ದೇಶಿ Cricketನಲ್ಲಿ ತಲೆ ಎತ್ತಿದ Fixing ಭೂತ: ಇಷ್ಟು ಮೊತ್ತಕ್ಕೆ ಆಟಗಾರನಿಗೆ ಆಫರ್!
ದೇಶಿಯ ಕ್ರಿಕೆಟರ್ ನಲ್ಲಿ ಮತ್ತೆ ಫಿಕ್ಸಿಂಗ್ ಭೂತ ತಲೆ ಎತ್ತಿದ್ದು, ತಮಿಳುನಾಡು ಆಟಗಾರನಿಗೆ ಆಫರ್ ನೀಡಲಾಗಿದೆ. ಬೆಂಗಳೂರಿನಲ್ಲಿ ಕುಳಿತು ತಮಿಳುನಾಡು ಆಟಗಾರನಿಗೆ ಗಾಳ ಹಾಕುವ ಯತ್ನ ಮಾಡಲಾಗಿದೆ.
ತಮಿಳುನಾಡಿನ ಕ್ರಿಕೆಟಿಗ ಸತೀಶ್ ರಾಜಗೋಪಾಲ್ ಅವರಿಗೆ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಆಫರ್ ಕಳುಹಿಸಲಾಗಿದೆ. ಈ ವಿಷಯವನ್ನು ಸತೀಶ್ ರಾಜಗೋಪಾಲ್ ಬಿಸಿಸಿಐ ಗಮನಕ್ಕೆ ತಂದಿದ್ದಾರೆ.
2/ 5
ಬನ್ನಿ ಆನಂದ್ ಎಂಬಾತನ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಸತೀಶ್ ರಾಜಗೋಪಾಲ್ ಅವರನ್ನು ಸಂಪರ್ಕಿಸಲಾಗಿದೆ. ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್ ನಲ್ಲಿ ಭಾಗಿಯಾಗಲು ಒಪ್ಪಿದ್ದಾರೆ ಅನ್ನೋ ಸಂದೇಶ ಕಳುಹಿಸಿದ್ದಾರೆ.
3/ 5
ಫಿಕ್ಸಿಂಗ್ ನಲ್ಲಿ ಭಾಗಿಯಾದ್ರೆ 40 ಲಕ್ಷ ರೂಪಾಯಿ ನೀಡೋದಾಗಿ ಮೆಸೇಜ್ ಕಳುಹಿಸಲಾಗಿತ್ತು. ಆಫರ್ ತಿರಸ್ಕರಿಸಿರುವ ಸತೀಶ್ ರಾಜಗೋಪಾಲ್, ನೇರವಾಗಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿದ್ದಾರೆ.
4/ 5
ಬನ್ನಿ ಆನಂದ್ ಎಂಬಾತನ ಇನ್ಸ್ಟಾಗ್ರಾಂ ಖಾತೆ ಬೆಂಗಳೂರಿನಿಂದ ನಿರ್ವಹಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಬಿಸಿಸಿಐನಿಂದ ಸೌತ್ ಜೋನ್ ಆ್ಯಂಟಿ ಕರೆಪ್ಷನ್ & ಇಂಟಿಗ್ರಿಟಿ ಯೂನಿಟ್ ಗೆ ಮಾಹಿತಿ ನೀಡಲಾಗಿತ್ತು.
5/ 5
ಸದ್ಯ ಸೌತ್ ಜೋನ್ ಆ್ಯಂಟಿ ಕರೆಪ್ಷನ್ ಯೂನಿಟ್ ನಿಂದ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದೆ. ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರಿಂದ ಆರೋಪಿಗಾಗಿ ತಲಾಶ್ ನಡೆಸುತ್ತಿದ್ದಾರೆ.