ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

ಮಧ್ಯರಾತ್ರಿ ಆಯಿತು. ಅದಾಗಲೇ ಎಡಿಸನ್​ ಗೆಳೆಯರ ಜೊತೆ ಸ್ವಲ್ಪ ಮದ್ಯ ಸೇವನೆ ಮಾಡಿದ್ದ. ಗೆಳೆಯರ ಜೊತೆ ಕೂತು ಹರಟಲು ತನ್ನ ರೂಮ್​ನತ್ತ ಹೊರಟ ಎಡಿಸನ್​. ಗೆಳೆಯರು ಅವನನ್ನು ಹಿಂಬಾಲಿಸಿದರು. ರೂಮ್​ನ ಬಾಗಿಲು ತೆರೆಯುತ್ತಿದ್ದಂತೆ ಎಡಿಸನ್​ಗೆ ಶಾಕ್​ ಕಾದಿತ್ತು. ಆತ ಒಮ್ಮೆ ದಂಗಾಗಿ ಬಿಟ್ಟ.

First published:

 • 110

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ಡ್ಯಾನಿಯಲ್​ ಕೊರ್ರೆಯಾ ಬ್ರೆಜಿಲ್​ ಫುಟ್​ಬಾಲ್​ ಆಟಗಾರ. ಆತನ ವಯಸ್ಸು ಕೇವಲ 24 ವರ್ಷ. ಡ್ಯಾನಿಯಲ್​ಗೆ ಎಡಿಸನ್​​ ಬ್ರಿಟರ್ಸ್​​ ಹಾಗೂ ಆತನ ಪತ್ನಿ ಕ್ರಿಸ್ಟಿಯಾನಾ ಒಳ್ಳೆಯ ಗೆಳೆಯರಾಗಿದ್ದರು. ಈ ದಂಪತಿ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಮುಂದಾಗಿತ್ತು. ಅದಕ್ಕಾಗಿ ಪಾರ್ಟಿ ಏರ್ಪಡಿಸಿದ್ದರು. ಈ ವೇಳೆ ಗೆಳೆಯನ ನಿಜವಾದ ಮುಖವಾಡ ಬಯಲಾಗಿತ್ತು.

  MORE
  GALLERIES

 • 210

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ಕ್ರಿಸ್ಟಿಯಾನಾ ಜತೆ ಡ್ಯಾನಿಯಲ್​ ಯಾವಾಗಲೂ ಆಪ್ತನಾಗಿರುತ್ತಿದ್ದ. ಅವಳ ಕಷ್ಟ-ಸುಖದಲ್ಲಿ ಈತನೂ ಭಾಗಿಯಾಗುತ್ತಿದ್ದ. ಈ ಬಗ್ಗೆ ಎಡಿಸನ್ ಅಸಮಾಧಾನ ಹೊಂದಿದ್ದ. ಆದರೆ ಅದನ್ನು ನೇರವಾಗಿ ಹೇಳಿಕೊಳ್ಳುವುದಾದರೂ ಹೇಗೆ. ಹಾಗೆ ಹೇಳಿದರೆ ಪತ್ನಿ ಬಗ್ಗೆಯೇ ಅನುಮಾನಪಟ್ಟಂತಾಗುತ್ತದೆ ಎಂದು ಸುಮ್ಮನಿದ್ದ. ಪಾರ್ಟಿ ದಿನವೂ ಇಬ್ಬರೂ ಕ್ರಿಸ್ಟಿಯಾನಾ-ಡ್ಯಾನಿಯಲ್​ ಕೈಕೈ ಹಿಡಿದುಕೊಂಡು ಮಾತನಾಡಿದ್ದರು.

  MORE
  GALLERIES

 • 310

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ರಾತ್ರಿಯವರೆಗೂ ಔತಣ ಕೂಟ ನಡೆಯಿತು. ಬಂದ ಅತಿಥಿಗಳಿಗೆ ಆತಿಥ್ಯ ಮಾಡುವುದರಲ್ಲೇ ಎಡಿಸನ್​ ಬ್ಯುಸಿಯಾದರು. ಹೀಗಾಗಿ ಹೆಂಡತಿಕಡೆ ಗಮನ ಹರಿಸಲು ಆಗಲೇ ಇಲ್ಲ!

  MORE
  GALLERIES

 • 410

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ಮಧ್ಯರಾತ್ರಿ ಆಯಿತು. ಅದಾಗಲೇ ಎಡಿಸನ್​ ಗೆಳೆಯರ ಜೊತೆ ಸ್ವಲ್ಪ ಮದ್ಯ ಸೇವನೆ ಮಾಡಿದ್ದ. ಗೆಳೆಯರ ಜೊತೆ ಕೂತು ಹರಟಲು ತನ್ನ ರೂಮ್​ನತ್ತ ಹೊರಟ ಎಡಿಸನ್​. ಗೆಳೆಯರು ಅವನನ್ನು ಹಿಂಬಾಲಿಸಿದರು. ರೂಮ್​ನ ಬಾಗಿಲು ತೆರೆಯುತ್ತಿದ್ದಂತೆ ಎಡಿಸನ್​ಗೆ ಶಾಕ್​ ಕಾದಿತ್ತು. ಆತ ಒಮ್ಮೆ ದಂಗಾಗಿ ಬಿಟ್ಟ.

  MORE
  GALLERIES

 • 510

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ಹಾಸಿಗೆಯಲ್ಲಿ ಕ್ರಿಸ್ಟಿಯಾನಾ-ಡ್ಯಾನಿಯಲ್ ಒಟ್ಟಿಗೆ ಮಲಗಿದ್ದರು. ಅವರ ಕಿಲ ಕಿಲ ನಗು ಎಡಿಸನ್​ ಪಿತ್ತವನ್ನು ನೆತ್ತಿಗೇರಿಸಿಬಿಟ್ಟಿತ್ತು.

  MORE
  GALLERIES

 • 610

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ಬೇರೆಯವರ ಜೊತೆ ಹೆಂಡತಿ ಇಷ್ಟು ಆರಾಮವಾಗಿ ಮಲಗಿದ್ದಾಳೆ ಎಂಬುದು ಗೆಳೆಯರಿಗೆ ಗೊತ್ತಾದರೆ ಹೇಗಾಗಬೇಡ? ಅದಕ್ಕಾಗಿ ಆತ ಒಂದು ಪ್ಲ್ಯಾನ್​ ಮಾಡಿಯೇ ಬಿಟ್ಟ. ಡ್ಯಾನಿಯಲ್​ ತನ್ನ ಹೆಂಡತಿ ಮೇಲೆ ಅತ್ಯಾಚಾರವೆಸಗುತ್ತಿದ್ದಾನೆ ಎಂದು ಎಡಿಸನ್​ ಅರಚಲು ಆರಂಭಿಸಿದ. ಆತನ ಒಂದೆರಡು ಗೆಳೆಯರು ಇದಕ್ಕೆ ಸಾತ್​ ನೀಡಿದ್ದರು.

  MORE
  GALLERIES

 • 710

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ಏನಾಗುತ್ತಿದೆ ಎಂದು ತಿಳಿಯುವುದರೊಳಗೇ ಎಡಿಸನ್​ ಹಾಗೂ ಅವನ ಗೆಳೆಯರು ಡ್ಯಾನಿಯಲ್​ಗೆ ಧರ್ಮದೇಟು ಹಾಕಲು ಆರಂಭಿಸಿದ್ದರು. ನಂತರ ಡ್ಯಾನಿಯಲ್​ನನ್ನು ಕಾರಿನಲ್ಲಿ ತುಂಬಿಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿದರು. ಆತನಿಗೆ ಶಿಕ್ಷೆ ನೀಡುವುದಕ್ಕೆ ಎಡಿಸನ್​ ಗೆಳೆಯರು ಕೂಡ ಒಪ್ಪಿದ್ದರು. ಕಾರಣ, ಕ್ರಿಸ್ಟಿಯಾನಾ ಮುಗ್ದೆ, ಆಕೆಯ ಮೇಲೆ ಅತ್ಯಾಚಾರವೆಸಗಲು ಡ್ಯಾನಿಯಲ್​ ಪ್ರಯತ್ನಿಸಿದ್ದ ಎಂಬುದನ್ನು ಬಲವಾಗಿ ನಂಬಿದ್ದರು.

  MORE
  GALLERIES

 • 810

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ಡ್ಯಾನಿಯಲ್​ನನ್ನು ದೂರದ ಕಾಡೊಂದಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ ಆತನ ಮೊಬೈಲ್​ ಪರಿಶೀಲಿಸಿದಾಗ ಕ್ರಿಸ್ಟಿಯಾನಾ ಜೊತೆ ಮಲಗಿದ್ದ ಕೆಲ ಫೋಟೋಗಳನ್ನು ಡ್ಯಾನಿಯಲ್​ ಗೆಳೆಯರಿಗೆ ಕಳಹಿಸಿದ್ದ. ಆಕೆ ಫೋಟೋದಲ್ಲಿ ನಗುತ್ತಾ ಇದ್ದಳು. ಇದನ್ನು ನೋಡಿದ ಎಡಿಸನ್​ಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಕೋಪ ತಡೆಯಲಾರದೇ ಡ್ಯಾನಿಯಲ್​ನ ಗುಪ್ತಾಂಗವನ್ನೇ ಕತ್ತರಿಸಿಬಿಟ್ಟ ಎಡಿಸನ್​.

  MORE
  GALLERIES

 • 910

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ರಕ್ತದ ಮಡುವಿನಲ್ಲಿ ಆತ ಹೊರಳಾಡುತ್ತಿದ್ದರೂ ಎಡಿಸನ್​ನ ಕೋಪ ಮಾತ್ರ ಚೂರು ಕಡಿಮೆ ಆಗಿರಲಿಲ್ಲ. ನಂತರ ನಾಲಿಗೆಯನ್ನೂ ಕತ್ತಿರಿಸಿದ. ಈ ವೇಳೆ ಡ್ಯಾನಿಯಲ್​ ಪ್ರಾಣಪಕ್ಷಿಯೇ ಹಾರಿ ಹೋಗಿಬಿಟ್ಟಿತ್ತು. ಎಡಿಸನ್​ಗೆ ಮೈ ಝಲ್​ ಎಂದಿತ್ತು. ಕೋಪ ಇಳಿದು ತಾನು ಮಾಡಿದ ತಪ್ಪಿನ ಅರಿವಾಯಿತು. ಅದಾಗಲೇ ಗೆಳೆಯರೆಲ್ಲರೂ ಒಬ್ಬಬ್ಬರಾಗಿಯೇ ಅಲ್ಲಿಂದ ಕಾಲ್ಕಿತ್ತಿದ್ದರು. ಬೇರೆ ದಾರಿ ಕಾಣದೇ ಕಾಡಿನ ಮಧ್ಯವೇ ಹೆಣ ಬಿಸಾಡಿ ಬಂದ ಎಡಿಸನ್​.

  MORE
  GALLERIES

 • 1010

  ಗೆಳೆಯನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡ ಖ್ಯಾತ ಫುಟ್ಬಾಲ್​ ಆಟಗಾರ: ವಿಷಯ ತಿಳಿದ ಫ್ರೆಂಡ್ ಮಾಡಿದ್ದೇನು?

  ಡ್ಯಾನಿಯಲ್​ ಕಾಣೆಯಾದ ವಿಚಾರ ತಿಳಿದು ಪೊಲೀಸರಿಗೆ ಕುಟುಂಬದವರ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಅಸಲಿ ವಿಷಯ ತಿಳಿದಿದೆ. ಎಡಿಸನ್​, ಕ್ರಿಸ್ಟಿಯಾನಾ ಹಾಗೂ ಆತನ ಗೆಳೆಯರು ಪೊಲೀಸ್​ ಠಾಣೆಯಲ್ಲಿ ಸದ್ಯ ಕಂಬಿ ಎಣಿಸುತ್ತಿದ್ದಾರೆ. ಅಷ್ಟಕ್ಕೂ ಡ್ಯಾನಿಯಲ್​ ನಿಜವಾಗಲೂ ಅತ್ಯಾಚಾರ ನಡೆಸಿದ್ದನಾ ಅಥವಾ ಇಬ್ಬರೂ ಸಮ್ಮತಿ ಮೇರೆಗೆ ಜೊತೆಗೆ ಮಲಗಿದ್ದರಾ ಎಂಬುದಕ್ಕೆ ಕ್ರಿಸ್ಟಿಯಾನಾ ಉತ್ತರಿಸಬೇಕು.

  MORE
  GALLERIES