ಕ್ರಿಸ್ ಗ್ರೀವ್ಸ್ ಸ್ಕಾಟ್ಲೆಂಡ್ನಲ್ಲಿ ಗುತ್ತಿಗೆ ಪಡೆದ ಆಟಗಾರನೂ ಅಲ್ಲ. ಒಂದು ತಿಂಗಳ ಹಿಂದೆ ರಾಷ್ಟ್ರೀಯ ತಂಡಕ್ಕೆ ಅವರನ್ನ ಆಯ್ಕೆ ಮಾಡುವುದೇ ಕಷ್ಟ ಎಂಬಂತಿತ್ತು. ಆದರೆ, ಬಹಳ ಕಷ್ಟಪಟ್ಟು ಅವರು ಈ ಹಂತಕ್ಕೆ ಬಂದಿದ್ದಾರೆ. ಎರಡು ಅಭ್ಯಾಸ ಪಂದ್ಯಗಳಲ್ಲಿ ಅವರು ವಿಫಲರಾದರೂ ವಿಶ್ವಕಪ್ ಪಂದ್ಯದಲ್ಲಿ ಆಡಲು ಅವರಿಗೆ ಅವಕಾಶ ಕೊಡಲಾಗಿತ್ತು. ಈ ಅವಕಾಶವನ್ನು ಅವರು ಸರಿಯಾಗಿಯೇ ಬಳಸಿಕೊಂಡಿದ್ದಾರೆ.