Virat Kohli: ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಯಾರು ಗೊತ್ತಾ?
Virat Kohli: ಎರಡು ಬಾರಿ ಟಿ20 ಕ್ರಿಕೆಟ್ನಲ್ಲೂ ಜಂಪಾ ಟೀಮ್ ಇಂಡಿಯಾ ನಾಯಕ ವಿಕೆಟ್ ಪಡೆದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡದ ಕಾರಣ, ಆ ಅವಕಾಶ ದೊರೆತಿಲ್ಲ.
News18 Kannada | May 11, 2020, 1:13 PM IST
1/ 15
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನಿಸ್ಸಂದೇಹವಾಗಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದೇಳಬಹುದು. ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 50 ರನ್ ಸರಾಸರಿ ಹೊಂದಿರುವ ಏಕೈಕ ಬ್ಯಾಟ್ಸ್ಮನ್ ಕಿಂಗ್ ಕೊಹ್ಲಿ.
2/ 15
ಹೀಗಾಗಿಯೇ ಅವರ ಆಟದ ಮೇಲಿನ ಸ್ಥಿರತೆ ಮತ್ತು ಪ್ರಭಾವವನ್ನು ಗಣನೆಗೆ ತೆಗೆದುಕೊಂಡು ಕೊಹ್ಲಿ ವಿಕೆಟ್ ಅತ್ಯಮೂಲ್ಯ ಎಂದು ಎಲ್ಲಾ ಬೌಲರ್ಗಳು ಪರಿಗಣಿಸುತ್ತಾರೆ.
3/ 15
ಇಲ್ಲಿ ವಿರಾಟ್ ಕೊಹ್ಲಿ ಅನೇಕ ಬೌಲರುಗಳ ಮುಂದೆ ಆತ್ಮ ವಿಶ್ವಾಸದಿಂದಲೇ ಬ್ಯಾಟ್ ಬೀಸಿದ್ದರೂ, ಕೆಲ ಬೌಲರ್ಗಳು ಸತತ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಅತೀ ಹೆಚ್ಚು ಬಾರಿ ಟೀಮ್ ಇಂಡಿಯಾ ನಾಯಕನನ್ನು ಔಟ್ ಮಾಡಿದ ಬೌಲರ್ಗಳು ಯಾರು ಎಂದು ನೋಡುವುದಾದರೆ...
4/ 15
#5 ಆ್ಯಡಂ ಜಂಪಾ (ಆಸ್ಟ್ರೇಲಿಯಾ)
5/ 15
ಆಸ್ಟ್ರೇಲಿಯಾ ತಂಡ ಸ್ಪಿನ್ನರ್ ಆ್ಯಡಂ ಜಂಪಾ 7 ಬಾರಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ- ಜಂಪಾ 13 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ 5 ಬಾರಿ ಕೊಹ್ಲಿ ವಿಕೆಟ್ ಉರುಳಿಸಿದ್ದಾರೆ. ಎರಡು ಬಾರಿ ಟಿ20 ಕ್ರಿಕೆಟ್ನಲ್ಲೂ ಜಂಪಾ ಟೀಮ್ ಇಂಡಿಯಾ ನಾಯಕ ವಿಕೆಟ್ ಪಡೆದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡದ ಕಾರಣ, ಆ ಅವಕಾಶ ದೊರೆತಿಲ್ಲ.
6/ 15
#4 ರವಿ ರಾಂಪಾಲ್ - (ವೆಸ್ಟ್ ಇಂಡೀಸ್)
7/ 15
ವೆಸ್ಟ್ ಇಂಡೀಸ್ ತಂಡದ ವೇಗಿ ರವಿ ರಾಂಪಾಲ್ ಕೊಹ್ಲಿಯನ್ನು 7 ಬಾರಿ ಔಟ್ ಮಾಡಿದ್ದರು. ಏಕದಿನ ಕ್ರಿಕೆಟ್ನಲ್ಲಿ ರಾಂಪಾಲ್ರನ್ನು 12 ಪಂದ್ಯಗಳಲ್ಲಿ ಎದುರಿಸಿದ್ದ ಕೊಹ್ಲಿ 6 ಬಾರಿ ವಿಕೆಟ್ ಒಪ್ಪಿಸಿದ್ದರು. ಹಾಗೆಯೇ ಒಂದು ಬಾರಿ ಟೆಸ್ಟ್ನಲ್ಲಿ ಕೊಹ್ಲಿ ರಾಂಪಾಲ್ ಎಸೆತದಲ್ಲಿ ಔಟ್ ಆಗಿದ್ದರು.
8/ 15
#3 ಜೇಮ್ಸ್ ಅಂಡರ್ಸನ್ (ಇಂಗ್ಲೆಂಡ್)
9/ 15
ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಅಂಡರ್ಸನ್ ಹಾಗೂ ಕೊಹ್ಲಿ 17 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ 8 ಬಾರಿ ಕೊಹ್ಲಿಯನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ಅಂಡರ್ಸನ್ ಯಶಸ್ವಿಯಾಗಿದ್ದರು.
10/ 15
#2 ಗ್ರೇಮ್ ಸ್ವಾನ್ (ಇಂಗ್ಲೆಂಡ್)
11/ 15
ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ವಿರಾಟ್ ಕೊಹ್ಲಿಯನ್ನು 8 ಬಾರಿ ಔಟ್ ಮಾಡಿದ್ದಾರೆ. ಇದರಲ್ಲಿ ಮೂರು ಬಾರಿ ಟೆಸ್ಟ್ನಲ್ಲಿ ಔಟ್ ಮಾಡಿದ್ದರೆ, ಏಕದಿನ ಕ್ರಿಕೆಟ್ನಲ್ಲಿ ನಾಲ್ಕು ಬಾರಿ ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಹಾಗೆಯೇ ಒಂದು ಬಾರಿ ಟಿ20 ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿಯನ್ನು ಸ್ವಾನ್ ಔಟ್ ಮಾಡಿದ್ದರು.
12/ 15
#1 ಟಿಮ್ ಸೌಥಿ (ನ್ಯೂಜಿಲೆಂಡ್)
13/ 15
ಅತೀ ಹೆಚ್ಚು ಬಾರಿ ರನ್ ಮಿಷಿನ್ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಹೆಗ್ಗಳಿಕೆ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅವರದ್ದು. ಕೊಹ್ಲಿ-ಸೌಥಿ ಐದು ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದರು, ಇದರಲ್ಲಿ 3 ಬಾರಿ ಟೀಮ್ ಇಂಡಿಯಾ ನಾಯಕನನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
14/ 15
ಹಾಗೆಯೇ 20 ಏಕದಿನ ಪಂದ್ಯಗಳಲ್ಲಿ 6 ಬಾರಿ ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ನ್ಯೂಜಿಲೆಂಡ್ ವೇಗಿ ಯಶಸ್ಸು ಕಂಡಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲೂ ಒಂದು ಬಾರಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಸೌಥಿ ಸಕ್ಸಸ್ ಆಗಿದ್ದಾರೆ.
15/ 15
ಒಟ್ಟಾರೆ 10 ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ನ್ಯೂಜಿಲೆಂಡ್ ತಂಡದ ಬೌಲರ್ ಟಿಮ್ ಸೌಥಿ ರನ್ ಮಿಷಿನ್ ರನ್ ಕಲೆ ಹಾಕುವುದನ್ನು ತಡೆದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.