ಕ್ರಿಸ್ ಗೇಲ್​ಗಿಂತ ಮೊದಲೇ ಈತ ಟಿ10 ಲೀಗ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು..!

Chris Gayle: 2018 ರಲ್ಲೇ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಫ್ಘಾನಿಸ್ತಾನದ ಬ್ಯಾಟ್ಸ್​ಮನ್ ಅಬುಧಾಬಿ ಟಿ10 ಲೀಗ್​ನಲ್ಲಿ ಇತಿಹಾಸ ಬರೆದಿದ್ದರು.

First published:

  • 16

    ಕ್ರಿಸ್ ಗೇಲ್​ಗಿಂತ ಮೊದಲೇ ಈತ ಟಿ10 ಲೀಗ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು..!

    ಫೆಬ್ರವರಿ 3 ರಂದು ನಡೆದ ಮರಾಠಾ ಅರೇಬಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮರಾಠ ತಂಡ ನಿಗದಿತ 10 ಓವರ್​ಗಳಲ್ಲಿ4 ವಿಕೆಟ್ ಕಳೆದುಕೊಂಡು 97 ರನ್ ಸಿಡಿಸಿತು. ಅಲಿಶಾನ್ ಶರಫ್ 33 ರನ್ ಹಾಗೂ ಹಫೀಜ್ 20 ರನ್ ಬಾರಿಸಿದರು. ಈ ಟಾರ್ಗೆಟ್ ಬೆನ್ನಟ್ಟಿದ ಟೀಂ ಅಬುಧಾಬಿ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಮೊದಲ ಓವರ್​ನಿಂದಲೇ ಅಬ್ಬರಿಸಲು ಶುರುಮಾಡಿದರು.

    MORE
    GALLERIES

  • 26

    ಕ್ರಿಸ್ ಗೇಲ್​ಗಿಂತ ಮೊದಲೇ ಈತ ಟಿ10 ಲೀಗ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು..!

    ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ ಕೇವಲ 22 ಎಸೆತಗಳಲ್ಲಿ 84 ರನ್ ಚಚ್ಚಿದರು. ಇದರಲ್ಲಿ 9 ಅಮೋಘ ಸಿಕ್ಸರ್, 6 ಭರ್ಜರಿ ಬೌಂಡರಿಗಳು ಒಳಗೊಂಡಿತ್ತು. ಈ ಮೂಲಕ ಗೇಲ್ ಟಿ10 ಕ್ರಿಕೆಟ್​ನ ಅತೀ ವೇಗದ ಅರ್ಧಶತಕ ದಾಖಲೆ ಬರೆದರು. ಕ್ರಿಸ್ ಗೇಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಬುಧಾಬಿ ತಂಡ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

    MORE
    GALLERIES

  • 36

    ಕ್ರಿಸ್ ಗೇಲ್​ಗಿಂತ ಮೊದಲೇ ಈತ ಟಿ10 ಲೀಗ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು..!

    ಆದರೆ ಇದಕ್ಕೂ ಮೊದಲೇ, ಅಂದರೆ 2018 ರಲ್ಲೇ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಫ್ಘಾನಿಸ್ತಾನದ ಬ್ಯಾಟ್ಸ್​ಮನ್ ಅಬುಧಾಬಿ ಟಿ10 ಲೀಗ್​ನಲ್ಲಿ ಇತಿಹಾಸ ಬರೆದಿದ್ದರು.

    MORE
    GALLERIES

  • 46

    ಕ್ರಿಸ್ ಗೇಲ್​ಗಿಂತ ಮೊದಲೇ ಈತ ಟಿ10 ಲೀಗ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು..!

    ಹೌದು, ನವೆಂಬರ್ 21, 2018 ರಲ್ಲಿ ಶಾರ್ಜಾದಲ್ಲಿ ನಡೆದ ಟಿ10 ಲೀಗ್​ನಲ್ಲಿ ರಜಪೂತ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಫ್ಘಾನ್ ಬ್ಯಾಟ್ಸ್​ಮನ್ ಮೊಹಮ್ಮದ್ ಶೆಹಝಾದ್ ಅಬ್ಬರಿಸಿದ್ದರು. ಸಿಂಧೀಸ್ ತಂಡ ನೀಡಿದ 94 ರನ್​ಗಳ ಟಾರ್ಗೆಟ್​ನ್ನು ಶೆಹಝಾದ್-ಮೆಕಲಂ ಜೋಡಿ ಕೇವಲ 4 ಓವರ್​ನಲ್ಲಿ ಚೇಸ್ ಮಾಡಿತ್ತು.

    MORE
    GALLERIES

  • 56

    ಕ್ರಿಸ್ ಗೇಲ್​ಗಿಂತ ಮೊದಲೇ ಈತ ಟಿ10 ಲೀಗ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು..!

    ಈ ವೇಳೆ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಟಿ10 ಲೀಗ್​ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ದಾಖಲೆಯನ್ನು ಶೆಹಝಾದ್ ಬರೆದಿದ್ದರು. ಅಲ್ಲದೆ ಈ ಪಂದ್ಯದಲ್ಲಿ 16 ಎಸೆತಗಳಲ್ಲಿ 74 ರನ್ ಚಚ್ಚಿದ್ದರು. ಈ ವೇಳೆ ಶೆಹಝಾದ್ ಬ್ಯಾಟ್​ನಿಂದ ಸಿಡಿದದ್ದು 8 ಭರ್ಜರಿ ಸಿಕ್ಸರ್, 6 ಸೂಪರ್ ಫೋರ್​ಗಳು.

    MORE
    GALLERIES

  • 66

    ಕ್ರಿಸ್ ಗೇಲ್​ಗಿಂತ ಮೊದಲೇ ಈತ ಟಿ10 ಲೀಗ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು..!

    ಇದೀಗ ಕ್ರಿಸ್ ಗೇಲ್ 12 ಎಸೆತಗಳಲ್ಲೇ ಅರ್ಧಶತಕ ಪೂರೈಸುವ ಮೂಲಕ 2 ವರ್ಷಗಳ ಹಿಂದೆ ಶೆಹಝಾದ್ ನಿರ್ಮಿಸಿದ್ದ ಟಿ10 ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

    MORE
    GALLERIES