ವೆಸ್ಟ್ ಇಂಡೀಸ್ ಪುರುಷರ ತಂಡ ಜನವರಿಯಲ್ಲಿ ಐರ್ಲೆಂಡ್ ವಿರುದ್ಧದ ಸರಣಿ (ಮೂರು ಏಕದಿನ ಮತ್ತು ಮೂರು ಟಿ 20) ಆಡಿತ್ತು. ಹಾಗೆಯೇ ಫೆಬ್ರವರಿ-ಮಾರ್ಚ್ನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನಾಡಿತ್ತು. ಆದರೆ ಈ ಪಂದ್ಯಗಳಲ್ಲಿ ಆಡಿದ ವೇತನವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಪಾವತಿಸದಿರುವುದು ಆಟಗಾರರ ಚಿಂತೆಗೆ ಕಾರಣವಾಗಿದೆ.
ಕಳೆದ ಎರಡು ವರ್ಷಗಳಿಂದ ವೆಸ್ಟ್ ಇಂಡೀಸ್ನ ಆರ್ಥಿಕ ಸ್ಥಿತಿ ಹೀನಾಯ ಮಟ್ಟದಲ್ಲಿದೆ. 2018 ರಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ತವರಿನಲ್ಲಿ ಆಯೋಜಿಸಿದ್ದ ಪಂದ್ಯಗಳಿಂದ ಮಂಡಳಿ ಅಪಾರ ನಷ್ಟವನ್ನು ಅನುಭವಿಸಿದೆ. ವೆಸ್ಟ್ ಇಂಡೀಸ್ ಆಯೋಜಿಸಿದ ಸರಣಿಗಳಿಂದ ಒಟ್ಟು 22 ಮಿಲಿಯನ್ ಡಾಲರ್ ಕಳೆದುಕೊಂಡಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ ಆಟಗಾರರಿಗೆ ಪಂದ್ಯ ಶುಲ್ಕ ನೀಡಲು ವಿಳಂಬ ಮಾಡಲಾಗುವುದಿಲ್ಲ. ಜೂನ್ವರೆಗೆ ಎಲ್ಲಾ ಪಂದ್ಯ ಶುಲ್ಕವನ್ನು ಪಾವತಿಸಲು ನಾವು ಪ್ರಯತ್ನಿಸುತ್ತೇವೆ. ಕಳೆದ ವರ್ಷ ಕೂಡ ನಾವು ತಡವಾಗಿ ಪಂದ್ಯ ಶುಲ್ಕವನ್ನು ನೀಡಿದ್ದೇವೆ. ಹಾಗೆಯೇ ವರ್ಷದ ಅಂತ್ಯದವರೆಗಿನ ಸಂಪೂರ್ಣ ಬಾಕಿ ಶುಲ್ಕವನ್ನು ಪಾವತಿಸಲಾಗಿತ್ತು ಎಂದು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಅಧಿಕಾರಿ ತಿಳಿಸಿದರು.