ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ನ ನಂಬರ್ ಒನ್ ಬ್ಯಾಟ್ಸ್ಮನ್. ಆದರೆ ಸ್ಮಿತ್ ಕ್ರಿಕೆಟ್ಗೆ ಕಾಲಿಟ್ಟಿದ್ದು ಲೆಗ್ ಸ್ಪಿನ್ನರ್ ಆಗಿ. ಆರಂಭದಲ್ಲಿ ಸ್ಮಿತ್ ಬ್ಯಾಟ್ ಮಾಡಲು 7,8ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ಆದರೆ, ಇಂದು ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿದ್ದಾರೆ. ಸ್ಮಿತ್ ರೀತಿಯೇ ಅನೇಕ ಕ್ರಿಕೆಟಿಗರು ಬ್ಯಾಟ್ಸ್ಮನ್ ಆಗಿ ಪದಾರ್ಪಣೆ ಮಾಡಿ ಬಳಿಕ ಬೌಲರ್ ಆದ ಅನೇಕ ಉದಾಹರಣೆಗಳಿವೆ.
ಶಾರ್ದೂಲ್ ಠಾಕೂರ್- ಶಾರ್ದೂಲ್ ಠಾಕೂರ್ ಭಾರತ ಎ, ಐಪಿಎಲ್ನಲ್ಲಿ ಮಿಂಚುತ್ತಿರುವ ಆಟಗಾರ. ಟೀಂ ಇಂಡಿಯಾ ಪರವೂ ಆಡಿರುವ ಇವರು 2017 ರಲ್ಲಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿದಿದ್ದರು. ಅಲ್ಲದೆ 2018 ರಲ್ಲಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ಗೂ ಕಾಲಿಟ್ಟು ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡರು. ಆದರೆ, ಇವರು ಕ್ರಿಕೆಟ್ ಜೀವನ ಆರಂಭಿಸಿದ್ದು ಬ್ಯಾಟ್ಸ್ಮನ್ ಆಗಿ. ಅದರಲ್ಲು ಠಾಕೂರ್ 6 ಬಾಲ್ಗೆ 6 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದರು.
ಜೇಮ್ಸ್ ಫ್ರಾಕ್ಲಿನ್- ನ್ಯೂಜಿಲೆಂಡ್ ಟೆಸ್ಟ್ ತಂಡದ ಪ್ರಮುಖ ಬೌಲರ್ ಜೇಮ್ಸ್ ಫ್ರಾಕ್ಲಿನ್ ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ್ದು ಬೌಲರ್ ಆಗಿ. ಅದರಲ್ಲಿ ಯಶಸ್ಸುಕೂಡ ಕಂಡಿದ್ದರು. ನ್ಯೂಜಿಲೆಂಡ್ ಟೆಸ್ಟ್ ತಂಡದಲ್ಲಿ ಈವರೆಗೆ ಹ್ಯಾಟ್ರಿಕ್ ವಿಕೆಟ್ ಕಿತ್ತ ಇಬ್ಬರು ಬೌಲರ್ಗಳ ಪೈಕಿ ಫ್ರಾಕ್ಲಿನ್ ಕೂಡ ಇಬ್ಬರು. ಆದರೆ, ನಂತರ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ಕೊಟ್ಟು ತಂಡದ ಪ್ರಮುಖ ಸ್ಟಾರ್ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದರು.