ಆದರೀಗ ಟೂರ್ನಿ ಯುಎಇಗೆ ಶಿಫ್ಟ್ ಆಗುತ್ತಿದ್ದಂತೆ ಚಹಲ್ ಫುಲ್ ಹ್ಯಾಪಿಯಾಗಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ.
ಏಕೆಂದರೆ ಕಳೆದ ಸೀಸನ್ನಲ್ಲಿ ಯುಎಇನಲ್ಲಿ ಮಿಂಚಿದ ಕೆಲವೇ ಕೆಲವು ಸ್ಪಿನ್ನರ್ಗಳಲ್ಲಿ ಚಹಲ್ ಕೂಡ ಒಬ್ಬರು. ಅದರಲ್ಲೂ ಕಳೆದ ಸೀಸನ್ ಐಪಿಎಲ್ನ ಟಾಪ್ 5 ವಿಕೆಟ್ ಟೇಕರ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸ್ಪಿನ್ನರ್ ಚಹಲ್. ಹೀಗಾಗಿ ಯುಎಇ ಮೈದಾನದಲ್ಲಿ ಚಹಲ್ ಸ್ಪಿನ್ ಮೋಡಿ ಮಾಡುವುದು ಖಚಿತ.
ಆದರೆ ಸ್ಪಿನ್ ವಿಭಾಗದಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿರಲಿಲ್ಲ. ಆದರೀಗ ಯುಎಇ ಮೈದಾನದಲ್ಲಿ ಲೆಗ್ ಸ್ಪಿನ್ ಮೋಡಿ ಮಾಡುವ ಚಹಲ್ ಆರ್ಸಿಬಿ ತಂಡ ಆ ಕೊರತೆಯನ್ನು ನೀಗಿಸಲಿದ್ದಾರೆ. ಅದರೊಂದಿಗೆ ಆರ್ಸಿಬಿ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ. ಈ ಮೂಲಕ ಆರ್ಸಿಬಿಗೆ ಚೊಚ್ಚಲ ಬಾರಿ ಕಪ್ ಗೆದ್ದು ಕೊಡುವ ವಿಶ್ವಾಸದಲ್ಲಿದ್ದಾರೆ ಯುಜುವೇಂದ್ರ ಚಹಲ್.