'ಮರಿಯಾ ಕಮ್ಮಿನ್ಸ್ ಸಾವಿನ ಸುದ್ದಿ ತಿಳಿದು ನಮಗೆ ಅತೀವ ದುಃಖವಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರವಾಗಿ, ಪ್ಯಾಟ್ ಕಮಿನ್ಸ್ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಸಂತಾಪ ತಿಳಿಸುತ್ತೇವೆ. ಮರಿಯಾ ಅವರ ಗೌರವಾರ್ಥ ಆಸ್ಟ್ರೇಲಿಯಾ ತಂಡ ಕಪ್ಪು ಪಟ್ಟಿಯನ್ನು ಧರಿಸಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಇಂದು ಟ್ವೀಟ್ ಮಾಡಿದೆ. ಮರಿಯಾ ಸಾವಿನ ಬಗ್ಗೆ ಬಿಸಿಸಿಐ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. " ಮರಿಯಾ ಸಾವಿನಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ಪ್ಯಾಟ್ ಮತ್ತು ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಮೊದಲ ಮೂರು ಟೆಸ್ಟ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ನಾಲ್ಕನೇ ಟೆಸ್ಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ 150 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 417 ರನ್ ಗಳಿಸಿದೆ. ಖವಾಜಾ 180 ಮತ್ತು ಗ್ರೀನ್ 114 ರನ್ಗಳಿಸಿದ ತಂಡದ ಮೊತ್ತವನ್ನು 400 ಗಡಿ ದಾಟಲು ನೆರವಾಗಿದ್ದರು.