರ್
7/ 9
ಕಳೆದ ವರ್ಷ ವಿನ್ಯಾಸ ಮಾಡಿದ ಕಾರನ್ನು ರೊನಾಲ್ಡೊ ಖರೀದಿಸಿದ್ದಾರೆ. ಆದರೆ ಈ ಕಾರು ಮಾತ್ರ ಇವರ ಕೈ ಸೇರಿಲ್ಲ. 2021ಕ್ಕೆ ಈ ಕಾರನ್ನು ಸಂಸ್ಥೆ ರೊನಾಲ್ಡೊ ಅವರ ಕೈಗೆ ನೀಡಲಿದೆ.
8/ 9
ಬುಗಾಟಿ ಕಂಪನಿಯು 110ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 10 ಕಾರನ್ನು ತಯಾರಿಸುತ್ತಿದ್ದೆ. ಅದರಲ್ಲಿ ಬುಗಾಟಿ ಲಾ ವೂಯೆಟ್ ನೊಯೀರ್ ಕಾರು ಕೂಡ ಒಂದು
9/ 9
ಇದೀಗ ದುಬಾರಿ ಕಾರಿನ ಒಡೆಯನಾಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರೊನಾಲ್ಡೊ ಸುದ್ದಿಯಾಗಿದ್ದಾರೆ.