ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮಶತಮಾನೋತ್ಸವದ ಸ್ಮರಣಾರ್ಥ ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಇದೇ ತಿಂಗಳು ಆಯೋಜಿಸಿದ್ದ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ಟಿ20 ಟೂರ್ನಿ ರದ್ದಾಗುವ ಸಾಧ್ಯತೆಯಿದೆ.
2/ 42
ಢಾಕಾದಲ್ಲಿ ನಡೆಯಲಿರುವ ಎರಡು ಟಿ20 ಟೂರ್ನಿ ಪಂದ್ಯಗಳಿಗಾಗಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ತಂಡಗಳ 30 ಆಟಗಾರರ ಪಟ್ಟಿಯನ್ನು ಬಿಸಿಬಿ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆ ಮಾಡಿತ್ತು.
3/ 42
ಇನ್ನೇನು ಟೂರ್ನಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ವಿಶ್ವದೆಲ್ಲೆಡೆ ಕೊರೋನಾ ವೈರಸ್ ಮರಣ ಮೃದಂಗವಾಡುತ್ತಿರುವುದು ಆಯೋಜಕರ ನಿದ್ದೆಗೆಡಿಸಿದೆ.
4/ 42
ಅನೇಕ ದೇಶಗಳು ಈಗಾಗಲೇ ಕೆಲ ಕ್ರೀಡಾಕೂಟಗಳನ್ನು ರದ್ದು ಮಾಡಿದ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸಹ ಸ್ಮರಣಾರ್ಥ ಟೂರ್ನಿಯನ್ನು ಮುಂದೂಡು ಬಗ್ಗೆ ಆಲೋಚಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.
5/ 42
ಏಕೆಂದರೆ ಬಾಂಗ್ಲಾದಲ್ಲೂ ಕೊರೋನಾ ಭೀತಿ ಆವರಿಸಿದ್ದು, ಇದೇ ವೇಳೆ ಟೂರ್ನಿ ಆಯೋಜಿಸಿದರೆ ಪ್ರೇಕ್ಷಕರ ಕೊರತೆ ಎದ್ದು ಕಾಣಲಿದೆ. ಅಲ್ಲದೆ ಸ್ಟಾರ್ ಕ್ರಿಕೆಟರುಗಳು ಕೂಡ ಟೂರ್ನಿಯಲ್ಲಿ ಭಾಗವಹಿಸಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಹೀಗಾಗಿ 2 ಟಿ20 ಪಂದ್ಯಗಳ ಮುಂದೂಡಲು ಬಿಸಿಬಿ ನಿರ್ಧರಿಸಿದೆ ಎನ್ನಲಾಗಿದೆ.
6/ 42
ಈ ಹಿಂದೆ ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾರ್ಚ್ 21 ಮತ್ತು 22 ರಂದು ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವೆ ಚುಟುಕು ಕದನಕ್ಕೆ ವೇದಿಕೆ ರೂಪಿಸಲಾಗಿತ್ತು. ಅಲ್ಲದೆ ಈ ಟೂರ್ನಿಯಲ್ಲಿ ಟೀಂ ಇಂಡಿಯಾದ 6 ಕ್ರಿಕೆಟರುಗಳು ಭಾಗವಹಿಸಲಿದ್ದರು.
7/ 42
ಇನ್ನು ಐಪಿಎಲ್ಗೂ ಕೊರೋನಾ ಭೀತಿ ಆವರಿಸಿದ್ದು, ಈಗಾಗಲೇ ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರ ಪಂದ್ಯ ಆಯೋಜಿಸಲು ಹಿಂದೇಟು ಹಾಕಿದೆ.
8/ 42
ಇದರ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮುಂದೂಡುವ ಯಾವುದೇ ಪ್ರಸ್ತಾವನೆ ಇಲ್ಲ. ಎಲ್ಲಾ ಸುರಕ್ಷತೆಯೊಂದಿಗೆ ಪಂದ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
9/ 42
ಇದರ ಬಗ್ಗೆ ಮದ್ರಾಸ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಒಂದು ಸಲ್ಲಿಕೆ ಆಗಿದ್ದು, ಐಪಿಎಲ್ ರದ್ದು ಮಾಡುವಂತೆ ಕೋರಲಾಗಿದೆ. ಹೀಗಾಗಿ ಐಪಿಎಲ್ ಆಯೋಜನೆಗೆ ತಡೆ ಬೀಳುವ ಸಾಧ್ಯತೆಯಿದೆ.
10/ 42
ಅತ್ತ ಏಷ್ಯಾ ಇಲೆವೆನ್- ವಿಶ್ವ ಇಲೆವೆನ್ ಟೂರ್ನಿ ಕೂಡ ರದ್ದಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದ್ದು, ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಬಾಂಗ್ಲಾ ಟಿ20, ಐಪಿಎಲ್ ಪಂದ್ಯಗಳ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
11/ 42
ಇನ್ನು ಏಷ್ಯಾ ಇಲೆವೆನ್ ತಂಡದಲ್ಲಿ ಭಾರತದ 6 ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಬಾಂಗ್ಲಾದೇಶದ ನಾಲ್ವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ.
12/ 42
ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಿಂದ ತಲಾ ಇಬ್ಬರನ್ನು ಆರಿಸಲಾಗಿದ್ದು, ನೇಪಾಳ ಆಟಗಾರನಿಗೂ ಸ್ಥಾನ ನೀಡಲಾಗಿದೆ.
13/ 42
ಇಲ್ಲಿ ಅಚ್ಚರಿಯ ವಿಷಯವೆಂದರೆ ಏಷ್ಯಾ ಇಲೆವೆನ್ನಲ್ಲಿ ಪಾಕಿಸ್ತಾನದ ಯಾವುದೇ ಆಟಗಾರನಿಗೆ ಅವಕಾಶ ನೀಡದಿರುವುದು.
14/ 42
ಹಾಗೆಯೇ ವಿಶ್ವ ಇಲೆವೆನ್ ತಂಡದಲ್ಲಿ ಅತಿರಥ ಮಹಾರಥ ಆಟಗಾರರಿಗೆ ಅವಕಾಶ ನೀಡಿದ್ದು, ತಂಡವನ್ನು ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ.
15/ 42
ಏಷ್ಯಾ ಇಲೆವೆನ್ ಹೀಗಿದೆ:
16/ 42
ವಿರಾಟ್ ಕೊಹ್ಲಿ
17/ 42
ಕೆ.ಎಲ್.ರಾಹುಲ್
18/ 42
ಶಿಖರ್ ಧವನ್
19/ 42
ರಿಷಭ್ ಪಂತ್
20/ 42
ಕುಲ್ದೀಪ್ ಯಾದವ್
21/ 42
ಮೊಹಮ್ಮದ್ ಶಮಿ
22/ 42
ತಮೀಮ್ ಇಕ್ಬಾಲ್ (ಬಾಂಗ್ಲಾದೇಶ)
23/ 42
ಲಿಟಾನ್ ದಾಸ್ (ಬಾಂಗ್ಲಾದೇಶ)
24/ 42
ಮುಶ್ಫಿಕರ್ ರಹೀಂ (ಬಾಂಗ್ಲಾದೇಶ)
25/ 42
ತಿಸರಾ ಪೆರೆರಾ (ಶ್ರೀಲಂಕಾ)
26/ 42
ರಶೀದ್ ಖಾನ್ (ಅಫ್ಘಾನಿಸ್ತಾನ್)
27/ 42
ಮುಸ್ತಾಫಿಜುರ್ ರಹಮಾನ್ (ಬಾಂಗ್ಲಾದೇಶ)
28/ 42
ಸಂದೀಪ್ ಲಾಮಿಚ್ಚಾನೆ (ನೇಪಾಳ)
29/ 42
ಲಸಿತ್ ಮಾಲಿಂಗ (ಶ್ರೀಲಂಕಾ)
30/ 42
ವಿಶ್ವ ಇಲೆವೆನ್ ತಂಡ ಹೀಗಿದೆ:
31/ 42
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್ )
32/ 42
ಕ್ರಿಸ್ ಗೇಲ್ ( ವೆಸ್ಟ್ ಇಂಡೀಸ್)
33/ 42
ಫಫ್ ಡುಪ್ಲೆಸಿಸ್ (ದಕ್ಷಿಣ ಆಫ್ರಿಕಾ)
34/ 42
ನಿಕೋಲಸ್ ಪೂರನ್( ವೆಸ್ಟ್ ಇಂಡೀಸ್)
35/ 42
ಬ್ರೆಂಡನ್ ಟೇಲರ್ (ಜಿಂಬಾಬ್ವೆ)
36/ 42
ಜಾನಿ ಬೈರ್ಸ್ಟೊ (ಇಂಗ್ಲೆಂಡ್)
37/ 42
ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್)
38/ 42
ಶೆಲ್ಡನ್ ಕಾಟ್ರೆಲ್ (ವೆಸ್ಟ್ ಇಂಡೀಸ್)
39/ 42
ಲುಂಗಿ ಎನ್ಗಿಡಿ (ದಕ್ಷಿಣ ಆಫ್ರಿಕಾ)
40/ 42
ಆ್ಯಂಡ್ರೊ ಟೈ (ಆಸ್ಟ್ರೇಲಿಯಾ)
41/ 42
ಮಿಚೆಲ್ ಮೆಕ್ಲೆನಗ್ನಾನ್ (ನ್ಯೂಜಿಲೆಂಡ್)
42/ 42
ಏಷ್ಯಾ ಇಲೆವೆನ್ ತಂಡವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ.