ಫುಟ್ಬಾಲ್ ಪಂದ್ಯ ಮುಗಿದ ಬಳಿಕ ಗಲಾಟೆ ನಡೆಯುವುದು ಹೊಸದೇನಲ್ಲ. ಈ ವೇಳೆ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಳ್ಳುವುದನ್ನು ನೀವು ನೋಡಿರುತ್ತೀರಿ.
2/ 9
ಆದರೆ ಫ್ರಾನ್ಸ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪಂದ್ಯ ಮುಗಿದ ಬಳಿಕ ಆಟಗಾರನೊಬ್ಬ ಎದುರಾಳಿ ತಂಡದ ಆಟಗಾರನ ಶಿಶ್ನವನ್ನೇ ಕಚ್ಚಿದ್ದಾನೆ! ದೇಶೀಯ ಫುಟ್ಬಾಲ್ ಪಂದ್ಯದ ಟೂರ್ನಮೆಂಟ್ ಒಂದರಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿ ಆಗಿದೆ.
3/ 9
ಟೆರ್ವಿಲ್ ಹಾಗೂ ಸೋಟ್ರೆಚ್ ತಂಡಗಳ ಮಧ್ಯೆ ಫುಟ್ಬಾಲ್ ಪಂದ್ಯ ಏರ್ಪಡಿಸಲಾಗಿತ್ತು. ಆದರೆ, ಈ ಪಂದ್ಯ 1-1 ಅಂತರದ ಸಮಬಲದಿಂದಾಗಿ ಡ್ರಾನಲ್ಲಿ ಅಂತ್ಯಕಂಡಿತ್ತು.
4/ 9
ಪಂದ್ಯ ಮುಗಿದ ಬಳಿಕ ಟೆರ್ವಿಲ್ ಹಾಗೂ ಸೋಟ್ರೆಚ್ ತಂಡದ ಕೆಲ ಆಟಗಾರರ ನಡುವೆ ಜಗಳ ಶುರುವಾಗಿದೆ.
5/ 9
ಈ ಸಂದರ್ಭ ಟೆರ್ವಿಲ್ ತಂಡದ ಆಟಗಾರನೊಬ್ಬ ಜಗಳ ಬಿಡಿಸಲು ಮುಂದಾಗಿದ್ದಾನೆ. ಇದೇವೇಳೆ ಸೋಟ್ರೆಚ್ ತಂಡದ ಆಟಗಾರ ಜಗಳ ಬಿಡಿಸಲು ಬಂದವನ ಮರ್ಮಾಂಗವನ್ನೇ ಕಚ್ಚಿದ್ದಾನೆ.
6/ 9
ಟೆರ್ವಿಲ್ ತಂಡದ ಆಟಗಾರನ ಗಾಯದ ಜಾಗಕ್ಕೆ ಬರೋಬ್ಬರಿ 10 ಹೊಲಿಗೆ ಹಾಕಲಾಗಿದೆಯಂತೆ.
7/ 9
ಇನ್ನೂ ಶಿಶ್ನಕ್ಕೆ ಕಚ್ಚಿದ ಸೋಟ್ರೆಚ್ ತಂಡದ ಆಟಗಾರನನ್ನು ಫುಟ್ಬಾಲ್ ಫೆಡರೇಷನ್ 5 ವರ್ಷ ನಿಷೇಧ ಹೇರಿದೆ.
8/ 9
ಇದರ ಜೊತೆಗೆ ಗಾಯಕ್ಕೆ ತುತ್ತಾದ ಆಟಗಾರನಿಗೂ 6 ತಿಂಗಳವರೆಗೆ ಅಮಾನತು ಮಾಡಲಾಗಿದೆ. ಈ ಜಗಳದಲ್ಲಿ ಇಬ್ಬರ ಪಾಲುದಾರಿಕೆಯೂ ಇತ್ತು ಎಂದು ಹೇಳಲಾಗುತ್ತಿದೆ.
9/ 9
ಪಂದ್ಯ ಮುಗಿದ ಬಳಿಕ ಸ್ಟೇಡಿಯಂನ ಕಾರ್ ಪಾರ್ಕಿಂಗ್ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.