ವಿಶ್ವಕಪ್ ಎತ್ತಿ ಹಿಡಿದ ಈ 5 ಆಟಗಾರರು ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ!
News18 | June 1, 2019, 8:26 PM IST
1/ 5
ವಿರೇಂದ್ರ ಸೆಹ್ವಾಗ್: 2011ರ ವಿಶ್ವಕಪ್ ತಂಡದಲ್ಲಿ ಭಾರತಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದ ಸೆಹ್ವಾಗ್ ಕೂಡ ಒಮ್ಮೆಯೂ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿಲ್ಲ. 2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿ ಫೈನಲ್ಗೆ ತಲುಪಿದ್ದರಾದರು ಗೆಲುವು ಕಾಣುವಲ್ಲಿ ವಿಫಲರಾದರು.
2/ 5
ಸ್ಟೀವ್ ಸ್ಮಿತ್: 2015ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ವಿಶ್ವಕಪ್ ಗೆಲ್ಲುವಲ್ಲು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಐಪಿಎಲ್ನಲ್ಲಿ ಆರ್ಸಿಬಿ, ರಾಜಸ್ಥಾನ್, ಕೊಚ್ಚಿ, ಪುಣೆ ತಂಡದಲ್ಲಿ ಆಡಿದ್ದ ಇವರು ಒಮ್ಮೆಯೂ ಕಪ್ ಗೆದ್ದಿಲ್ಲ.
3/ 5
ಮಿಚೆಲ್ ಮಾರ್ಶ್: ಆಸೀಸ್ನ ಮತ್ತೊಬ್ಬ ಆಟಗಾರ ಮಾರ್ಶ್ 2015ರ ವಿಶ್ವಕಪ್ನಲ್ಲಿ ಸ್ಟಾರ್ ಬೌಲರ್ ಆಗಿ ಮಿಂಚಿದರು. 2010ರಲ್ಲಿ ಐಪಿಎಲ್ಗೆ ಕಾಲಿಟ್ಟ ಇವರು ಅನೇಕ ತಂಡಗಳಲ್ಲಿ ಆಡಿದ್ದಾರೆ. ಆದರೆ, ಒಮ್ಮೆಯೂ ಪ್ರಶಸ್ತಿ ಗೆದ್ದ ತಂಡದಲ್ಲಿ ಗುರುತಿಸಿಕೊಂಡಿಲ್ಲ.
4/ 5
ಜಹೀರ್ ಖಾನ್: 2011ರ ವಿಶ್ವಕಪ್ನಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಕಿತ್ತ ಬೌಲರ್ ಜಹೀರ್ ಖಾನ್. ಆರ್ಸಿಬಿ ಪರ ಐಪಿಎಲ್ ಅಭಿಯಾನ ಆರಂಭಿಸಿದ ಜಹೀರ್ ಮುಂಬೈ ಹಾಗೂ ಡೆಲ್ಲಿ ಪರ ಆಡಿದ್ದಾರೆ. ಈವರೆಗೆ ಕಪ್ ಎತ್ತಿ ಹಿಡಿಯುವ ಅದೃಷ್ಟ ಇವರಿಗೆ ಸಿಗಲಿಲ್ಲ.
5/ 5
ವಿರಾಟ್ ಕೊಹ್ಲಿ: ಮೊದಲ ಬಾರಿಗೆ ಆಡಿದ ವಿಶ್ವಕಪ್ನಲ್ಲೇ ಗೆಲುವು ಕಂಡ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಮಾತ್ರ ಅದೃಷ್ಟ ಒಲಿಯಲಿಲ್ಲ. ಎಲ್ಲಾ 12 ಸೀಸನ್ನಲ್ಲೂ ಆರ್ಸಿಬಿ ಪರ ಆಡಿದ ಕೊಹ್ಲಿ ಮೂರು ಬಾರಿ ಫೈನಲ್ ತಲುಪಿದ್ದಾರೆ.